ನೀವು ನಂಬದ್ದಿದ್ದರೂ, ಜೀವನದಲ್ಲಿ ನೀವು ಯಶಸ್ಸನ್ನು ಗಳಿಸುತ್ತಿದ್ದೀರಿ ಎಂಬುದಕ್ಕೆ 20 ಪುರಾವೆಗಳುಯಶಸ್ಸೆಂದರೆ ಕೇವಲ ಉತ್ತಮವಾಗಿರುವುದು ಮತ್ತು ಎಲ್ಲವನ್ನು ಗಳಿಸುವುದು ಮಾತ್ರವಲ್ಲ. ನಮ್ಮ ನಿತ್ಯ ಜೀವನದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಕೊಡದ ಕೆಲವು ಸಂಗತಿಗಳು ಯಶಸ್ಸಿನ ಕಡೆಗೆ ನಮ್ಮ ನಡಿಗೆಯನ್ನು ತೋರಿಸುತ್ತವೆ.

• ನಿಮ್ಮ ಸಂಬಂಧಗಳು ನಾಟಕೀಯವಾಗಿಲ್ಲ:ನಿಮ್ಮ ಸಂಬಂಧಗಳು ಮೊದಲು ನಾಟಕೀಯತೆಯಿಂದ ಕೂಡಿದ್ದರೂ, ಈಗ ನೀವು ಅದರಿಂದ ದೂರ ನಡೆದು ಬಂದಿದ್ದೀರಿ ಎಂದಾದಲ್ಲಿ ಇದೊಂದು ಒಳ್ಳೆ ಸೂಚನೆ.

• ಸಹಾಯ ಅಥವಾ ಬೆಂಬಲವನ್ನು ಕೋರಲು ನೀವಿನ್ನು ಹೆದರಲಾರಿರಿ:ಸಹಾಯ ಕೇಳುವುದು ಅಸಹಾಯಕತೆಯಲ್ಲ; ಬದಲಾಗಿ ಅದು ಶಕ್ತಿಯ ಸಂಕೇತ. ಜನರಿಂದ ದೂರವಿದ್ದು ಯಶಸ್ಸು ಗಳಿಸುವುದು ಅಸಾಧ್ಯ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ನಿಮ್ಮ ಗುರಿ ತಲುಪಬಹುದು. ಸಹಾಯ ಕೇಳಿದರೆ, ವ್ಯಕ್ತಿಯಾಗಿ ನೀವು ಬಹಳ ಬೆಳೆದಿದ್ದೀರಿ ಎಂದರ್ಥ.

• ನಿಮ್ಮ ಜೀವನ ಮಟ್ಟವನ್ನು ಏರಿಸಿದ್ದೀರಿ:ತಮ್ಮ ಕ್ರಿಯೆಗಳಿಗೆ ಅವರವರೇ ಜವಾಬ್ದಾರರು ಎಂದು ನಿಮಗೆ ತಿಳಿದಿದೆ ಮತ್ತು ಯಾರದೇ, ಯಾವುದೇ ಕೆಟ್ಟ ನಡವಳಿಕೆಯನ್ನು ನೀವು ಸಹಿಸಲಾರಿರಿ. ಅಂಥಹವರನ್ನು ನಿಮ್ಮ ಜೀವನದಲ್ಲಿ ಎಂದೂ ಸೇರಿಸಿಕೊಳ್ಳಲಾರಿರಿ.

• ನಿಮಗೆ ಒಳ್ಳೆಯದೆಂದು ಅನಿಸದ ಸಂಗತಿಗಳನ್ನು ಹೋಗಗೊಡುವಿರಿ:ಆತ್ಮಪ್ರಶಂಸೆ ಎನಿಸಿದರೂ, ನಿಮಗೆ ಸರಿಕಾಣದ ನಿಮ್ಮಲ್ಲಿಯ ಕೆಲವು ಗುಣಗಳನ್ನು ನೀವು ಧೈರ್ಯದಿಂದ ದೂರಮಾಡುವಿರಿ.

• ಕನ್ನಡಿಯಲ್ಲಿ ಕಾಣುವ ನಿಮ್ಮನ್ನು ನೀವು ಪ್ರಶಂಸಿಸುತ್ತೀರಿ:ದಿನದ ಯಾವುದೇ ಸಮಯದಲ್ಲಾದರೂ ಕನ್ನಡಿಯಲ್ಲಿ ನಿಮ್ಮನ್ನು ನೀವು ನೋಡಿದಾಗ ಮೆಚ್ಚುಗೆ ಹೊಂದಿ. ನೀವೆಷ್ಟು ಮುಖ್ಯವಾದವರು ಎಂದು ತಿಳಿದಿರುವುದು ಯಾವಾಗಲೂ ಒಳ್ಳೆಯದೇ.

