ಭಾರತದಲ್ಲಿ ಸಾಕಷ್ಟು ಅದ್ಭುತ ಕಥೆಗಳು ಬಹಳ ಜನರಿಗೆ ತಿಳಿದಿಲ್ಲ . ಭಾರತ ಒಂದು ರಹಸ್ಯ ಭರಿತ ದೇಶ, ಇಲ್ಲಿ ಮುಂದೆ ಪ್ರಸ್ತಾಪಿಸುವ ಕೆಲವು ವಿಷಯಗಳು ನಿಮಗೆ ಗೊತ್ತಿದ್ದರೂ ಇನ್ನೂ ಕೆಲವು ವಿಷಯಗಳು ನಿಮ್ಮನ್ನು ವಿಸ್ಮಯಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

೧. ತಾಜ್ ಮಹಲ್ ನ ಎತ್ತರ ಕುತುಬ್ ಮಿನಾರ್ಗಿಂತ ಹೆಚ್ಚು !!!

ಹೌದು… ತಾಜ್ ಮಹಲನ್ನು ಎಷ್ಟು ಸೂಕ್ತ ಪ್ರಮಾಣದಲ್ಲಿ ಅಂದರೆ ಎಷ್ಟು ಅನುಗುಣವಾಗಿ ನಿರ್ಮಿಸಿದ್ದಾರೆ ಅಂದ್ರೆ ಯಾರೊಬ್ಬರೂ ಕೂಡ ಪ್ರಪಂಚದ ಅತ್ಯಂತ ಎತ್ತರದ ಸ್ತಂಬ ಗೋಪುರ “ಕುತುಬ್ ಮಿನಾರ್” ಗಿಂತ ಎತ್ತರದಲ್ಲಿದೆ ಎಂದು ಯಾರು ಕಲ್ಪನೆ ಮಾಡಲೂ ಸಾಧ್ಯವಿಲ್ಲ. ತಾಜ್ ಮಹಲ್ ೨೪೩.೫ ಅಡಿ ಎತ್ತರವಿದ್ದರೆ  ಕುತುಬ್ ಮಿನಾರ್ ಕೇವಲ ೨೩೯ ಅಡಿ ಎತ್ತರವಿದೆ.

೨. ಭಾರತದಲ್ಲಿ “ಸ್ನ್ಯಾಪ್ಡೀಲ್.ಕಾಮ್ ನಗರ” !!!

ಭಾರತದ ಈ-ಕಾಮರ್ಸ್ ಸಂಸ್ಥೆಗಳಲ್ಲಿ ಎರಡನೇ ಸ್ಥಾನ ಪಡೆದಿರುವ “ಸ್ನ್ಯಾಪ್ ಡೀಲ್” ಸಂಸ್ಥೆಯ ವಿಶೇಷ  ಏನೆಂದರೆ ಉತ್ತರಪ್ರದೇಶದ ಮುಜ಼್ಜ಼ಫ್ಫಾರ್ ನಗರ್  ಜಿಲ್ಲೆಯಲ್ಲಿರುವ ಶಿವ ನಗರ ಎನ್ನುವ ಹಳ್ಳಿಯನ್ನು “ಸ್ನ್ಯಾಪ್ ಡಾಲರ್.ಕಾಮ್” ನಗರ ಎಂದು ಹೆಸರಿಟ್ಟಿದ್ದಾರೆ.

೩. ಭಾರತದ ಐಸ್ ಹಾಕೀ ತಂಡ!!!

ಭಾರತದ ಐಸ್ ಹಾಕೀ ಇತಿಹಾಸ ಸುಮಾರು ೧೦೦ ವರ್ಷಗಳಷ್ಟು ಹಳೆಯದು. ಶಿಮ್ಲಾ ಮತ್ತು ಪಂಜಾಬ್ ಗಳಲ್ಲಿ ಬ್ರಿಟಿಷರಿಗೆ ಐಸ್ ಹಾಕೀ ಪ್ರಿಯವಾದ ಕ್ರೀಡೆಯಾಗಿತ್ತು. ಈಗಲೂ ಕೂಡ ಶಿಮ್ಲಾ ಐಸ್ ಸ್ಕೇಟಿಂಗ್ ಕ್ಲಬ್ ಸಕ್ರಿಯವಾಗಿ ಭಾರತದಲ್ಲಿನ  ಐಸ್ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿದೆ .

