ಮನುಷ್ಯನಲ್ಲಿ ಒಳ್ಳೆಯದು ಕೆಟ್ಟದ್ದು ಎನ್ನುವುದು ಸಹಜ ಆದರೆ ನಮ್ಮ ಕೆಟ್ಟ ತನಗಳನ್ನು ಆದಷ್ಟು ಕಡಿಮೆ ಮಾಡಿಕೊಂಡು ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಆಗಲೇ ನಮ್ಮ ಜನ್ಮಕ್ಕೆ ಸಾರ್ಥಕತೆ ಎನ್ನುವುದು ಸಿಗುವುದು.

ದೊಡ್ಡ ದೊಡ್ಡ ಗುರಿಗಳು :

ನಿಮ್ಮ ಗುರಿಗಳು ನಿಮ್ಮ ಜತೆಯೆ ಚಲಿಸುವಂತಹವುಗಳು, ಮತ್ತು ನಿಮ್ಮ ಸತತ ಪ್ರಯತ್ನ ಜನರ ಮೇಲೆ ಪರಿಣಾಮ ಬೀಳುವುದರಿಂದ ಜನರು ನಿಮ್ಮಿಂದ ಹೊರಸೂಸುವ ಸಕಾರಾತ್ಮಕತೆಗೆ ಆಕರ್ಷಿತರಾಗುತ್ತಾರೆ. ಮತ್ತು ಅವರ ದೃಷ್ಟಿಯಲ್ಲಿ ನೀವು ಒಬ್ಬ ಕನಸುಗಾರರಾಗಿಯೂ ಅಥವಾ ಸಾಧಕರಾಗಿಯೂ ಜನ ನೋಡುತ್ತಾರೆ. ನಿಮ್ಮ ಕನಸುಗಳು ಅಸಾಧ್ಯವೆ ಇರಬಹುದು ಆದರೆ ಅದನ್ನು ನೀವು ನನಸು ಮಾಡಿಕೊಳ್ಳಲು ಪಡುವ ಪ್ರಯತ್ನ ಜನರನ್ನು ಹೆಚ್ಚು ಮೆಚ್ಚಿಸುತ್ತದೆ.

ವಿಶ್ವಾಸ (ನಂಬಿಕೆ) :

ವಿಶ್ವಾಸವು ನೀವು ಸಾಧಿಸುವಂತಹದಲ್ಲ ಹೊರತು ಅದು ನೀವು ನಿಧಾನವಾಗಿ ಪಡೆಯುವ ನಿಮ್ಮ ಸಂಗಾತಿಯಿದ್ದಂತೆ. ನೀವು ಮಾಡುವ ಕೆಲಸ, ಕೌಶಲ್ಯ ಮತ್ತು ಜ್ಞಾನದ ಮೇಲೆ ಹೆಚ್ಚು ಕೆಲಸ ಮಾಡುವುದರಿಂದ ನಿಮ್ಮ ವಿಶ್ವಾಸವು ಇಮ್ಮಡಿಯಾಗುತ್ತದೆ. ಆತ್ಮವಿಶ್ವಾಸದಿಂದ ಮತ್ತು ನಿಮ್ಮ ಕೆಲಸದ ಮೇಲೆ ಗಮನವಿದ್ದಾಗ ಬೇರೆ ಅವರ ಮಾತುಗಳು ನಿಮಗೆ ಕೆವಲ ಎನಿಸುತ್ತದೆ ಮತ್ತು ಆತ್ಮವಿಶ್ವಾಸದಿಂದ ನೀವು ಯಾವುದೇ ಕೆಲಸ ಮಾಡಿದರು ನಿಮಗೆ ಅದು ಬಲವಾದ ನಂಬಿಕೆ ಮತ್ತು ವಿಶ್ವಾಸವನ್ನು ಕೊಡುತ್ತದೆ.

