ಟೂತ್ ಪೇಸ್ಟನ್ನು ನೀವು ನಿಮ್ಮ ನಿಮ್ಮ ಮನೆಯ ಹಲವು ಪರಿಕರಗಳನ್ನು ಶುಚಿಗೊಳಿಸಲೂ ಬಳಸಬಹುದಾಗಿದೆ. ಹೀಗೆ ಈ ಸುದ್ದಿ ಓದಿ.

ಟೂತ್ ಪೇಸ್ಟ್ ಬಳಸಿ ಕಾರಿನ ಮುಂಬಾಗದ ಹೆಡ್ ಲೈಟ್ ಗಳನ್ನು ಸ್ವಚ್ಛಗೊಳಿಸಬಹುದು ಟೂತ್ಪೇಸ್ಟ್ ನಲ್ಲಿರುವ
ಅಪಘರ್ಷಕವು ಗಾಜನ್ನು ಹೊಳೆಯುವಂತೆ ಮಾಡುತ್ತದೆ.

ನೀವು ಫಿಯೋನಾ ವಾದಕರಾಗಿದ್ದರೆ ನಿಮ್ಮ ಫಿಯೋನಾ ಕೀಗಳು ಕ್ರಮೇಣ ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಾಗಿರುತ್ತವೆ, ಟೂತ್ ಪೇಸ್ಟ್ ಹಾಗು ಮೃದು ಬಟ್ಟೆಯನ್ನು ಬಳಸಿ ಪಿಯೋನೋ ಕೀಲಿಗಳನ್ನು ಒರೆಸುವುದರಿಂದ ಫಿಯೋನಾ ಕೀಗಳು ನೈಜ ಸ್ಥಿತಿಗೆ ಮರಳುತ್ತವೆ..!

ನೀವು ಬಳಸುವ ಕ್ಯಾನ್ವಾಸ್ ಶೂನಲ್ಲಿನ ಬಿಳಿ ಭಾಗವು ಕಾಲಕ್ರಮೇಣ ಅಶುಬ್ರ ಬಣ್ಣಕ್ಕೆ ತಿರುಗುವುದು ಮಾಮೂಲಿ ಆದರೆ ಟೂತ್ ಪೇಸ್ಟ್ ಹಾಗೂ ಅಲ್ಪ ಪ್ರಮಾಣದ ನೀರನ್ನು ಬೆರಸಿ ಟೂತ್ ಬ್ರಷ್ ಬಳಸಿ ಗಲೀಜಾಗಿರುವ ಜಾಗಕ್ಕೆ ನಯವಾಗಿ ತಿಕ್ಕುವುದರಿಂದ ಕೊಲೆಯಾಗಿರುವ ಭಾಗವು ಶುಭ್ರಗೊಳ್ಳುತ್ತದೆ.

ನಮ್ಮ ಭಾರತೀಯರು ಆಭರಣ ಪ್ರೀಯರು ನಾವು ಆಭರಣವನ್ನು ನಿತ್ಯವೂ ಬಳಸುವುದರಿಂದ ಅವುಗಳು ತಮ್ಮ ಹೊಳಪನ್ನು ಕಳೆದುಕೊಳ್ಳುವುದು ನಿಜ, ಟೂತ್ ಬ್ರಷ್ ಹಾಗು ಟೂತ್ ಪೇಸ್ಟ್ ಬಳಸಿ ಆಭರಣವನ್ನು ಶುಚಿಗೊಳಿಸಿದರೆ ಆಭರಣಗಳು ಕಳೆದುಕೊಂಡಿರುವ ಹೊಳಪನ್ನು ಮತ್ತೆ ಗಳಿಸಿಕೊಳ್ಳುತ್ತವೆ.

ಒಂದು ವೇಳೆ ನಿಮ್ಮ ಮನೆಯ ಐರನ್ ಬಾಕ್ಸ್ (IRON BOX ) ತಳಬಾಗದಲ್ಲಿ ಜಿಡ್ಡುಗಟ್ಟಿದ್ದಾರೆ / ಕಪ್ಪಾಗಿದ್ದರೆ ಟೂತ್ಪೇಸ್ಟ್ ಹಾಗು ಅಲ್ಪಪ್ರಮಾಣದ ನೀರನ್ನು ಬಳಸಿ ನಯವಾದ ಬಟ್ಟೆಯಿಂದ ಮೂರು ನಾಳು ಬಾರಿ ಒರೆಸಿದರೆ ಹಿಂಬದಿಯಲ್ಲಿರುವ ಕಲೆಗಳು ಮಾಯವಾಗುತ್ತವೆ.

ಸಿಂಕ್ ನಲ್ಲಿರುವ ಸ್ಟೀಲ್ ನಲ್ಲಿಗೆ ಉಪ್ಪಿನ ಕಠಿಣ ಕಲೆಯು ಕಾಡುತ್ತಿದ್ದರೆ ಎರಡು ಮೂರು ದಿನಕ್ಕೊಮ್ಮೆ ಟೂತ್ಪೇಸ್ಟ್ ನೊಂದಿದೆ ಶುಭ್ರಗೊಳಿಸಿ.

ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಸಣ್ಣ ಪುಟ್ಟ Scratchಗಳಿದ್ದರೆ ಟೂತ್ ಪೇಸ್ಟ್ ನಿಂದ ಶುಭ್ರಗೊಳಿಸಿದರೆ ಸಣ್ಣ ಪುಟ್ಟ Scratch ಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತವೆ.

LEAVE A REPLY

Please enter your comment!
Please enter your name here