೪. ಹಿಮಾಲಯದಲ್ಲಿ ಸಿ.ಐ.ಎ.ಯು ರಮಾಣು ಸಾಧನವೊಂದನ್ನು ಮತ್ತೆಂದೂ ಸಿಗದಂತೆ ಕಳೆದುಕೊಂಡಿತು !!!

ನ್ಯೂಕ್ಲಿಯರ್ ಪವರ್ಡ್ ದೂರಸ್ಥಮಾಪಕ ರಿಲೇ ೧೯೬೦ ರಲ್ಲಿ ಸಿ. ಐ. ಎ .   ಐ. ಐ. ಬಿ. ಯ ಸಹಯೋಗದೊಂದಿಗೆ ನ್ಯೂಕ್ಲಿಯರ್ ಪವರ್ಡ್ ದೂರಸ್ಥಮಾಪಕ ರಿಲೇಯನ್ನು ಅಂದರೆ ಕೇಳುವ ಸಾಧನವನ್ನು ನಂದಾ ದೇವಿ ಶಿಖರದ ತುದಿಯಲ್ಲಿ ಇಡಬೇಕಾಗಿತ್ತು , ಆದರೆ ಅಪಾಯಕಾರಿ ಹವಾಮಾನ ಪರಿಸ್ಥಿತಿಗಳಿಂದ ಆ ಸಾಧನವನ್ನು ನಂದಾ ದೇವಿ ಶಿಖರದ ಬಳಿ ಬಿಟ್ಟು ಬರಬೇಕಾಯಿತು . ಮತ್ತೆ ಆ ಸಾಧಾನಕ್ಕಾಗಿ ಮುಂದಿನ ವಸಂತದಲ್ಲಿ ಹಿಂತಿರುಗಿ ಹೋಗಿ ನೋಡಿ ಹುಡುಕಿದಾಗ ಆ ಕಾರ್ಯ ಯಶಸ್ವಿಯಾಗಲಿಲ್ಲ / ಆ ಸಾಧನ ಸಿಗಲಿಲ್ಲ .

೫. ಈಗ ಮಹೀಂದ್ರಾ ಅಂಡ್ ಮಹೀಂದ್ರಾ …. ಮೊದಲು ಮಹೀಂದ್ರಾ ಅಂಡ್ ಮೊಹಮ್ಮೆದ್!!

೧೯೪೫ರಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಲೂಧಿಯಾನದಲ್ಲಿ ಉಕ್ಕಿನ ವ್ಯಾಪಾರ ಮಾಡುತಿತ್ತು . ಆ ಸಮಯದಲ್ಲಿ ಈ ಕಂಪನಿಯನ್ನು  ಮಾಲೀಕರಾದ ಮಹೀಂದ್ರಾ ಅಂಡ್ ಮೊಹಮ್ಮೆದ್ ಬ್ರದರ್ಸ್ .ಕೆ. ಸಿ ಮಹೀಂದ್ರಾ, ಜೆ. ಸಿ. ಮಹೀಂದ್ರಾ ಮತ್ತು ಮಲ್ಲಿಕಾ ಗುಲಾಮ್ ಮೊಹಮ್ಮೆದ್ ನಡೆಸುತ್ತಿದ್ದರು . ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಪಾಕಿಸ್ತಾನ ರೂಪುಗೊಂಡಿತು , ಮೊಹಮ್ಮೆದ್ ಪಾಕಿಸ್ತಾನಕ್ಕೆ ವಲಸೆ ಹೋದರು . ನಂತರ ೧೯೪೮ರಲ್ಲಿ ಕಂಪನಿಯು ಮಹೀಂದ್ರಾ ಅಂಡ್ ಮಹೀಂದ್ರಾ ಎಂದು ಹೆಸರಿಸಲಾಯಿತು.

೬. ಭಾರತ ಮೂಲದ ಸ್ಟೂವರ್ಟ್ ಕ್ಲಾರ್ಕ್ !!!

