ಈ ಊಸರವಳ್ಳಿಗಳನ್ನ ಹಲ್ಲಿಗಳು ಅಂತ ಕರೆಯುತ್ತಾರೆ. ಇವು  ಕೆಮಿಲಿ ಓಣಿದೆ ಅನ್ನುವ ಒಂದು ವೈಜ್ಞಾನಿಕ ಕುಟುಂಬಕ್ಕೆ ಸೇರುತ್ತವೆ ಬಣ್ಣ ಬದಲಾಯಿಸುವ ಸಾಮರ್ಥ್ಯದೊಂದಿಗೆ ಊಸರವಳ್ಳಿಗಳಿಗೆ ಇನ್ನೂ ಹಲವಾರು ಸಾಮರ್ಥ್ಯಗಳಿವೆ. ಗಿಳಿಗಳಂತೆ ಇವು ಕಾಲನ್ನು ದೊಡ್ಡದಾಗಿ ಮಾಡಿಕೊಳ್ಳುತ್ತವೆ , ಉದ್ದನೆಯ ನಳಿಗೆ ಮತ್ತು ಬಾಲದ ಜೊತೆಗೆ ಎರಡು ಬೇರೆ ದಿಕ್ಕುಗಳಲ್ಲಿ ಒಂದೇ ಬಾರಿಗೆ ತಮ್ಮ ಕಣ್ಣುಗಳಲ್ಲಿ ನೋಡುವ ಸಾಮರ್ಥ್ಯವನ್ನು ಹೊಂದಿದೆ.

ಊಸರವಳ್ಳಿಗಳು ಹಲವಾರು ಬಣ್ಣಗಳಲ್ಲಿ ಇರುತ್ತವೆ ಗುಲಾಬಿ, ನೀಲಿ, ಹಳದಿ, ಕಿತ್ತಳೆ, ಹಸಿರು, ಹಳದಿ, ಹಾಗೂ ಟರ್ಕ್ವೈಸ್ ಬಣ್ಣಗಳಲ್ಲಿ ನಾವು ಕಾಣ ಬಹುದು. ಇವನ್ನೂ ಆಫ್ರಿಕಾ, ಯುರೋಪ್, ಏಶಿಯಾ ಮತ್ತು ನಾರ್ತ್ ಅಮೇರಿಕಗಳಲ್ಲಿ ಹೆಚ್ಚಾಗಿ ಕಾಣಬಹುದು.
160 ಹೆಚ್ಚಿನ ಬೇರೆ ಬೇರೆ ಜಾತಿಯ , ವರ್ಗದ ಊಸರವಳ್ಳಿಗಳನ್ನು ನಾವು ಮರುಭೂಮಿಯ ಜೊತೆಗೆ ಮಳೆಕಾಡುಗಳಲ್ಲಿಯೂ ಕಾಣಬಹುದು.

ಸಾಕಷ್ಟು ಜನ ಊಸರವಳ್ಳಿಗಳು ತಮ್ಮನ್ನು ತಾವು ಪರಭಕ್ಷಕನಿಂದ ತಪ್ಪಿಸಿಕೊಳ್ಳಲಿಕ್ಕೆ ಮತ್ತು, ವೇಷ ಬದಲಿಸಿ ಮರೆಮಾಚಿಕೊಳ್ಳಲಿಕ್ಕೆ ಬಣ್ಣ ಬದಲಿಸುತ್ತವೆ ಎಂದು ನಂಬುತ್ತಾರೆ . ಏನೇ ಆದರೂ ಊಸರವಳ್ಳಿಗಳು ಅತ್ಯಂತ ವೇಗವಾಗಿರುತ್ತವೆ ಎಷ್ಟೋ ಊಸರವಳ್ಳಿಗಳು ಒಂದು ಗಂಟೆಗೆ 21 ಮೈಲಿ ಚಲಿಸುವಷ್ಟು ವೇಗವಾಗಿರುತ್ತವೆ  ಮತ್ತು ಬೇಟೆಗಾರ ಅಥವಾ ಪರಭಕ್ಷಕನಿಂದ ತುಂಬಾ ಸುಲಭವಾಗಿ ತಪ್ಪಿಸಿಕೊಳ್ಳುತ್ತವೆ. ಈ ಬಣ್ಣ ಬದಲಿಸುವುದು ಊಸರವಳ್ಳಿಗೆ ಕೇವಲ ಕಾರಣವಾಗಿದೆ.

ಹಾಗಾದ್ರೆ ಯಾಕೆ ಈ ಊಸರವಳ್ಳಿಗಳು ಬಣ್ಣ ಬದಲಿಸುತ್ತವೆ ?? ಯಾವತ್ತಾದ್ರೂ ಯೋಚಿಸಿದ್ದೀರಾ ??, ವಿಜ್ಞಾನಿಗಳು ಹೇಳುವ ಪ್ರಕಾರ ಈ ಊಸರವಳ್ಳಿಗಳು ತಮ್ಮ ಮನಸ್ಸಿನ ಸ್ತಿತಿ ಮೇಲೆ ತಮ್ಮ ಬಣ್ಣಗಳನ್ನು ಬದಲಿಸುತ್ತವೆ. ಹೀಗೆ ಮಾಡುವುದರ ಜೊತೆಗೆ ತಮ್ಮ ಸುತ್ತಮುತ್ತಲಿರುವ ಬೇರೆ ಊಸರವಳ್ಳಿ ,ಗೋಸುಂಬೆಗಳಿಗೂ, ಸಿಗ್ನಲ್ ಕೊಡುತ್ತವೆ. ಉದಾಹರಣೆಗೆ  ದಟ್ಟವಾದ ಬಣ್ಣಗಳಿಗೆ ಅವು ಬದಲಾದರೆ ಅವು ಕೋಪಗೊಂಡಿವೆ ಎಂದು ತಿಳಿಯಬಹುದು, ತಿಳಿಯಾದ ಬಣ್ಣಗಳಿಗೆ ಅವು ತಿರುಗಿದರೆ ತಮ್ಮ ಸಂಗಾತಿಯನ್ನ ಆಕರ್ಷಿಸುತ್ತಿವೆ ಎಂದು ನಾವು ತಿಳಿಯಬೇಕು.

