ದೇವಸ್ಥಾನಗಳನ್ನು ನಾವು ನಂಬಿಕೆಯೆ ಕೇಂದ್ರಬಿಂದುಗಳೆಂದು ಕರೆಯುತ್ತೇವೆ. ನಾವು ನಂಬುವ ದೇವರು ನಮ್ಮ ಕೈಬಿಡುವುದಿಲ್ಲ, ಪ್ರತಿಯೊಂದು ಸ್ಥರದಲ್ಲೂ ನಮ್ಮೊಂದಿಗೆ ಇರುತ್ತಾರೆ, ನಮ್ಮನ್ನು ಸಲುತ್ತಾರೆ ಎಂಬುದೇ ನಮ್ಮ ಜೀವನವನ್ನು ಮುನ್ನಡೆಸುವ ಶಕ್ತಿಯಾಗಿ ಕಾಯುತ್ತದೆ. ಭಾರತದಲ್ಲಿ ದೈವ ಭಕ್ತಿ ಹೇಗಿದೆ ಎಂದರೆ ಕಲ್ಲಿಗೂ ಪೂಜೆ ಮಾಡುವ ಮುದ್ಧ ಭಕ್ತಿಯಂತಹದ್ದು. ಬರಿಯ ಕಲ್ಲಿಗೆ ಕುಂಕುಮ ಅರಿಶಿನ ಹೂಗಳಿಂದ ಅಲಂಕಾರ ಮಾಡಿದರೆ ಸಾಕು ಒಂದು ದಿನ ಆ ಕಲ್ಲಿಗಾಗಿ ದೇವಸ್ಥಾನವೇ ನಿರ್ಮಾಣವಾಗುತ್ತದೆ. ಹೀಗೆ ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ದೇವರಿದ್ದಾರೆ ಎಂಬ ನಂಬಿಕೆ ನಮ್ಮದಾಗಿದೆ.ಆದರೆ ದೇಶದಲ್ಲಿರುವ ಮಂದಿರಗಳಲ್ಲಿ ಹೆಚ್ಚು ವಿಚಿತ್ರ ಎನಿಸುವ ಗುಡಿಗಳ ಬಗ್ಗೆ ಇಂದಿನ ಲೇಖನದಲ್ಲಿ ನಾವು ಮಾತನಾಡುತ್ತಿದ್ದು ಇಲ್ಲಿನ ವಿಶಿಷ್ಟ ಆಚರಣೆ ಎಲ್ಲರ ಮನವನ್ನು ಸೆಳೆಯುತ್ತಿದೆ. ಹೌದು, ವಿಮಾನಗಳನ್ನೇ ದೇವರಿಗೆ ಕೊಡುಗೆಯಾಗಿ ನೀಡುವುದು, ಗಡಿಯಾರವನ್ನು ನೀಡುವುದು, ಬೀಗಗಳ ಅರ್ಪಣೆ ಹೀಗೆ ತಮ್ಮ ಮನಸ್ಸಿನ ಕೋರಿಕೆಯನ್ನು ಪೂರೈಸುವುದಕ್ಕಾಗಿ ಭಕ್ತರು ಬೇರೆ ಬೇರೆ ರೂಪದಲ್ಲಿ ವಸ್ತುಗಳನ್ನು ಅರ್ಪಿಸುತ್ತಾರೆ..

ನರೇಂದ್ರ ಮೋದಿ ದೇವಸ್ಥಾನ ಗುಜರಾತ್

ಅಹಮದಾಬಾದ್‌ನಿಂದ 130 ಕಿಮೀ ದೂರದಲ್ಲಿ ಸ್ಥಿತವಾಗಿರುವ ಈ ದೇವಸ್ಥಾನವನ್ನು ನರೇಂದ್ರ ಮೋದಿ ದೇವಸ್ಥಾನ ಎಂದೇ ಕರೆಯುತ್ತಾರೆ. ಧನ ಸಹಾಯದ ಮೂಲಕ ಈ ದೇವಳವನ್ನು ಕಟ್ಟಲಾಗಿದೆ. ಅದೂ ಮೋದಿ ಭಕ್ತರೇ ಚಂದಾ ಸಂಗ್ರಹಿಸಿ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ.

