ಮಾವಿನ ಕುಲ್ಫಿ ಮಾಡಲು ಬೇಕಾಗುವ ಪದಾರ್ಥಗಳು

೧. ಸಣ್ಣದಾಗಿ ಹೆಚ್ಚಿಟ್ಟುಕೊಂಡ ಮಾವಿನ ಹಣ್ಣು -2

೨. ಕಾಯಿಸಿ ಆರಿಸಿದ ಹಾಲು – 400 ಎಮ್. ಎಲ್

೩. ಹಾಲಿನ ಕೆನೆ ಅಥವಾ ಕ್ರೀಮ್ – 1 ಬಟ್ಟಲು

೪. ಏಲಕ್ಕಿ ಪುಡಿ -2 ಚಮಚ

೫. ಕಾನ್ಡೆನ್ಸ್ಡ್ ಮಿಲ್ಕ್ ಅಥವಾ ಗಟ್ಟಿಯಾದ ಹಾಲು ಮತ್ತು ಸಕ್ಕರೆ ಮಿಶ್ರಣ

೬. ಚಿಕ್ಕದಾಗಿ ಪುಡಿ ಮಾಡಿಕೊಂಡ ಪಿಸ್ತಾ, ಬಾದಾಮಿ,ಗೋಡಂಬಿ

೭. ಸ್ವಲ್ಪ ಕೇಸರಿ

ಮಾವಿನ ಕುಲ್ಫಿ ಮಾಡುವ ವಿಧಾನ:

ಮೊದಲು ಸಣ್ಣದಾಗಿ ಹೆಚ್ಚಿಟ್ಟುಕೊಂಡ ಮಾವಿನ ಹಣ್ಣು, ಹಾಲು, ಕ್ರೀಮ್, ಕಂಡೆನ್ಸ್ಡ್ ಮಿಲ್ಕ್ ,ಮತ್ತು ಏಲಕ್ಕಿ ಪುಡಿಯನ್ನು ಮಿಕ್ಸೀಯಲ್ಲಿ ಹಾಕಿ ತಿರುವಿಕೊಳ್ಳಬೇಕು. ಆ ಮಿಶ್ರಣವು ಚೆನ್ನಾಗಿ ಗಟ್ಟಿಯಾಗುವವರೆಗೂ (ಮಂದವಾಗುವವರೆಗೂ) ಅದನ್ನು ತಿರುವಿಕೊಳ್ಳಬೇಕು.

ನಂತರ ಈ ಮಿಶ್ರಣವನ್ನು ಚಿಕ್ಕ ಮಡಿಕೆಗಳು ಅಂದರೆ ಮಟ್ಕಾಗಳಲ್ಲಿ /ಅಥವಾ ಸ್ಟೀಲ್ ಲೋಟಗಳಲ್ಲಿ ಸಣ್ಣದಾಗಿ ಪುಡಿ ಮಾಡಿಕೊಂಡ ಪಿಸ್ತಾ, ಬಾದಾಮಿ,ಗೋಡಂಬಿ ಮತ್ತು ಕೇಸರಿಯನ್ನು ಸೇರಿಸಬೇಕು ಹಾಗೂ ಮಾವಿನ ಕುಲ್ಫಿ ಮತ್ತಷ್ಟು ಆಕರ್ಷಣೀಯವಾಗಿ ಕಾಣಲು ಈ ಡ್ರೈ ಫ್ರೂಟ್ಸ್ಗಳನ್ನು ಕುಲ್ಫಿ ಮಿಶ್ರಣದ ಮೇಲ್ ಭಾಗದಲ್ಲಿ ಗ್ರೇಟ್ ಮಾಡಬಹುದು.

ನಂತರ ಈ ಕುಲ್ಫಿ ಮಿಶ್ರಣವನ್ನು ಸುಮಾರು 6 ರಿಂದ 8 ಗಂಟೆಗಳ ಕಾಲ ಫ್ರಿಡ್ಜ್ನಲ್ಲಿ ಫ್ರೀಸ್ ಮಾಡಬೇಕು . 8 ಗಂಟೆಗಳ ನಂತರ ಮಿಶ್ರಣವು ಐಸ್ ಕ್ರೀಮ್ನ ರೀತಿ ಗಟ್ಟಿಯಾಗಿದ್ದರೆ , ಬೇಸಿಗೆಯ ಬೇಗೆಗೆ ಮಾವಿನ ಕುಲ್ಫಿ ಸವಿಯಲು ಸಿದ್ದ. ಈ ಕುಲ್ಫಿಯನ್ನು ನೀವು ಸುಮಾರು ೨ ದಿನಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟು ತಿನ್ನಬಹುದು .

ವಿಶೇಷ ಸೂಚನೆ :

1.ಕುಲ್ಫಿ ಮಿಶ್ರಣವನ್ನು ಫ್ರಿಡ್ಜ್ನಲ್ಲಿ ಫ್ರೀಸ್ ಮಾಡುವ ಕಾರಣ ಗಾಜು/ ಪಿಂಗಾಣಿ ಲೋಟಗಳನ್ನು ಬಳಸಲು ಸಾಧ್ಯವಿಲ್ಲ.

2. ಸಮಯ ಇದ್ದಲ್ಲಿ ಕಂಡೆನ್ಸ್ಡ್ ಮಿಲ್ಕ್ ಅನ್ನು ಮನೆಯಲ್ಲಿಯೂ ತಯಾರಿಸಬಹುದು.

3. ಬೇಸಿಗೆಯಲ್ಲಿ ಮನೆಯಲ್ಲಿ ನಿರಾಯಾಸವಾಗಿ ಮಾಡಬಹುದಾದ ಕುಲ್ಫಿ ಇದು.

4. ಐಸ್ ಕ್ರೀಮ್ ಕಡ್ಡಿಗಳನ್ನು ಕೂಡ ಕುಲ್ಫಿ ಮಿಶ್ರಣದ ಮಧ್ಯದಲ್ಲಿ ಸೇರಿಸಿ ಕುಲ್ಫಿಯನ್ನು ಮಜವಾಗಿ ತಿನ್ನಬಹುದು.

LEAVE A REPLY

Please enter your comment!
Please enter your name here