ಕ್ಲಾರ್ಕ್ ಆಂಗ್ಲೊ-ಇಂಡಿಯನ್ ತಂದೆ ತಾಯಿಯರ ಮಗ . ಅವನ ತಂದೆ ಬ್ರೂಸ್ ಕ್ಲಾರ್ಕ್ ಚೆನ್ನೈ ನವರು ಹಾಗೂ ತಾಯಿ ಮೇರೀ ಬೆಂಗಳೂರಿನವರು . ಸ್ಟೂವರ್ಟ್ ಕ್ಲಾರ್ಕ್ ಪ್ರಪ್ರಥಮವಾಗಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತಿರುವ ಮೂಲ  ಭಾರತೀಯ ಸಂತತಿಯ ಪುರುಷ ಕ್ರಿಕೆಟಿಗ.

೭. ಪ್ರಪ್ರಥಮ ಬೆರಳಚ್ಚು ಬ್ಯೂರೋ ಭಾರತದಲ್ಲಿನ ಕಲ್ಕತ್ತಾದಲ್ಲಿ !!!

೧೮೯೭ ರಲ್ಲಿ ಪ್ರಪಂಚದ ಪ್ರಪ್ರಥಮ ಬೆರಳಚ್ಚು ಬ್ಯೂರೋ ಕಲ್ಕತ್ತಾದ ( ಈಗಿನ ಕೋಲ್ಕತ್ತಾ ದ ) ರೈಟರ್’ಸ್ ಬಿಲ್ಡಿಂಗ್ ನಲ್ಲಿ  ಸ್ಥಾಪಿಸಲಾಗಿತ್ತು.

೮. ಕೋಡಿನ್ಹಿ , ಕೇರಳದ ಅವಳಿ ಪಟ್ಟಣ !!!

ಅಸಾಧಾರಣ ಮತ್ತು ಅನೇಕ ಸಂಖೆಯ ಅವಳಿ ಜನನದಿಂದಾಗಿ ಕೋಡಿನ್ಹಿ ಪಟ್ಟಣವು ಅಂತಾರಾಷ್ಟ್ರೀಯ ಗಮನಕ್ಕೆ ಬಂದಿದೆ. ಅವಳಿ ಜನನ ಪ್ರಮಾಣದಲ್ಲಿ ಅತ್ಯಂತ ಕಡಿಮೆ ಎಂದು ಹೆಸರಿರುವ ಭಾರತದಲ್ಲಿ ಕೇರಳದ ಈ ಪಟ್ಟಣವು ಅತ್ಯಂತ ಹೆಚ್ಚಿನ ಅವಳಿ ಜನನಗಳನ್ನು ಹೊಂದಿದೆ.

೯. ಡಾಬರ್ ಒಂದು ಪದ ಅಲ್ಲ!!!

ಹೌದು ನಮ್ಮ ನಿಮ್ಮೆಲರ ಅಚ್ಚು ಮೆಚ್ಚಿನ ನೆಚ್ಚಿನ , ಭಾರತದ ದೊಡ್ಡ ಆಯುರ್ವೇದಿಕ್  ಬ್ರ್ಯಾಂಡ್ “ಡಾಬರ್ ” ಹೆಸರು ಅದರ ಸಂಸ್ಥಾಪಕರ ಸಂಕ್ಷಿಪ್ತ ಪದ .  ಆ ಸಂಸ್ಥಾಪಕರ ಹೆಸರು ಡಾ. || ಎಸ್. ಕೆ. ಬರ್ಮನ್  ಅವರು ಡಾಕ್ಟರ್ ಬರ್ಮನ್ ಎಂದೇ ಹೆಸರುವಾಸಿಯಾಗಿದ್ದರು ಆದ್ದರಿಂದಲೇ” ಡಾಬರ್ ” ಎಂಬ ಹೆಸರು  ಬಂತು.

೧೦. ಶ್ರೀಕಾಂತ್ ಜಿಕ್ಖರ್  ಭಾರತದಲ್ಲಿ  ಅತ್ಯಂತ ಹೆಚ್ಚಿನ ವಿದ್ಯಾರ್ಹತೆಯುಳ್ಳ ಭಾರತೀಯ !!!

