ಹಿಂದಿನ ಕಾಲದಲ್ಲಿ ಸಂಜೆಯ ಹೊತ್ತು “ಶುಭಂ ಕರೋತಿ” ಎನ್ನುವ ಸಂಜೆಯ ಪ್ರಾರ್ಥನೆಯನ್ನ ಮಾಡ್ತಿದ್ರು , ಆದ್ರೆ ಈಗಿನ ಮಕ್ಕಳಿಗೆ ಸಂಜೆಯ ಹೊತ್ತು ಟಿ. ವಿ . ನೋಡುವುದಕ್ಕೆ ಸಮಯವಿರುವುದಿಲ್ಲ . ಎಲ್ಲೋ ಹಿಂದೂಗಳು  ನಮ್ಮ ಹಿಂದೂ ಸಂಸ್ಕೃತಿಇಂದ ಆಚಾರಧರ್ಮಗಳಿಂದ ದೂರ ಸರಿಯುತ್ತಿದೇವೆ ಎನ್ನಿಸುತ್ತಿದೆ.
ಆಚಾರಧರ್ಮಗಳನ್ನ ಪಾಲಿಸುವುದೇ ಆಧ್ಯತ್ಮೀಕತೆಗೆ ಅಡಿಪಾಯವಾಗಿದೆ.

ಸಂಧಿಕಾಲವೆಂದರೆ ಸೂರ್ಯೋದಯಕ್ಕೂ ಮೊದಲು , ಸೂರ್ಯಾಸ್ತದ ನಂತರ ೪೮ ನಿಮಿಷಗಳ ಸಮಯವನ್ನು ಸಂಧಿಕಾಲವೆಂದು ಅಥವಾ ಪರ್ವಕಾಲವೆಂದು  ಕರೆಯಲಾಗುತ್ತದೆ.

ಸಂಧಿಕಾಲ / ಸಂಜೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ಉಚಿತ ವಿಷಯಗಳು :

1. ಮನೆಯಲ್ಲಿ ಸಂಜೆಯ ಸಮಯದಲ್ಲಿ ಧೂಪದ್ರವ್ಯ , ಸಾಂಬ್ರಾಣಿ ಇತ್ಯಾದಿಗಳನ್ನು ಹಚ್ಚುವುದು .
ಇದರಿಂದ ಮನೆಯ ಆವರಣವು ಶುಧ್ಹಿಗೊಳ್ಳುವುದಲ್ಲದೆ ಮನೆಯ ಜನರ ಬಟ್ಟೆಗಳು ಕೂಡ ಶುದ್ಧಿಯಾಗುತ್ತವೆ .

2. ಸಂಜೆ ಮನೆಯ ದೇವರ ಮನೆಯಲ್ಲಿ ದೇವರಿಗೆ ದೀಪ ಹಚ್ಚಿದ ನಂತರ ದೇವರಿಗೆ ತಲೆಬಾಗಿ ನಮಸ್ಕರಿಸಬೇಕು :
ಸಂಧ್ಯಾವಂದನೆಯನ್ನು ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚುವುದರ ಜೊತೆಗೆ ಅಂಗಳದಲ್ಲಿರುವ ತುಳಸಿ ಗಿಡಕ್ಕೂ ದೀಪವನ್ನು ಸಮರ್ಪಿಸಬೇಕು. ದೇವರಮನೆಯಲ್ಲಿ ದೇವರಿಗಾಗಿ ಹಚ್ಚಿದ ದೀಪವು ಸದಾಕಾಲ ಅಂದರೆ ದಿನದ ೨೪ ಗಂಟೆಗಳು ಉರಿಯುವಂತೆ ನೋಡಿಕೊಳ್ಳಬೇಕು ಅಕಸ್ಮಾತಾಗಿ ಇದು ಸಾಧ್ಯವಿಲ್ಲದಿದ್ದರೆ , ಸಂಜೆಯ ಸಮಯದಲ್ಲಿ ಮತ್ತೆ ದೀಪಗಳನ್ನು ಶುಧ್ಹಿ ಮಾಡಿ ದೇವರಿಗೆ ದೀಪ ಸಮರ್ಪಿಸಬೇಕು.