ಬಾಲಾಜಿ ಮಂದಿರ ಮೆಹಂದಿಪುರ, ರಾಜಸ್ಥಾನ

ಬರಿಯ ಅಭಿಷ್ಟೇಯನ್ನು ಹೊಂದಿರುವ ಭಕ್ತರುಗಳು ಮಾತ್ರವಲ್ಲದೆ, ದೆವ್ವಗಳ ಉಪಟಳವನ್ನು ಹೊಂದಿರುವವರೂ ಈ ದೇವಸ್ಥಾನಕ್ಕೆ ಬಂದು ತೊಂದರೆಯಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಬೀಗವನ್ನು ಇಲ್ಲಿ ಕಾಣಿಕೆಯ ರೂಪದಲ್ಲಿ ಅರ್ಪಣೆ ಮಾಡಲಾಗುತ್ತದೆ. ದುಷ್ಟ ಶಕ್ತಿಗಳನ್ನು ಬೀಗದಲ್ಲಿ ಬಂಧಿಸಿ ಇಲ್ಲಿ ಅರ್ಪಿಸಲಾಗುತ್ತದೆ.

ವಿಸ್ಕಿ ದೇವಿ, ಕಾಲ್ ಭೈರವ್ ಮಂದಿರ್ ಉಜ್ಜಯಿನಿ

ತಮ್ಮೆಲ್ಲಾ ಕಷ್ಟಗಳಿಗೆ ಈ ದೇವಸ್ಥಾನವನ್ನು ಭರವಸೆಯಾಗಿ ಭಕ್ತರು ಕಾಣುತ್ತಾರೆ. ನಗರವನ್ನು ಕಾಯುವ ಕಾಲ ಭೈರವನ ದೇವಸ್ಥಾನ ಇದಾಗಿದ್ದು, ನೂರಾರು ಜನರು ದೇವಳಕ್ಕೆ ಭೇಟಿಯನ್ನು ನೀಡುತ್ತಾರೆ. ದೇವರಿಗೆ ಪ್ರಿಯವಾಗಿ ವಿಸ್ಕಿಯನ್ನು ಅರ್ಪಿಸಲಾಗುತ್ತದೆ.

ಬ್ರಹ್ಮ ಬಾಬಾ ದೇವಸ್ಥಾನ ಜಾನ್‌ಪುರ್

ಇಲ್ಲಿನ ಭಕ್ತರು ಮರವನ್ನು ಪೂಜಿಸುತ್ತಾರೆ. ಗಡಿಯಾರವನ್ನು ಮರಕ್ಕೆ ಕಟ್ಟಿ ಇವರು ಬ್ರಹ್ಮದೇವರಿಗೆ ಹರಕೆಯನ್ನು ಹೇಳುತ್ತಾರೆ ಮತ್ತು ಆ ದೇವರು ಇವರ ಅಭಿಲಾಷೆಯನ್ನು ಪೂರೈಸುತ್ತಾರೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಈ ದೇವಸ್ಥಾನದ ಇತಿಹಾಸದ ಪ್ರಕಾರ ಇದು 30 ವರ್ಷಗಳಷ್ಟು ಹಳೆಯದಾಗಿದ್ದು ಒಬ್ಬ ಟ್ರಕ್ ಚಾಲಕ ಟ್ರಕ್ ಓಡಿಸುವುದನ್ನು ಕಲಿಯಬೇಕೆಂಬ ಆಸೆ ಇತ್ತು. ಆತ ಆಲದ ಮರಕ್ಕೆ ಗಡಿಯಾರವನ್ನು ಕಟ್ಟಿ ತನ್ನ ಅಭಿಷ್ಟೇಯನ್ನು ಕೋರಿಕೊಂಡ. ಅಂತೆಯೇ ಆತ ಟ್ರಕ್ ಕಲಿಯುತ್ತಾನೆ.

