ಅಳು ಯಾರಿಗೆ ಬರುವುದಿಲ್ಲ ಹೇಳಿ ಎಲ್ಲರಿಗೂ ಅಳು ಬರಲು ಅವರದ್ದೇ ಕಾರಣಗಳಿರಬಹುದು, ಹಲವರಿಗೆ ತಿಳಿದಿರಲಿಕ್ಕಿಲ್ಲ ನಿಮ್ಮ ಕಣ್ಣೀರು ನಿಮ್ಮ ಮಾನಸಿಕ ಹಾಗು ದೈಹಿಕ ಆರೋಗ್ಯವನ್ನು ಸಮತೋಲನವಾಗಿಡಲು ಸಹಾಯಮಾಡುತ್ತದೆ, ಕನೀರಿನಿಂದ ಏನೆಲ್ಲ ಅನುಕೂಲಗಳಿವೆ ಗೊತ್ತಾ ? ಇಲ್ಲಿದೆ ಲೇಖನ..

1. ವಿಷ ಅಂಶಗಳನ್ನು ತೊಡೆದುಹಾಕುತ್ತದೆ.!

Danger skull icon isolated on white background

ಅಳುವುದು ಮಾನಸಿಕವಾಗಿ ನಮ್ಮನ್ನು ಶುದ್ಧಗೊಳಿಸುವುದಲ್ಲದೆ ಅದು ನಮ್ಮ ದೇಹವನ್ನು ಸ್ವಚ್ಛಗೊಳಿಸುತ್ತದೆ. ಒತ್ತಡದಿಂದ ಉತ್ಪತ್ತಿಯಾಗುವ ಕಣ್ಣೀರು ಕಾರ್ಟಿಸೋಲ್ಒ ಎಂಬ ಒತ್ತಡದ ಹೆಚ್ಚಿಸುವ ರಾಸಾಯನಿಕಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ ಕಣ್ಣೀರು ನಮ್ಮ ದೇಹದಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕುವಲ್ಲಿ ಕಾರ್ಯನಿರ್ವಹಿಸುತ್ತದೆ, ಈ ಪ್ರಕ್ರಿಯೆಯು ಮೂತ್ರ ವಿಸರ್ಜನೆ ಮತ್ತು ಬೆವರುವುದು ಸೇರಿದಂತೆ ಇತರ ಎಕ್ಸೋಕ್ರೈನ್ ಕಾರ್ಯಗಳಲ್ಲಿಯೂ ಕಂಡು ಬರುತ್ತದೆ.

2. ಬ್ಯಾಕ್ಟೀರಿಯಾವನ್ನು ಕೊಳ್ಳುತ್ತದೆ.

ಕಣ್ಣಿಗೆ ಬೇಡವಾದ ಬ್ಯಾಕ್ಟೀರಿಯಾವನ್ನು ಕೊಲ್ಲಲು ಕಣ್ಣೀರು ಪ್ರಮುಖ ಪಾತ್ರ ವಹಿಸುತ್ತದೆ. ಕಣ್ಣೀರು ದ್ರವ ಲೈಸೋಜೈಮ್ ಅನ್ನು ಒಳಗೊಂಡಿರುತ್ತದೆ – ಮಾನವ ಹಾಲು, ವೀರ್ಯಗಳಲ್ಲಿಯೂ ಲೈಸೊಜೈಮ್ ಕಂಡುಬರುತ್ತದೆ, ಅದು ಕೇವಲ ಐದು ರಿಂದ 10 ನಿಮಿಷಗಳಲ್ಲಿ 90 ರಿಂದ 95 ರಷ್ಟು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಕಣ್ಣೀರು ಕಣ್ಣಿಗೆ ಒಂದು ರೀತಿಯಾದ ರಕ್ಷಣಾ ತಡೆಗೋಡೆಯಾಗಿ ವರ್ತಿಸುತ್ತದೆ.

3. ನಿಮ್ಮ ದೃಷ್ಟಿ ಮತ್ತಷ್ಟು ಸೂಕ್ಷ್ಮವಾಗುತ್ತದೆ..

ಕಣ್ಣೀರು, ಲ್ಯಾಕ್ರಿಮಲ್ ಗ್ರಂಥಿಗಳಿಂದ ತಯಾರಿಸಲ್ಪಟ್ಟಿದೆ ಇದು ಕಣ್ಣುಗುಡ್ಡೆಗಳು ಮತ್ತು ಕಣ್ಣುರೆಪ್ಪೆಗಳನ್ನು ನಯಗೊಳಿಸುವ ಮೂಲಕ ನಮ್ಮ ದೃಷ್ಟಿಗೋಚರವನ್ನು ಮತ್ತಷ್ಟು ಸೂಕ್ಷ್ಮವಾಗಿಸುತ್ತದೆ. ಕಣ್ಣುಗಳ ಪೊರೆಗಳು ನಿರ್ಜಲೀಕರಣಗೊಂಡಾಗ, ನಮ್ಮ ದೃಷ್ಟಿ ಸ್ವಲ್ಪ ಮಬ್ಬಾಗಬಹುದು ಇಂತಹ ಸಂಧರ್ಭಗಳಲ್ಲಿ ಕಣ್ಣೀರು ನಮ್ಮ ಕಣ್ಣುಗಳನ್ನು ಸ್ವಚ್ಛಗೊಳಿಸುತ್ತದೆ!

4. ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ

ಜೀವನದ ಹಲವಾರು ಸನ್ನಿವೇಶಗಳಲ್ಲಿ ಒತ್ತಡವು ಸಾಮಾನ್ಯ ಇಂತಹ ಸಂಧರ್ಭಗಳಲ್ಲಿ ಕೆಲವರು ಕಣ್ಣೀರು ಹಾಕುವುದನ್ನು ನೋಡಿರುತ್ತೇವೆ! ಇದು ಅವರ ಮಾನಸಿಕ ಒತ್ತಡವನ್ನು ಪರಿಯಾಣಾಮಕಾರಿಯಾಗಿ ನಿಭಾಯಿಸುತ್ತದೆ, ಒತ್ತಡ ನಿವಾರಣೆಯಾದರೆ ದೇಹಾರೋಗ್ಯವೂ ಸರಿ ಹೋಗುತ್ತದೆ. ಅಳುವುದು ದೇಹದಿಂದ ಒತ್ತಡದ ಹಾರ್ಮೋನುಗಳು ಅಥವಾ ಜೀವಾಣುಗಳನ್ನು ಹೊರಹಾಕುವುದರಿಂದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಯಾವುದೇ ಕಾರಣಕ್ಕೂ ಅಳುವನ್ನು ಒತ್ತಾಯಪೂರ್ವಕವಾಗಿ ತಡೆದುಕೊಳ್ಳಬೇಡಿ ಇದು ನಿಮ್ಮ ಮಾನಸಿಕ ಹಾಗು ದೇಹದ ಮೇಲೆ ಗಂಭೀರ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ..!

LEAVE A REPLY

Please enter your comment!
Please enter your name here