ಶ್ರೀಕಾಂತ್ ಜಿಕ್ಖರ್ರವರು ಭಾರತದ ಅತಿ ಹೆಚ್ಚಿನ ವಿದ್ಯಾರ್ಹತೆಯುಳ್ಳ ವ್ಯಕ್ತಿಯಾಗಿ ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಅನ್ನು ಹೊಂದಿದ್ದಾರೆ. ಎಮ್. ಬಿ. ಬಿ. ಎಸ್  ಮತ್ತು ಎಮ್. ಡಿ. ಇಂದ ಶುರು ಮಾಡಿದ ಇವರು ಎಲ್. ಎಲ್. ಬಿ ಮಾಡಿ ಕಾನೂನನ್ನು ಕೂಡ ಓದುತ್ತಾರೆ , ನಂತರ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ(ಎಲ್. ಎಲ್. ಎಮ್) ಯನ್ನು ಪಡೆಯುತ್ತಾರೆ. ಹಾಗೂ ಇವರು ಬಿಸ್ನೆಸ್  ಆಡಳಿತ ಮತ್ತು ಪತ್ರಿಕೋದ್ಯಮದಲ್ಲಿಯು ಮಾಸ್ಟರ್ಸ್ ಅನ್ನು ಹೊಂದಿದ್ದಾರೆ . ಅಷ್ಟೇ ಅಲ್ಲದೆ ಇವರು ಇನ್ನೂ ಬರೋಬ್ಬರಿ ಹತ್ತು ವಿಷಯಾಗಳ್ಲಲ್ಲಿ ಮಾಸ್ಟರ್ಸ್ ಪದವಿ ಯನ್ನು ಹೊಂದಿದ್ದಾರೆ. ಎಂ. ಎ. ಸಾರ್ವಜನಿಕ ಆಡಳಿತ ,ಎಂ. ಎ.ಸಮಾಜ ಶಾಸ್ತ್ರ ,ಎಂ. ಎ. ಅರ್ಥ ಶಾಸ್ತ್ರ , ಎಂ. ಎ. ಸಂಸ್ಕೃತ, ಎಂ. ಎ. ಇತಿಹಾಸ, ಎಂ. ಎ. ಆಂಗ್ಲ ಸಾಹಿತ್ಯ , ಎಂ. ಎ. ತತ್ವ ಶಾಸ್ತ್ರ , ಎಂ. ಎ.ರಾಜ್ಯ ಶಾಸ್ತ್ರ , ಎಂ. ಎ.ಪ್ರಾಚೀನ ಭಾರತೀಯ ಇತಿಹಾಸ ,ಸಂಸ್ಕೃತಿ ಮತ್ತು ಪುರಾತನ ಶಾಸ್ತ್ರ , ಎಂ. ಎ.ಮನೋವಿಜ್ಞಾನ . ಮತ್ತು ಇವರು ಯಾವುದೇ ಪದವಿಗಿಂತ ಉನ್ನತ ಪದವಿಯಾದ ಡಿ.ಲಿಟ್ (ಡಾಕ್ಟರ್ ಆಫ್ ಲೆಟರ್ಸ್) ಅನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಸಾಕಷ್ಟು ಪದವಿಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ಇವರು ಹಲವಾರು ಪದವಿಗಳಲ್ಲಿ ಪ್ರಥಮ ಶ್ರೇಣಿ /ಪ್ರಥಮ ದರ್ಜೆಯನ್ನು ಗಳಿಸಿದ ಹೆಮ್ಮೆ ಇವರದಾಗಿದೆ.

೧೧. ಜಂತರ್ ಮಂತರ್ ಕಂಬಗಳು ಸಣ್ಣದಾದ ಮತ್ತು ಧೀರ್ಘವಾದ ದಿನಗಳನ್ನು ಸೂಚಿಸುತ್ತದೆ !!!