ವೃತಾ ಬೇರೆಯವರ ಮೇಲೆ ಆರೋಪ ಮಾಡುವುದಿಲ್ಲ  :

ಒಂದು ವೇಳೆ ನೀವು ಮಾಡುವ ಕೆಲಸ ನಿಮಗೆ ತೃಪ್ತಿ ಮತ್ತು ವಿಶ್ವಾಸವನ್ನು ತುಂಬಿಕೊಟ್ಟಿದ್ದೆ ಆದರೆ ನೀವು ಎಂದಿಗೂ ಇನ್ನೂಬ್ಬರ ಮೇಲೆ ದೂರು ನೀಡುವುದಿಲ್ಲ, ದೂರು ನೀಡುವವರು ಕೆವಲ ಅತೃಪ್ತಿ ಜನರು ಅವರಿಗೆ ತಾವು ಮಾಡುವ ಕೆಲಸಕ್ಕಿಂತ ಎದುರಿಗೆ ಮಾಡುವ ಕೆಲಸದವರ ಮೇಲೆ ಹೆಚ್ಚು ಅಸಮಧಾನವಿರುತ್ತದೆ ಇದರಿಂದ ಅವರು ಎಷ್ಟು ಚಿಪ್ ಎಂಬುದನ್ನು ತಿಳಿಸುತ್ತದೆ. ಸವಾಲುಗಳನ್ನು ಎದುರಿಸುವ ಮನೋಭಾವದ ವ್ಯಕ್ತಿತ್ವ ಇರುವ ಜನರು ಎಂದಿಗೂ ಅಸಮಧಾನ ವ್ಯಕ್ತ ಪಡಿಸುವುದಿಲ್ಲ ಹೊರತು ಬೇರೊಂದು ಹೊಸ ವಿಷಯದ ಕಡೆ ತಮ್ಮ ಗಮನ ಹರಿಸುತ್ತಾರೆ.

ಉತ್ತಮ ವಾಗ್ಮಿ :

ನಿಮ್ಮ ಅನುಭವಗಳನ್ನು ಆಸಕ್ತಿದಾಯಕ ರೀತಿಯಲ್ಲಿ ಹಂಚಿಕೊಳ್ಳುವ ಮೂಲಕ ನೀವು ಜನರನ್ನು ಸುಲಭವಾಗಿ ಆಕರ್ಷಿಸಬಹುದು. ನಿಮ್ಮ ಕಥೆ, ಆಲೋಚನೆಗಳು ಸ್ಪಷ್ಟ ರೀತಿಯಲ್ಲಿ ವ್ಯಕ್ತಪಡಿಸುವುದರಿಂದ ನೀವು ಹತ್ತರಲ್ಲಿ ಒಬ್ಬರಾಗುವುದಿಲ್ಲ ಹೊರತು ಭಿನ್ನವಾಗಿ ಕಾಣುತ್ತೀರಿ.

ಒಂದು ವಿಷಯವನ್ನು ಮಾತ್ರ ಕೇಂದ್ರೀಕರಿಸುವುದು :

ಒಬ್ಬರ ಜತೆ ನೀವು ಮಾತನಾಡುತ್ತೀರುವಾಗ ಪದೇ ಪದೇ ನಿಮ್ಮ ಮೊಬೈಲ್ ನೋಡುವುದು ಅಸಭ್ಯ ವರ್ತನೆ ಎನಿಸುತ್ತದೆ, ಆದ್ದರಿಂದ ನೀವು ನಿಮ್ಮ ಸಂಪೂರ್ಣ ಗಮನವನ್ನು ಮಾತನಾಡುತ್ತೀರುವ ಆ ವ್ಯಕ್ತಿಯ ಮೇಲೆ ಹರಿಸುವುದರಿಂದ ಅಗತ್ಯ ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ ಮತ್ತು ನೀವು ಒಬ್ಬ ಜವಬ್ದಾರಿಯುತ ವ್ಯಕ್ತಿಯಾಗಿ ಕೂಡ ಕಾಣುತ್ತೀರಿ.

ಕೇಳಿ ಕಲಿಯುವುದು :

ಇದು ಕಲಿಕೆಯ ಒಂದು ಅದ್ಭುತ ಭಾಗ ಎಂದೆ ಹೇಳಬಹುದು. ಒಬ್ಬ ವ್ಯಕ್ತಿಯ ಜತೆ ನೀವು ಮಾತನಾಡುತ್ತಿದ್ದಾಗ ಆ ವ್ಯಕ್ತಿ ಎನು ಹೇಳುತ್ತಾನೆ ಎಂದು ಸಂಪೂರ್ಣ ಕೇಳಿಸಿಕೊಳ್ಳಬೇಕು ನಂತರ ನಿಮ್ಮ ವಾದ ಮಂಡಿಸ ಬೇಕು ಅಂದಾಗ ನೀವು ಒಬ್ಬ ಪರಿಪೊರ್ಣ ತಿಳುವಳಿಕೆಯ ವ್ಯಕ್ತಿ ಎಂದು ತೋರುತ್ತದೆ

LEAVE A REPLY

Please enter your comment!
Please enter your name here