• ಹಿನ್ನಡೆ ಮತ್ತು ಸೋಲು ಜೀವನದ ಭಾಗವೇ ಎಂದು ನಿಮಗೆ ಗೊತ್ತಿದೆ:ಯಾರೂ 100% ವಿಜಯಿಗಳಲ್ಲ, ಯಾರೂ ಪರಿಪೂರ್ಣರಲ್ಲ. ಹೆಚ್ಚಿನದನ್ನು ಸಾಧಿಸಲು ನಮ್ಮ ಸೋಲೇ ನಮಗೆ ಮಾದರಿಯಾಗಿರಲಿ.

• ನಿಮಗೋಸ್ಕರ ಏನನ್ನೂ ಮಾಡಲು ತಯಾರಿರುವ ಜನರು ನಿಮ್ಮೊಂದಿಗಿದ್ದಾರೆ:ನಿಮ್ಮ ಜೊತೆಯಿದ್ದು, ನೀವು ಕುಗ್ಗಿದಾಗ ಕೈ ಹಿಡಿದು ಮೇಲೆತ್ತುವವರು ಇದ್ದರೆ ನೀವೇ ಅದೃಷ್ಟವಂತರು. ನಿಮ್ಮ ಹಿತೈಷಿ ಯಾರೆಂದು ತಿಳಿಸಲು ಜೀವನ ನಿಮಗೆ ಹಲವಾರು ಕಹಿ ಅನುಭವಗಳನ್ನು ನೀಡಲೂಬಹುದು.

• ನೀವು ಯಾರನ್ನೂ ಹೆಚ್ಚು ದೂರುವುದಿಲ್ಲ:ವಿಷಯ ಎಷ್ಟೇ ಕೆಟ್ಟದಾಗಿದ್ದರೂ, ದೂರುವುದರಿಮದ ಪ್ರಯೋಜನವಿಲ್ಲ ಎಂದು ನಿಮಗೆ ತಿಳಿದಿದೆ. ಇಲ್ಲಿ ಜೀವಿಸಲು ಅನುವು ಮಾಡಿಕೊಟ್ಟ ಬದುಕಿಗೆ ನೀವು ಋಣಿಯಾಗಿದ್ದೀರಿ.

• ಇತರರ ಯಶಸ್ಸಲ್ಲಿ ನೀವು ಪಾಲುದಾರರಾಗುತ್ತೀರಿ:ಇತರರನ್ನು ಅಭಿನಂದಿಸುವುದು ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯ ಸಂಕೇತ.

• ನೀವು ಹಿಂಬಾಲಿಸುವ ನಿಮ್ಮದೇ ಆಸಕ್ತಿಗಳಿವೆ:ನಿಮ್ಮ ಅಮೂಲ್ಯ ಆಸಕ್ತಿಗಳು, ಯೋಚನೆ, ಕ್ರಿಯೆಗಳಿಂದ ಇತರರಿಗೆ ಉಪಕಾರಿಯಾದುದನ್ನು ಮಾಡುತ್ತೀರಿ.

• ನೀವು ಎದುರುನೋಡುವ ಹಲವಾರು ವಿಷಯಗಳಿವೆ:ನೀವು ಆಶಾದಾಯಕವಾಗಿಲ್ಲದಿದ್ದರೆ ಬದುಕು ನಿರರ್ಥಕ. ನಿಮ್ಮ ಗುರಿಯನ್ನು ನಿರ್ಧರಿಸಿ. ಗುರಿಯೆಡೆಗಿನ ನಿಮ್ಮ ಪ್ರಯಾಣ ಯಶಸ್ಸನ್ನು ತರುತ್ತದೆ.

• ನನಸಾದ ಹಲವು ಗುರಿಗಳು ನಿಮ್ಮಲ್ಲಿವೆ:ಸೋಲುಗಳು ಜೀವನದ ಅವಿಭಾಜ್ಯ ಅಂಗಗಳು. ಗುರಿ ಸಾಧನೆಯು ನಮಗೆ ಮುನ್ನಡೆಯಲು ಶಕ್ತಿ ಕೊಟ್ಟು, ಹೊಸ ಕನಸನ್ನು ಕಾಣಲು ಪ್ರೇರೇಪಿಸುತ್ತದೆ.

• ಇತರರೆಡೆಗೆ ನಿಮಗೆ ಅನುಕಂಪವಿದೆ:ಸಹಾನುಭೂತಿ ತೋರುವುದು ನೀವು ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಹರಡುವವರು ಎಂಬುದರ ಸಂಕೇತ. ಇಂತಹವರು ತಮ್ಮ ಬಳಗದವರಂತೆ ಇತರರನ್ನೂ ಪ್ರೀತಿಸಬಲ್ಲರು.

