ಹೌದು ನೀವು ಕೇಳುತ್ತಿರುವ ಸುದ್ದಿ ನಿಜ, ಬಾಂಗ್ಲಾದೇಶದಲ್ಲಿ ಕೆಲಸಕ್ಕೆ ಸಂಭಂದಿತ ಮೀಸಲಾತಿಯನ್ನು ಅಲ್ಲಿನ ಶೇಕ್ ಹಸೀನಾ ನೇತೃತ್ವದ ಸರ್ಕಾರ ಕಿತ್ತೊಗೆದಿದೆ, ಇದರ ಮೂಲಕ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡ ದಿಟ್ಟ ಸರ್ಕಾರ ಎಂಬ ಖ್ಯಾತಿಗೆ ಬಾಂಗ್ಲಾ ಸರ್ಕಾರ ಪಾತ್ರವಾಗಿದೆ.

ಅಲ್ಲಿನ ಈ ಸುದ್ದಿ ಕೇಳಿ ಯುವ ಜನತೆ ಬೀದಿಗಿಳಿದು ಸಂಭ್ರಮಿಸಿದೆ, ಇತ್ತೀಚೆಗೆ ಅಲ್ಲಿನ ಯುವ ಜನತೆ ಮೀಸಲಾತಿ ವಿರುದ್ಧ ಸಿಡಿದೆದ್ದಿತ್ತು ಹಾಗು ಹಲವಾರು ಪ್ರತಿಭಟನೆಗಳನ್ನು ಮುನ್ನೆಡೆಸಿತ್ತು ಇದರಿಂದ ಮಣಿದ ಸರ್ಕಾರ ಅಲ್ಲಿನ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಕಿತ್ತೊಗೆದಿದೆ. ಇಂದು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅಲ್ಲಿನ ಪಾರ್ಲಿಮೆಂಟ್ ಭಾಷಣದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ಮೀಸಲಾತಿ ಬದಲಾಗಿ ಅತ್ಯಂತ ಹಿಂದುಳಿದ ಜನರಿಗೆ ಮತ್ತು ವಿಕಲಾಂಗ ಚೇತನರಿಗೆ ಮೀಸಲಾತಿಯನ್ನು ಕೊಡುವ ಇಂಗಿತ ವ್ಯಕ್ತ ಪಡಿಸಿರುವ ಶೇಕ್ ಹಸೀನಾ ಮುಂದಿನ ದಿನಗಳಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಹಿಂದುಳಿಗ ಬಾಂಗ್ಲಾದೇಶಕ್ಕೆ ಬೇಡವಾದ ಮೀಸಲಾತಿ, ಮುಂದುವರಿದ ಕೆಲ ದೇಶಕ್ಕೆ ಬೇಕೇ ಎಂದು ಜನರು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.

 

LEAVE A REPLY

Please enter your comment!
Please enter your name here