ಸಿಹಿಯನ್ನು ಬರಿ ಹಬ್ಬ ಹರಿದಿನಗಳಲ್ಲಿ ತಿನ್ನ ಬೇಕು ಅಂತೇನಿಲ್ಲ ನಮಗೆ ಯಾವಾಗ ತಿನ್ನ ಬೇಕು ಅನ್ನಿಸುತ್ತದೆಯೋ ಆ ಸಮಯದಲ್ಲಿ ಮನೆಯಲ್ಲೇ ತಯಾರಿಸಿ ಸೇವಿಸಬಹುದು… ಈ ಆರೋಗ್ಯಕರವಾದ ಸಬ್ಬಕ್ಕಿ ಪಾಯಸ ಹೇಗೆ ಮಾಡುವುದು ಅನ್ನೋದನ್ನ ತಿಳಿಸುತ್ತೇವೆ ನೋಡಿ…

ಬೇಕಾಗುವ ಸಾಮಗ್ರಿಗಳು

ಸಬ್ಬಕ್ಕಿ – ಅರ್ಧ ಕಪ್

ಸಕ್ಕರೆ – ಅರ್ಧ ಕಪ್

ಹಾಲು –3 – 4 ಕಪ್

ದ್ರಾಕ್ಷಿ -10 -12

ಗೋಡಂಬಿ 8 – 10

ಏಲಕ್ಕಿ ಪುಡಿ – ಸ್ವಲ್ಪ

ತಯಾರಿಸುವ ವಿಧಾನ

ಮೊದಲು ಒಂದು ಪತ್ರೆಗೆ ಸಬ್ಬಕ್ಕಿ ಹಾಕಿ ಅದಕ್ಕೆ ೧ ಕಪ್ ನೀರು ಹಾಕಿ ೩೦ ನಿಮಿಷ ನೆನೆಯಲು ಬಿಡಿ.
ನಂತರ ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಅದಕ್ಕೆ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಕರಿದು ತೆಗೆಯಿರಿ.

ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಹಾಲು ಹಾಕಿ ನಂತರ ನೆನೆಸಿದ ಸಬ್ಬಕ್ಕಿ(ನೀರಿನ ಸಮೇತ) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಹಾಲು ತಳ ಹಿಡಿಯದಂತೆ ಆಗಾಗ ತಿರುವುತ್ತಾ ಇರಬೇಕು. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಸಬ್ಬಕ್ಕಿ ಚೆನ್ನಾಗಿ ಬೆಂದು ಹಾಲು ಗಟ್ಟಿಯಾದಾಗ ಅದಕ್ಕೆ ಕರಿದ ದ್ರಾಕ್ಷಿ, ಗೋಡಂಬಿ ಹಾಕಿ 5 ನಿಮಿಷ ಕುದಿಸಿ
ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿದ್ರೆ ಸಬ್ಬಕ್ಕಿ ಪಾಯಸ ರೆಡಿ.

LEAVE A REPLY

Please enter your comment!
Please enter your name here