ಉತ್ತರ ಕರ್ನಾಟಕ, ಒಂದು ವೈವಿದ್ಯತೆಯ ಪ್ರದೇಶವೂ ಹೌದು ಇದರಲ್ಲಿ ಅನೇಕ ದೇವಸ್ಥಾನಗಳು, ಪುರಾಣ ಪ್ರಸಿದ್ಧ ಕ್ಷೇತ್ರಗಳು ಪುರಾತನ ನಗರಗಳು ಸೇರಿವೆ. ನಾವು ಈಗ ನಿಮ್ಮ 4 ದಿನಗಳನ್ನು ಉತ್ತರ ಕರ್ನಾಟಕದಲ್ಲಿ ಹೇಗೆ ಕಳೆಯಬಹುದು ಎಂದು ತೋರಿಸುತ್ತೇವೆ.

ಮೊದಲ ದಿನ:

ಹಂಪಿ:

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಬರುವ ಹಂಪಿ / ವಿಜಯನಗರ ಒಂದು ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದ್ದು ಇದನ್ನು ಪ್ರಖ್ಯಾತ ಶ್ರೀ ಕೃಷ್ಣ ದೇವರಾಯನು ಆಳಿದ್ದನು, ಹಂಪಿಯಲ್ಲಿ ನೀಡತಕ್ಕ ಸ್ಥಳಗಳು ಅಗಣಿತ, ಶ್ರೀ ವಿರೂಪಾಕ್ಷ ನನ್ನಿದಿ  ಇಡೀ ಸ್ಥಳವನ್ನು ಮತ್ತಷ್ಟು ಶಕ್ತಿಯುತವಾಗಿಸುತ್ತದೆ.

ಹಂಪಿಯಲ್ಲಿ ನೋಡತಕ್ಕ ಪ್ರಸಿದ್ಧ ಕ್ಷೇತ್ರಗಳು:

  • ವಿರುಪಾಕ್ಷ ದೇವಾಲಯ
  • ಜೈನರ ಬಸದಿಗಳು
  • ಕಲ್ಲಿನ ರಥ
  • ವಿಜಯವಿಠ್ಠಲ ದೇವಾಲಯ
  • ಹೇಮಕೂಟ ಪರ್ವತ
  • ಉಗ್ರ ನರಸಿಂಹ ದೇವಾಲಯ ಇತ್ಯಾದಿ

ಎರಡನೆಯ ದಿನ:

ಬಾದಾಮಿ:

ಬಾದಾಮಿ ಕರ್ನಾಟಕದ ಬಾಗಲೋಕೋಟೆ ಜಿಲ್ಲೆಯಲ್ಲಿ ಸಿಗುವಂತಹ ಪ್ರಸಿದ್ಧ ನಗರ, ಇಲ್ಲಿ ಸಿಗುವ ಗುಹಾಂತರ ದೇವಾಲಯ ವಿಶ್ವ ವಿಖ್ಯಾತಿ ಪಡೆದಿದೆ, ಬಾದಾಮಿಯನ್ನು ವಾತಾಪಿ ಎಂದು ಕಡೆದದ್ದುಂಟು.

ಬಾದಾಮಿಯಲ್ಲಿ ನೋಡತಕ್ಕ ಪ್ರಸಿದ್ಧ ಕ್ಷೇತ್ರಗಳು:

  • ಬಾದಾಮಿಯ ಗುಹಾಂತರ ದೇವಾಲಯ
  • ಭೂತನಾಥ ದೇವಾಲಯ
  • ಮಲ್ಲಿಕಾರ್ಜುನ ದೇವಾಲಯ
  • ಜಂಭುಲಿಂಗ ದೇವಾಲಯ

ಮೂರನೆಯ ದಿನ:

ಪಟ್ಟದಕಲ್ಲು:

ಬಾದಾಮಿ ನಗರದಿಂದ ಕೇವಲ 22 ಕಿಮಿ ದೂರದಲ್ಲಿರುವ ಮತ್ತೊಂದು ಪ್ತಖ್ಯಾತ ಪ್ರೇಕ್ಶಣೀಯ ಸ್ಥಳ ಪಟ್ಟದಕಲ್ಲು, ಪಟ್ಟದಕಲ್ಲು ಮಲಪ್ರಭಾ ನದಿಯ ತಟದಲ್ಲಿರುವ ಪ್ರದೇಶ,  ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗು೦ಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ – ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ – ಎರಡನ್ನೂ ಇಲ್ಲಿ ಕಾಣಬಹುದು.

ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವ೦ಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವ೦ಶದ ಅರಸರು ಏಳನೇ ಮತ್ತು ಎ೦ಟನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒ೦ಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿ೦ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಲಾಯಿತು. ಇದು ಕಂಚಿಯ ಕೈಲಾಸನಾಥರ್ ದೇವಾಲಯದಂತೆ ಇದ್ದು ಅದನ್ನು ನೋಡಿ ಸ್ಫೂರ್ತಿಗೊಂಡು ಕಟ್ಟಿಸಲಾಗಿದೆ.ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.

ನಾಲ್ಕನೆಯ ದಿನ:

ಐಹೊಳೆ:

ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಐಹೊಳೆ ಒಂದು “ಅಧಿ ಷ್ಠಾನ”. ಅಂದರೆ ಸರಕಾರದ ಆಡಳಿತಾಕಾರದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿಐಹೊಳೆ ಯಾಯಿ ತು. ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಐಹೊಳೆಗೆ ಭಾರತೀಯ ಇತಿಹಾಸದಲ್ಲಿ ತುಂಬ ಮಹತ್ವದ ಸ್ಥಾನವಿದೆ. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. 6ರಿಂದ 8ನೇ ಶತಮಾನದವರೆಗೆ ಗುಹಾಲಯ ಹಾಗು ದೇವಾಲಯಗಳ ನಿರ್ಮಾಣದಲ್ಲಿ ಅನೇಕ ರೀತಿಯ ಪ್ರಯೋಗಗಳು ನಡೆದದ್ದನ್ನು ಕಾಣುತ್ತೇವೆ. ಶಾಸನದಲ್ಲಿ ಈ ಸ್ಥಳವನ್ನು ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು ಬರುಬರುತ್ತ ಐಹೊಳೆ ಆಗಿರುವ ಸಾಧ್ಯತೆ ಇದೆ. ಇದಲ್ಲದೇ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ ಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಯೊಂದರಲ್ಲಿ ತೊಳೆದಾಗ ಇಡೀ ನದಿ ನೀರೆ ಕೆಂಪಾಯ್ತತಂತೆ. ಇದನ್ನು ಕಂಡು ಊರಿನ ಮಹಿಳೆಯರು ‘ಅಯ್ಯಯ್ಯೋ ಹೊಳಿ” ಎಂದು ಉದ್ಗರಿಸಿದ್ದೇ ಮುಂದೆ ಬರುಬರುತ್ತ ಐಹೊಳೆಯಾಯ್ತೆಂಬ ಪೌರಾಣಿಕ ಐತಿಹ್ಯಗಳೂ ಈ ಊರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ.

ವಿಜಯಪುರ: (ಬಿಜಾಪುರ)

ಪುರಾತನ ಹೆಸರು ವಿಜಯಪುರ ,ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. ೧೦-೧೧ ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. ೧೩ ನೆ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ಬಿಜಾಪುರ, ಕಿ. ಶ. ೧೩೪೭ ರಲ್ಲಿ ಬೀದರಿನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.

ವಿಜಯಪುರದಲ್ಲಿ ಪ್ರಸಿದ್ಧ ಗೋಳ ಗುಮ್ಮಟ, ಬಾರಕ್ಕಮಾನ್ ಇನ್ನು ಹತ್ತು ಹಲವು ನೋಡತಕ್ಕ ಜಾಗಗಳಿವೆ.

 

 

 

 

 

LEAVE A REPLY

Please enter your comment!
Please enter your name here