ಚಿತ್ರದುರ್ಗವು ಕರ್ನಾಟಕದ ಕೋಟೆ ಕೊತ್ತಲಗಳ ನಗರಿಯೆಂದೇ ಪ್ರಖ್ಯಾತಿ! ದಿನನಿತ್ಯವೂ ಸಾವಿರಾರು ಜನ ದುರ್ಗದ ಕೋಟೆ ವೀಕ್ಷಣೆಗೆಂದೇ ಬರುತ್ತಾರೆ, ಹಲವರು ದುರ್ಗದ ಬೇರೆ ಜಾಗಗಳಿಗೆ ಮಾಹಿತಿಯ ಕೊರತೆಯಿಂದಾಗಿ ಭೇಟಿ ನೀಡಿರಲು ಸಾದ್ಯವಾಗಿರದೇ ಇರಬಹುದು ಅಂತವರಿಗೆ ಈ ವಿಶೇಷ ಅಂಕಣ ಮಾಹಿತಿಯ ಕುಂಚವಾಗಲಿದೆ..

ವಾಣಿವಿಲಾಸಸಾಗರ:

ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನಲ್ಲಿರುವ ಈ ಆಣೆಕಟ್ಟು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ವೇದಾವತಿಯು ಚಿತ್ರದುರ್ಗದ ಪ್ರಮುಖ ನದಿಯು ಹೌದು. ಚಿತ್ರದುರ್ಗದಿಂದ ಸುಮಾರು 40 KM ದೂರದಲ್ಲಿರುವ ವಾಣೀವಿಲಾಸಸಾಗರ ಕರ್ನಾಟಕದ ಒಂದು ಅತ್ಯಂತ  ಹಳೆಯ ಆಣೆಕಟ್ಟು ಎಂದೂ ಪ್ರಸಿದ್ದಿ ಹೊಂದಿದೆ.

ಚಂದ್ರವಳ್ಳಿ:

ಚಂದ್ರವಳ್ಳಿಯು ಚಿತ್ರದುರ್ಗದ ಹೊರವಲಯದಲ್ಲಿರುವ ಒಂದು ಪುರಾತನ ಜಾಗ, ಇಲ್ಲಿ ನೀರಿನ ಸರೋವರ, ಪುರಾತನ ಗುಹೆಗಳು ಹಾಗೂ ಭೈರವೇಶ್ವರ ದೇವಾಲಯ ಅತ್ಯಂತ ಪ್ರಸಿದ್ದಿ. ಚಂದ್ರವಳ್ಳಿಯಲ್ಲಿ ಕದಂಬ, ಹೊಯ್ಸಳ ಹಾಗು ಶಾತವಾಹನರ ಶಿಲಾಶಾಸನಗಳು ಕಾಣಸಿಗುತ್ತವೆ.

ಮುರುಘಾಮಠ:

ಚಿತ್ರದುರ್ಗದ ಬಹುಮುಖ್ಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಮುರುಘಾಮಠವೂ ಒಂದು, ಮುರುಘರಾಜೇಂದ್ರರು ಮುರುಘಾ ಮಠದ ಸ್ಥಾಪಕರು. ಚಿತ್ರದುರ್ಗದ ನಾಯಕರ ಆಳ್ವಿಕೆಯಲ್ಲಿ ಮುರುಘಾಮಠದ ಪೀಠಾಧಿಪತಿಗಳೇ ರಾಜಗುರುಗಳಾಗಿರುತ್ತಿದ್ದರು. ಮುರುಘಾ ಮಠವು ಅತ್ಯಂತ ವಿಶಾಲವಾಗಿದ್ದು ಸುಂದರ ಉದ್ಯಾನವೊಳಗೊಂಡಿದೆ, ಇದು ಒಂದು ದಿನದ ಪ್ರವಾಸಕ್ಕೆ ಹೇಳಿಮಾಡಿಸಿದ ಜಾಗ.

ಜೋಗಿಮಟ್ಟಿ:

ಜೋಗಿಮಟ್ಟಿಯು ಒಂದು ಅಪರೂಪದ ಸಸ್ಯ ಪ್ರಭೇಧವನ್ನು ಒಳಗೊಂಡಿರುವ ಪ್ರದೇಶ, ಇಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಪವನ ವಿದ್ಯುತ್ ಉತ್ಪಾದಿಸಲಾಗುತ್ತದೆ.. ಒಂದು ದಿನದ ಸಣ್ಣ ಚಾರಣಕ್ಕೆ ಹೇಳಿ ಮಾಡಿಸಿದ ಜಾಗ ನಮ್ಮ ಜೋಗಿಮಟ್ಟಿ.

LEAVE A REPLY

Please enter your comment!
Please enter your name here