ಕಾರ್ಣಿ ಮಾತಾ ಮಂದಿರ್, ರಾಜಸ್ಥಾನ

ಈ ದೇವಸ್ಥಾನವನ್ನು ಇಲಿಗಳ ಮಂದಿರವೆಂದೂ ಕರೆಯುತ್ತಾರೆ. ದೆಶ್ನೋಕ್‌ನ ಸಣ್ಣ ಹಳ್ಳಿಯಲ್ಲಿ ಈ ದೇವಳವಿದೆ. ಇಲ್ಲಿ 20,000 ಕ್ಕಿಂತಲೂ ಅಧಿಕ ಇಲಿಗಳು ವಾಸ ಮಾಡುತ್ತವೆ. ಕಾರ್ಣಿ ದೇವಿಗೆ ದೇವಸ್ಥಾನವನ್ನು ಅರ್ಪಿಸಲಾಗಿದೆ. ಬಿಳಿ ಇಲಿಯನ್ನು ದೇವಳದಲ್ಲಿ ನೋಡುವುದು ಅತಿ ಮಹತ್ವದ್ದಾಗಿದೆ. ದೊಡ್ಡ ಪಾತ್ರೆಯಲ್ಲಿ ಇಲಿಗಳಿಗೆ ಹಾಲನ್ನು ಅರ್ಪಿಸಲಾಗುತ್ತದೆ.

ಏರೋಪ್ಲೇನ್ ಗುರುದ್ವಾರ್, ಜಲಂಧರ್

ಶಹೀದ್ ಬಾಬಾ ನಿಹಾಲ್ ಸಿಂಗ್ ಅವರ ಸ್ಮರಣೆಗಾಗಿ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಜಲಂಧರ್ ಸಮೀಪ ತಲಿಹಾನ್ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಇಲ್ಲಿನ ನಿರ್ವಾಹಕರು ಹೇಳುವಂತೆ ದೇವಸ್ಥಾನದ ಉಗಮ ಅವರಿಗೆ ತಿಳಿದಿಲ್ಲವಂತೆ. ಆದರೆ ಅವರಿಗೆ ಇದನ್ನು ಮುಚ್ಚಲು ಮನಸ್ಸಿಲ್ಲ. ದೇವಸ್ಥಾನದಲ್ಲಿ ವಿವಿಧ ಮಾದರಿಯ ವಿಮಾನಗಳನ್ನು ನೋಡಬಹುದು. ಇದು ಭಕ್ತರು ನೀಡಿರುವ ಕಾಣಿಕೆಯಾಗಿದೆ.

ನಾಗರಾಜ ದೇವಸ್ಥಾನ

ಮನ್ನಾರ್‌ಶಾಲಾ ಕೇರಳ ನಾಗದೇವರು ಇರುವ ದೊಡ್ಡ ದೇವಸ್ಥಾನ ಇದಾಗಿದೆ. ಮಕ್ಕಳಾಗದ ದಂಪತಿಗಳು ಇಲ್ಲಿ ಬೇಡಿಕೊಂಡರೆ ಅವರ ಇಷ್ಟಗಳು ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ದೇವರಿಗೆ ಹಾವಿನ ಚಿತ್ರವಿರುವ ಪ್ರತಿಮೆಗಳನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ. ದಿನಕ್ಕೆ 100 ಕ್ಕಿಂತಲೂ ಹೆಚ್ಚಿನ ಚಿತ್ರಗಳನ್ನು ಇಲ್ಲಿ ಕಾಣಿಕೆಯಾಗಿ ಅರ್ಪಿಸಲಾಗುತ್ತದೆ.

LEAVE A REPLY

Please enter your comment!
Please enter your name here