ಆದರೆ ಕೆಲವು ಗೋಸುಂಬೆಗಳು ವಾತಾವರಣಕ್ಕೆ ತಕ್ಕಂತೆ ಬಣ್ಣಬದಲಿಸುತ್ತವೆ. ಉದಾಹರಣೆಗೆ ಕೆಲವು ಗೋಸುಂಬೆಗಳು ಚಳಿಯಾದಾಗ ದಟ್ಟವಾದ ಬಣ್ಣಕ್ಕೆ ತಿರುಗುತ್ತವೆ ದಟ್ಟವಾದ ಬಣ್ಣಕ್ಕೆ ತಿರುಗುವುದರಿಂದ ಚಳಿಯನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಗೋಸುಂಬೆಗಳಿರುತ್ತವೆ.

ಎಷ್ಟೋ ವರ್ಷಗಳ ಕಾಲ ವಿಜ್ಞಾನಿಗಳು ಹೇಳುವ ಪ್ರಕಾರ ಸಾಕಷ್ಟು ಬಣ್ಣಗಳನ್ನು ಹೊಂದಿರುವ ಕ್ರೊಮಾಟೋಫೊರ್ ಅನ್ನುವಂಥ ಒಂದು ಸೆಲ್ / ಕೋಶದಿಂದ ಗೋಸುಂಬೆಗಳು ತಮಗೆ ಬೇಕಾದಾಗ ತಮಗೆ ಬೇಕಾದ ಹಾಗೆ ಬಣ್ಣವನ್ನು ಬದಲಿಸುತ್ತಿತಂತೆ . ಅಂದ್ರೆ ಒಂದು ರೀತಿಯ ಮನಸ್ಥಿತಿಯನ್ನು ತಿಳಿಸಲು ಅಥವಾ ಸಂದೇಶವನ್ನು ತಿಳಿಸಲು ಈ ಕ್ರೊಮಾಟೋಫೊರ್ ಗಳು ಗೋಸುಂಬೆಗಳ ಮೆದುಳಿಗೆ ಸಂದೇಶವನ್ನು ಕಳಿಸಿ ತನ್ನ ದೇಹದ ಬಣ್ಣವನ್ನು ಬದಲಾಯಿಸುತ್ತವಂತೆ.

ಆದ್ರೆ  ಇವತ್ತಿನ ವಿಜ್ಞಾನಿಗಳು ಹೇಳುವ ಪ್ರಕಾರ ಅಂದ್ರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಕೇವಲ ಪಿಗ್‌ಮೆಂಟ್ ನಿಂದ ಮಾತ್ರ ಗೋಸುಂಬೆಗಳು ತಮ್ಮ ಬಣ್ಣವನ್ನು ಬದಲಿಸಲು ಸಾಧ್ಯವಿಲ್ಲ ಯಾಕಂದ್ರೆ ಹಸಿರಿನಂತಹ ದಟ್ಟವಾದ ಬಣ್ಣಗಳನ್ನು ಅವು ಸುಲಭವಾಗಿ ಬದಲಾಯಿಸಿದ್ರೆ  ಕೆಂಪು ಮತ್ತು ಹಳದಿ ಬಣ್ಣಗಳನ್ನು ಅವು ಅಷ್ಟು  ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ.

ಇತ್ತೀಚಿನ ಸಂಶೋಧನೆಗಳ ಪ್ರಕಾರ ಗೋಸುಂಬೆಗಳಲ್ಲಿ ಇರುವ ಚರ್ಮದ ಅಡಿಯಲ್ಲಿರುವ  ವಿಶೇಷವಾದ ಕೋಶಗಳು ಇರಿದೊಫೊರೆಸ್ ಎನ್ನುವಂಥದ್ದು ಪಿಗ್ಮೆಂಟಿನ ಜೊತೆಗೆ ಬೆಳಕನ್ನು ರಿಫ್ಲೆಕ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಈ ಸೆಲ್ ಗಳು ಗ್ವಾನಿನ್ ಕ್ರಿಸ್ಟಲ್ಸ್ ಎನ್ನುವ ಸಾವಿರಾರು ಅಂಶಗಳಿಂದ ತುಂಬಿದೆ.
ಗೋಸುಂಬೆಗಳು ಆರಾಮಾಗಿ ಇದ್ದಾಗ ಅಥವಾ ಅವು ಪ್ರಚೋದನೆಗೋಳಾಗಾದಾಗ ಈ ವಿಶೇಷವಾದ ಸೆಲ್ ಗಳು ಚಲಿಸಿ ಮತ್ತು, ಬದಲಾಗುವುದರಿಂದ ಬೆಳಕಿನ ಪ್ರತಿಬಿಂಬ , ಹಾಗೂ ಪ್ರಿಸಮ್ ಗಳ ರೀತಿ ಚರ್ಮದ ಮೇಲೆ ಸೆಲ್ ಗಳ ಆಕಾರ ಬದಲಾಗುವುದರಿಂದ ನಮ್ಮ ಕಣ್ಣಿಗೆ ಗೋಸುಂಬೆಗಳು ಬಣ್ಣ ಬದಲಿಸುವುದು ಕಾಣುತ್ತದೆ.

LEAVE A REPLY

Please enter your comment!
Please enter your name here