• ನೀವು ಇತರರನ್ನು ಆಳವಾಗಿ ಪ್ರೀತಿಸುತ್ತೀರಿ ಮತ್ತು ಇತರರು ನಿಮ್ಮನ್ನು ಪ್ರೀತಿಸಲಿಎಂದು ಬಯಸುತ್ತೀರಿ:ತಿರಸ್ಕಾರದ ಭಯದಿಂದ ಕೆಲವರು ಪ್ರೀತಿಯನ್ನು ಕಂಡು ಭಯಪಡುತ್ತಾರೆ. ಫಲಿತಾಂಶದ ಭಯವಿಲ್ಲದೆ ಇತರರೆಡೆಗೆ ಪ್ರೀತಿ ತೋರುವುದು ಯಶಸ್ಸಿನ ಪ್ರತೀಕ.

• ಬಲಿಪಶುವಾಗಲು ನೀವು ಬಯಸುವುದಿಲ್ಲ:ನಿಮ್ಮ ಜೀವನದ ಅನುಭವಗಳಿಗೆ ನೀವೇ ಜವಾಬ್ದಾರರಾದರೂ, ಕೆಲವೊಮ್ಮೆ ಇವು ನಿಮ್ಮ ಅರಿವಿನ ಹೊರತಾಗಿ ಬರುತ್ತವೆ. ಹಾಗಾಗಿ ಹೆದರದೆ, ಇವುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ.

• ಇತರರು ಏನೆಂದುಕೊಳ್ಳುತ್ತಾರೆ ಎಂಬ ಚಿಂತೆ ನಿಮಗಿಲ್ಲ:ಎಲ್ಲರನ್ನೂ ಸಂತೋಷಪಡಿಸುವುದು ಅಸಾಧ್ಯ ಎಂದು ಗೊತ್ತಿದೆ. ಆದಕಾರಣ ನೀವು ನೀವಾಗಿಯೇ ಇದ್ದು, ನಿಮ್ಮನ್ನು ಪ್ರೀತಿಸಿ.

• ಯಾವಾಗಲೂ ಭರವಸೆಯ ಕಡೆಗೇ ನೋಡುತ್ತೀರಿ:ನಿರಾಶೆಯೆಂದು ನೀವು ತಿಳಿದರೆ ಜೀವನವು ಎಂದೂ ಹಾಗೆಯೇ ಉಳಿದುಬಿಡುತ್ತದೆ. ಅವುಗಳಿಂದ ಪಾಠ ಕಲಿತರೆ ಮುಂದೆ ಹಾಗಾಗದಂತೆ ತಡೆಯಬಹುದು.

• ನಿಮ್ಮಿಂದ ಬದಲಾಯಿಸಲಾಗದ್ದನ್ನು ಒಪ್ಪಿಕೊಳ್ಳುತ್ತೀರಿ:ಜೀವನದ ಎಲ್ಲಾ ಸಂಗತಿಗಳ ಮೇಲೂ ಹಿಡಿತ ಸಾಧಿಸುವುದು ಅಸಾಧ್ಯ. ಆದರೆ ನಿಮಗನಿಸುವುದನ್ನು ಹಿಡಿತದಲ್ಲಿಡುವುದು ನಿಮಗೆ ಸಾಧ್ಯವಿದೆ. ಎಲ್ಲವನ್ನೂ ಸಕಾರಾತ್ಮಕ ದೃಷ್ಟಿಯಿಂದಲೇ ನೋಡಿ.

• ನಿಮಗೆ ಸಾಧ್ಯವಾದುದನ್ನು ಬದಲಾಯಿಸುತ್ತೀರಿ:ನೀವು ಅಂದುಕೊಳ್ಳುವುದಕ್ಕಿಂತಲೂ ಹೆಚ್ಚಿನದನ್ನು ಬದಲಾಯಿಸುವುದು ಸಾಧ್ಯವಿದೆ. ಯಶಸ್ಸಿನ ವ್ಯಕ್ತಿಗಳು ಎಂದೂ ಕೆಟ್ಟದ್ದನ್ನು ಒಪ್ಪಿಕೊಳ್ಳಲರರು ಮತ್ತು ಅವುಗಳನ್ನು ಬದಲಾಯಿಸಬಲ್ಲರು.

• ಅತಿಮುಖ್ಯವಾಗಿ- ನೀವು ಸಂತಸದಿಂದಿದ್ದೀರಿ:ಸಂತಸದಿಂದಿರುವುದೇ ಯಶಸ್ಸಿನ ಅದ್ಭುತ ಅರ್ಥ. ನಿಮ್ಮ ಹಣಕಾಸು ಅಥವಾ ನಿಮ್ಮ ಮನೆಯ ವಿಸ್ತಾರವನ್ನು ಇದು ಅವಲಂಬಿಸಿಲ್ಲ. ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೂ ನೀವು ಸಂತಸದಿಂದಿದ್ದರೆ, ನೀವೊಬ್ಬ ಯಶಸ್ವೀ ವ್ಯಕ್ತಿ ಎಂದರ್ಥ.

ಲೇಖನ : ಅಶ್ವಿನಿ ಪ್ರಕಾಶ್ 

LEAVE A REPLY

Please enter your comment!
Please enter your name here