ದೆಹಲಿಯಲ್ಲಿರುವ ಜಂತರ್ ಮಂತರ್ ನಲ್ಲಿ ೧೨ ಅಡಿ , ಮತ್ತು ೧೭ ಅಡಿ ಇರುವ ಎರಡು ಕಂಬಗಳಿವೆ , ಈ ಕಂಬಗಳು ವರ್ಷದ ಅತಿ ಚಿಕ್ಕದಾದ ಮತ್ತು ಧೀಘವಾದ ದಿನಗಳನ್ನು ಸೂಚಿಸುತ್ತವೆ. ಡಿಸೆಂಬರ್ ೨೧ ರಂದು ವರ್ಷದ ಅತಿ ಚಿಕ್ಕ ದಿನದಂದು ದಕ್ಷಿಣದ ಕಂಬಗಳು ಉತ್ತರದ ಕಂಬಗಳ ಮೇಲೆ ಅಡಿಪಾಯದಿಂದ ಮೇಲಿನವರೆಗೂ ನೆರಳನ್ನು ಬೀರುತ್ತದೆ . ಹಾಗೆ ಅಷ್ಟೇ ಕೌಶಲ್ಯದಿಂದ ವರ್ಷದ ಅತಿ ಧೀರ್ಘವಾದ ದಿನ ಜೂನ್ ೨೧ರಂದು ಉತ್ತರದ ಕಂಬಗಳ ಮೇಲೆ ಯಾವುದೇ ನೆರಳು  ಬೀರುವುದಿಲ್ಲ.

೧೨. ಜೂನ್ ೨೨ ಮಾತ್ರ ಕುತುಬ್ ಮಿನಾರ್ ನಲ್ಲಿ ನೆರಳು ಬೀಳುವುದಿಯಲ್ಲವಂತೆ !!!

ಐತಿಹಾಸಿಕ “ಕುತುಬ್ ಮಿನಾರ್” ನಲ್ಲಿ  ಒಂದು ಅಪರೂಪದ ಚಮತ್ಕಾರ ಪ್ರತಿ ವರ್ಷ ಕೇವಲ ಜೂನ್ ೨೨ ರಂದು ಅಲ್ಲಿ ನೆರಳು ಬೀಳುವುದಿಲ್ಲ , ಯಾಕಂದ್ರೆ ಬೇರೆ ದಿನಗಳಲ್ಲಿ ಅಲ್ಲಿಯ ರಚನಾತ್ಮಕ ಪಕ್ಷಿಯ ಕಾರಣದಿಂದಾಗಿ ಮಧ್ಯಾನಹವು ನೆರಳು ಬೀಳುತ್ತವೆ.

೧೩. ಹೈದರಾಬಾದ್ ನ ನಿಜ಼ಾಮ ಎಂದಿಗೂ ಅವರು ಧರಿಸಿದ ಬಟ್ಟೆಯನ್ನು ಎರಡನೇ ಬಾರಿ ಧರಿಸಿರಲಿಲ್ಲವಂತೆ !!!

ಹೈದರಾಬಾದ್ ನ ಆರನೇ ನಿಜ಼ಾಮರಾದ “ಮೆಹ್ಬೂಬ್ ಅಲಿ ಪಾಶಾ” ಎಂದೇ ಹೆಸರುವಾಸಿಯಾದ ಮೀರ್ ಮೆಹ್ಬೂಬ್ ಅಲಿ ಖಾನ್ ರವರು ಎಂದಿಗೂ ತಾವು ಧರಿಸಿದ ಬಟ್ಟೆಯನ್ನು ಮತ್ತೆ ಧರಿಸಲಿಲ್ಲವಂತೆ . ಅವರ ಬಟ್ಟೆ ಬದಲಿಸುವ ಕೋಣೆಯಲ್ಲಿ ಪ್ರಪಂಚದ ಅತ್ಯಂತ ದೊಡ್ಡದಾದ  ೨೪೦ ಅಡಿ ಉದ್ದದ ಕೋಣೆಯ ಎರಡು ಬದಿಯೂ  ಇರುವ ಬಟ್ಟೆ ಬೀರು  ಇತಂತೆ .

೧೪. ಹೌರಃ ಸೇತುವೆಗೆ ಯಾವುದೇ ನಟ್ ಮತ್ತು ಬೊಲ್ಟ್‌ಗಳು ಇಲ್ಲ !!!

