ಚಿನ್ನ ಧರಿಸುವಾಗ ನೆನಪಿಡಬೇಕಾದ ವಿಷಯಗಳು

ಚಿನ್ನಕ್ಕೆ ಶಕ್ತಿ ಮತ್ತು ಉಷ್ಣವನ್ನು ಹೀರುವ ಗುಣವಿದೆ. ಹಾಗೂ ಇದು ವಿಷ ನಿವಾರಣೆಯನ್ನೂ ಮಾಡುತ್ತದೆ.

ಶೀತ- ಕೆಮ್ಮಿನ ತೊಂದರೆಯಿದ್ದಾಗ ಕಿರು ಬೆರಳಿಗೆ ಚಿನ್ನದ ಉಂಗುರ ಧರಿಸಿ. ಹೆಸರು, ಕೀರ್ತಿ ಮತ್ತು ಅಂತಸ್ತಿನ ಸಮಸ್ಯೆಗೆ ನಡುಬೆರಳಿಗೆ ಉಂಗುರ ಧರಿಸುವುದು ಒಳ್ಳೆಯದು.

ಏಕಾಗ್ರತೆಯ ಕೊರತೆ ಮತ್ತು ಚಂಚಲತೆಯ ನಿವಾರಣೆಗೆ ಉಂಗುರವನ್ನು ತೋರುಬೆರಳಿಗೆ ಧರಿಸಿ.

ಸಾಂಸಾರಿಕ ಜೀವನದ ತೊಡಕುಗಳು, ವೈವಾಹಿಕ ಜೀವನದ ಸಾಮರಸ್ಯದ ಕೊರತೆಯ ನಿವಾರಣೆಗೆ ಚಿನ್ನವನ್ನು ಕುತ್ತಿಗೆಯಲ್ಲಿ ಸರ ಅಥವಾ ಪದಕದ ರೂಪದಲ್ಲಿ ಧರಿಸಿ.

ಗರ್ಭ ಧರಿಸಲು ತೊಂದರೆಯಿರುವವರು ಉಂಗುರದ ಬೆರಳಿಗೆ ಧರಿಸುವುದು ಉತ್ತಮ.

ಹೊಟ್ಟೆಯಲ್ಲಿ ತೊಂದರೆ ಮತ್ತು ಬೊಜ್ಜಿನ ಸಮಸ್ಯೆಯಿದ್ದವರು, ಬೇಗನೆ ಕೋಪ ಹೊಂದುವವರು ಚಿನ್ನವನ್ನು ಧರಿಸದಿರುವುದು ಒಳ್ಳೆಯದು. ಜಾತಕದಲ್ಲಿ ಗುರುವು ಉಚ್ಛ ಸ್ಥಿತಿಯಲ್ಲಿರುವಾಗಲೂ ಚಿನ್ನ ಧರಿಸದಿರಿ.

ಕಬ್ಬಿಣ ಮತ್ತು ಕಲ್ಲಿದ್ದಲಿನ ವ್ಯಾಪಾರಿಗಳು, ಶನಿಗೆ ಸಂಬಂಧಿಸಿದ ವಸ್ತುಗಳ ವ್ಯವಹಾರದಲ್ಲಿರುವವರು, ಗರ್ಭಿಣಿಯರು ಮತ್ತು ವಯಸ್ಸಾದವರು ಚಿನ್ನ ಧರಿಸುವುದು ಕಡಿಮೆ ಮಾಡಬೇಕು.

ಕನಸಿನಲ್ಲಿ ಚಿನ್ನ ಅಥವಾ ಹಣವನ್ನು ಕಾಣುವುದು ಒಳಿತಲ್ಲ. ಇದು ಚರ್ಮ ರೋಗದ ಸಂಕೇತ. ಕನಸಿನಲ್ಲಿ ಚಿನ್ನ ಕಂಡರೆ, ಕಷ್ಟವನ್ನು ಅನುಭವಿಸಿದ ನಂತರ ಧನ ಪ್ರಾಪ್ತಿ ಮತ್ತು ಹಳೆಯ ಚಿನ್ನದ ನಾಣ್ಯಗಲು ಕಂಡರೆ ನಿಮ್ಮ ಔದ್ಯೋಗಿಕ ರಂಗದ ಅಡೆತಡೆಗಳನ್ನು ಸೂಚಿಸುತ್ತದೆ.

ಸೊಂಟದ ಕೆಳಗೆ ಚಿನ್ನ ಧರಿಸಿದರೆ ದುರಾದೃಷ್ಟ ಮತ್ತು ಸಂಪತ್ತು ನಾಶ ಆಗಬಹುದು. ಇದು ಲಕ್ಷ್ಮೀ ದೇವಿಯನ್ನು ಅಪಮಾನ ಮಾಡಿದಂತಾಗುತ್ತದೆ. ಆದರೆ ಮಕ್ಕಳು ಕೆಂಪು ನೂಲಿನಲ್ಲಿ ಸೊಂಟದಲ್ಲಿ ಚಿನ್ನ ಧರಿಸುವುದು ಒಳ್ಳೆಯದು.

ಚಿನ್ನ ಧರಿಸಿದ್ದಾಗ ಮಾಂಸಾಹಾರ ಸೇವನೆ ಮತ್ತು ಮದ್ಯಪಾನಗಳನ್ನು ಮಾಡಬಾರದು ಎಂದು ಹೇಳುತ್ತಾರೆ.

ಲಾಕರಿನಲ್ಲಿ ಚಿನ್ನವನ್ನು ಇಡುವಾಗ ಕೆಂಪು ಬಣ್ಣದ ಬಟ್ಟೆ ಅಥವಾ ಪೇಪರಿನಲ್ಲಿ ಸುತ್ತಿಡಿ. ಪೂರ್ವ ಅಥವಾ ನೈರುತ್ಯ ಭಾಗದಲ್ಲಿಟ್ಟರೆ ಒಳ್ಳೆಯದು.

ತಲೆಯ ಬಳಿ ಚಿನ್ನವನ್ನು ಇಟ್ಟರೆ ನಿದ್ರೆಯ ಸಮಸ್ಯೆಗಳು ಬರಬಹುದು. ಕಬ್ಬಿಣ ಅಥವಾ ಇತರೆ ಮಿಶ್ರ ಲೋಹಗಳನ್ನು ಚಿನ್ನದೊಂದಿಗೆ ಧರಿಸಬೇಡಿ.

ಮೇಷ, ಕಟಕ, ಸಿಂಹ ಮತ್ತು ಧನು ರಾಶಿಗಳಿಗೆ ಚಿನ್ನ ಶ್ರೇಷ್ಟ.

ವೃಶ್ಚಿಕ ಮತ್ತು ಮೀನ ರಾಶಿಗೆ ಮಿಶ್ರ ಫಲ.

ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಅಷ್ಟೇನೂ ಒಳಿತಲ್ಲ.

ತುಲಾ ಮತ್ತು ಮಕರ ರಾಶಿಯವರು ಚಿನ್ನವನ್ನು ಆದಷ್ಟೂ ಕಡಿಮೆ ಧರಿಸಿದರೆ ಒಳ್ಳೆಯದು.

ಲೇಖನ : ಅಶ್ವಿನಿ ಪ್ರಕಾಶ್ 

LEAVE A REPLY

Please enter your comment!
Please enter your name here