3.ಸಂಜೆಯ ಸಮಯದಲ್ಲಿ ತುಳಸಿ ಗಿಡದ ಬಳಿ ದೀಪ ಹಚ್ಚಲು ವೈಜ್ಞಾನಿಕ ಕಾರಣ :

ಸಂಜೆಯ ಹೊತ್ತು ದೇವರ ಬಳಿ ಹಾಗೂ ತುಳಸಿ ಗಿಡದ ಬಳಿ ಎಣ್ಣೆಯ ದೀಪ ಹಚ್ಚುವುದಾರರಿಂದ ಸುರಕ್ಷಿತವಾದ ಸಾತ್ವಿಕ ಅಲೆಗಳ ಕೋಶವೊಂದು ನಿರ್ಮಾಣವಾಗುತ್ತದೆ . ಇದರಿಂದಾಗಿ ಮನೆಯಲ್ಲಿರುವವರಿಗೆ ವಾತಾವರ್ಣದಲ್ಲಿ ಇರುವ ಯಾವುದೇ ನಕಾರಾತ್ಮಕ ಶಕ್ತಿಯ  ಅಲೆಗಳಿಂದ ಯಾವುದೇ ಸಂಕಷ್ಟಗಳು ಬರದಂತೆ ಸುರಕ್ಷಿತವಾಗಿರುತ್ತಾರೆ. ಇದೆ ಕಾರಣಕ್ಕಾಗಿ ಸಾಕಷ್ಟು ಗ್ರಂಥಗಳಲ್ಲಿ ಸಂಜೆಯ ಒಳಗೆ ನಾವೆಲ್ಲರೂ ಮನೆ ಸೇರಬೇಕೆಂದು ಹೇಳಲಾಗಿದೆ, ಯಾವುದೇ  ರೀತಿಯ ನಕಾರಾತ್ಮಕ ಶಕ್ತಿಗಳಿಂದ ನಮಗೆ ತೊಂದರೆಯಾಗದಿರಲೆಂದು ಹೀಗೆ ಹೇಳಲಾಗಿದೆ.

4. ವೈಜ್ಞಾನಿಕವಾಗಿ ಶಿವನ ಭಕ್ತರಾದ ಅಘೋರಿಗಳು ಸಂಜೆಯ ಸಮಯದಲ್ಲಿ ಬರುವ ನಕಾರಾತ್ಮಕ ಶಕ್ತಿಗಳನ್ನು ನಿಯಂತ್ರಿಸುತ್ತಾರೆ ಮಾತು ಈ ಮೂಲಕ ಕೆಟ್ಟ ಕೆಲಸಗಳು ಮಾಡಲಾಗುತ್ತದೆ. ಆದರಿಂದ ಈ ಸಮಯವನ್ನು ನಾಶ ಅಥವಾ ಸಂಕಷ್ಟದ ಸಮಯವೆಂದು ಹೇಳಲಾಗಿದೆ.

5.ದೇವರ ದೀಪವನ್ನು ಹಚ್ಚಿದ ಮೇಲೆ ದೇವರ ಶ್ಲೋಕಗಳು, ಸ್ತೋತ್ರಗಳನ್ನು ಹೇಳುವುದರ ಮೂಲಕ ದೇವರಿಗೆ ಪೂಜಿಸಿ ನಮಸ್ಕರಿಸಬೇಕು

6. ಶ್ಲೋಕಗಳನ್ನು ಹೇಳುವುದರಿಂದ ನಮ್ಮ ಮನಸ್ಸಿನಲ್ಲಿ , ವಾತಾವರಣದಲ್ಲಿ ಒಳ್ಳೆಯ ಅಂದರೆ ಸಕಾರಾತ್ಮಕ ಶಕ್ತಿಗಳು ಹರಿದಾಡಿ ನಮಗೆ  ಒಳಿತನ್ನು ಮಾಡುತ್ತವೆ. ಸಂಧ್ಯಾ ಕಾಲದಲ್ಲಿ ದೇವರಿಗೆ ದೀಪವನ್ನು ಅರ್ಪಿಸಿ ನಂತರ ದೇವರಿಗೆ ಆರತಿಯನ್ನು ಬೆಳಗಿ , ದೇವರ ನಾಮಸ್ಮರಣೆ, ಹಾಡುಗಳನ್ನು ಹೇಳುವುದರ ಮುಖಾಂತರ ದೇವರಿಗೆ ಶ್ರದ್ಧೆ ಇಂದ ಪ್ರಾರ್ಥಿಸಬೇಕು.

LEAVE A REPLY

Please enter your comment!
Please enter your name here