ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಕಾಣಸಿಗುತ್ತಿರುವ ಒಂದು ಭಯಂಕರ ಖಾಯಿಲೆ, ಇದರ ಹಲವು ಸೂಚನೆಗಳು ನಮ್ಮಲ್ಲಿ ಹಲವರಿಗೆ ತಿಳಿಯುವುದಿಲ್ಲ, ಈ ಲೇಖನವನ್ನು ಎಲ್ಲೆಡೆ ಶೇರ್ ಮಾಡಿ ನಿಮಗೆ ಹೃದಯಾಘಾತ ಆಗುವ ಹಲವು ದಿನಗಳ ಮುಂಚಿತವಾಗಿಯೇ ನಿಮಗೆ ಈ ಸೂಚನೆಗಳು ಸಿಗಲಿವೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.

ಎದೆಯ ಮೇಲೆ ಒತ್ತಡ:

ಬಹಳ ಜನರು ಈ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ, ನಿರ್ಲಕ್ಷಿಸಲು ಹಲವು ಕಾರಣಗಳಿರಬಹುದು ಆದರೆ ಈ ರೀತಿಯಾಗಲಿ ಮುಂದೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ, ಕೆಲವರು ಇದನ್ನು ಅಸಿಡಿಟಿ ಎಂದು ನಿರ್ಲಕ್ಷಿಸುವುದುಂಟು, ನಿಮಗೆ ಯಾವತ್ತಿಗೂ ಎಡೆ ನೋವು ಬಂದೆ ಇರುವುದಿಲ್ಲ ಆದರೆ ಒಂದು ದಿನ ಇದ್ದಕ್ಕೆ ಇದ್ದ ಹಾಗೆ ಬಂದರೆ ಏನೋ ತೊಂದರೆಯ ಸೂಚಕ ತಾನೇ?

ಉಸಿರಾಟದಲ್ಲಿ ತೊಂದರೆ: 

ನಿಮ್ಮ ಎದೆಯ ಭಾಗದಲ್ಲಿ ಅತೀವ ತೊಂದರೆ ಉಂಟಾಗಿ ನಿಮಗೆ ಉಸಿರಾಡುವುದೇ ಕಷ್ಟಕರವಾಗುತ್ತದೆ, ಕೆಲವರು ಕೆಲಸ ಮಾಡಿ ಸುಸ್ತಾಗಿರುವುದಕ್ಕೆ ಈ ರೀತಿಯಾಗಿರಬಹುದು ಎಂದು ನಿರ್ಲಕ್ಷಿಸುವುದುಂಟು ಆದರೆ ಈರೀತಿಯಾಗಿ ಮುಂದೆಂದೂ ಮಾಡಬೇಡಿ.

ಜ್ವರ ಮತ್ತು ಶೀತ:

ಅರಾಮಿದ್ದವರು ಒಮ್ಮೆಲೇ ತೀವ್ರ ಒತ್ತಡಕ್ಕೆ ಒಳಗಾಗಿ ಜ್ವರ ಅಥವಾ ಶೀತಕ್ಕೆ ತುತ್ತಾಗುತ್ತಾರೆ ಇದು ಕೂಡ ಹೃದಯಾಘಾತವಾಗುವ ಲಕ್ಷಣವಿರಬಹುದು ಯಾವುದಕ್ಕೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಒಮ್ಮೆಲೇ ಬೆವರುವುದು:

ಸುಸ್ತಾಗಿ ಬೆವರುವುದು ಬೇರೆ ಆರಾಮಾಗಿದ್ದವರು ಬೆವರುವುದು ಬೇರೆ.! ನೀವು ಆರಾಮಾಗಿ ಕುಳಿತಾಗ ಒಮ್ಮೆಲೇ ಜೋರಾಗಿ ಬೆವರುವುದು ಹೃದಯಾಘಾತ ಆಗುವ ಮತ್ತೊಂದು ಪ್ರಮುಖ ಲಕ್ಷಣ.

ನಿಶ್ಯಕ್ತಿ ಕಾಡುವುದು :

ಹೊಟ್ಟೆಗೆ ಬೇಕಾದದ್ದನ್ನೆಲ್ಲ ತಿಂದು ಗಟ್ಟಿ ಮುಟ್ಟಾಗಿರುವವರಿಗೆ ಒಮ್ಮೆಲೇ ನಿಶ್ಯಕ್ತಿ ತಾಣ ಕಾಡುತ್ತಿರುವುದು ಸಾಮಾನ್ಯ ಕಾರಣವಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬೇಕು ನಿಮಗೆ ಹೀಗೆ ಆಗುತ್ತಿಇದರೆ ಯಾವುದಕ್ಕೂ ಒಮ್ಮೆ ಹೃದಯ ಸಂಭಂದಿತ ಖಆಯಿಲ್ ನೋಡುವ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಸೂಚನೆ : ಈ ಮೇಲಿನ ತೊಂದರೆಗಳು ನಿಮ್ಮಲ್ಲಿ ಕಂಡು ಬಂದರೆ ನೀವು ತಕ್ಷಣ ನಿಮ್ಮ ಹತ್ತಿರದ ನುರಿತ ವೈದ್ಯರನ್ನು ಭೇಟಿ ಮಾಡಿ ಈ ಲೇಖನ ನಿಮ್ಮಲ್ಲಿ ಜಾಗೃತಿ ಮೂಡಿಸುತ್ತದೆಯೇ ವಿನಃ ನಿಮ್ಮ ತೊಂದರೆಗೆ ಪರಿಹಾರ ಸೂಚಿಸುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ: http://www.vaartaasante.com/medical-disclaimer/

 

LEAVE A REPLY

Please enter your comment!
Please enter your name here