ಇಡೀ ಸೇತುವೆಯನ್ನ ರಚನೆಯನ್ನ ರಿವೆಟಿಂಗ್ನಿಂದ ಸೃಷ್ಟಿಸಿದ ಈ ಸೇತುವೆಗೆ ಯಾವುದೇ ನಟ್ ಮತ್ತು ಬೊಲ್ಟ್‌ಗಳು  ಇಲ್ಲ. ಈ ಸೇತುವೆ ನಿರ್ಮಾಣ ಮಾಡಲು ೨೬೫೦೦ ಟನ್ ಸ್ಟೀಲ್ ಬಳಸಲಾಗಿದೆ ಹಾಗೂ ಈ ಸ್ಟೀಲ್‌ನಲ್ಲಿ ೨೩೦೦೦ ಟನ್ ಟೀಸ್ಕ್‌ರೋಮ್  ಎನ್ನುವ ಹೈ ಟೆನ್ಸೈಲ್ ಆಲಾಯ್ ಸ್ಟೀಲ್ಅನ್ನು ಬಳಸಲಾಗಿದೆ , ಮತ್ತು ಈ ಸ್ಟೀಲನ್ನು ಒದಗಿಸಿದ್ದು ಟಾಟಾ ಸ್ಟೀಲ್ ಸಂಸ್ಥೆ.

೧೫. ಮಿಲ್ಖಾ ಸಿಂಘ್  ದ “ಫ್ಲೈಯಿಂಗ್ ಸಿಖ್ ” ಎಂದೇ ಕರೆಯಲ್ಪಡುವ ” ಮಿಲ್ಖಾ ಸಿಂಘ್ “

ಒಟ್ಟೂ ಭಾಗವಹಿಸಿದ್ದು ೮೨ ಸ್ಪರ್ಧೆಗಳ್ಲಲ್ಲಿ ಹಾಗೆ ಗೆದ್ದು ಬಂದಿದ್ದು ೭೯ ಸ್ಪರ್ಧೆಗಳ್ಲಲ್ಲಿ , ಹ್ಯಾಟ್ಸ್ ಆಫ್ ಟು ಯು “ಫ್ಲೈಯಿಂಗ್ ಸಿಖ್ “.

೧೬. ಮೋಹುನಬಗಾನ್ ಆತ್ಲೆಟಿಕ್ ಕ್ಲಬ್/ಕ್ರೀಡಾ ಕ್ಲಬ್ ಗೆ ಮ್ಯಾನ್‌ಚೆಸ್ಟರ್ ಪಟ್ಟಣಕಿಂತ ವಯಸ್ಸಾಗಿದೆಯಂತೆ !!!

೧೮೮೯ರಲ್ಲಿ ಶುರುವಾದ ಮೋಹುನಬಗಾನ್ ಆತ್ಲೆಟಿಕ್ ಕ್ಲಬ್ ಅತೀ ಹಳೆಯದಾದ ಕ್ಲಬ್ ಆಗಿದೆ ….ಇದು ಯುರೋಪಿಯನ್ ಕ್ಲಬ್ಗಳಾದ ಚೆಲ್ಸೀ, ಮ್ಯಾನ್‌ಚೆಸ್ಟರ್ ಸಿಟೀ, ಲಿವರ್‌ಪೂಲ್ , ರಿಯಲ್ ಮ್ಯಾಡ್ರಿಡ್ , ಬಾರ್ಸಿಲೋನ ,ಬೇಯರ್ನ್ ಮ್ಯೂನಿಚ್, ಇಂಟೆರಿಂತ  ಮಿಲಾನ್ ಮತ್ತು ಎ. ಸಿ. ಮಿಲನ್ ಈ ಎಲ್ಲ ಕ್ಲಬ್‌ಗಳಿಗಿಂತ ಹಳೆಯದಾಗಿದೆ. ಇಷ್ಟೆಲ್ಲ ವಿಷಯಗಳನ್ನ ತಿಳಿದುಕೊಂಡ ನಾವು ಈಗ ಭಾರತದ ಬಗೆಗಿನ ನಮ್ಮ ಸಾಮಾನ್ಯ ಜ್ಞಾನವನ್ನು ಮತ್ತೊಮ್ಮೆ ತಿರುಗಿ ನೋಡುವ ಸಮಯ.

LEAVE A REPLY

Please enter your comment!
Please enter your name here