ಬೆಳಗ್ಗೆ ಒಂದು ಲೋಟ ನೀರು:

ನೀವು ಎಷ್ಟು ಬೇಗ ಏಳುತ್ತಿರಿ ಆ ಸಮಯದಲ್ಲೇ ಒಂದು ಲೋಟ ಮರೆಯದೆ ನೀರನ್ನು ಕುಡಿಯಿರಿ, ಇದು ನಿಮಗೆ ನಿಮ್ಮ ದೇಹದಲ್ಲಿ ಅಡಕವಾಗಿರೋ ಕಲ್ಮಶವನ್ನು ತೊಡೆದು ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ ಇದರಿಂದ ನಿಮ್ಮ ತೂಕ ಸಾಮಾನ್ಯವಾಗಿ ಕಡಿಮೆಯಾಗುತ್ತದೆ.

ದಿನಒಂದಕ್ಕೆ 8 ಲೋಟಗಳು:

ಹೌದು ಯಾವ ವ್ಯಕ್ತಿ ಕನಿಷ್ಠ ದಿನಒಂದಕ್ಕೆ 8 ಲೋಟ ನೀರನ್ನು ಕುಡಿಯುತ್ತಾನೋ ಅವನ ದೇಹಕ್ಕೆ ಬರಬಹುದಾದ ದೊಡ್ಡ ತೊಂದರೆಗಳು ಹತ್ತಿರಕ್ಕೆ ಸುಳಿಯುವುದಿಲ್ಲ.  ಇದರಲ್ಲಿ ಗಂಡಸು ದಿನಕ್ಕೆ 13 ಲೋಟ ನೀರು ಕುಡಿದರೆ ಉತ್ತಮ ಅದೇ ಒಬ್ಬ ಹೆಣ್ಣು ದಿನಕ್ಕೆ 8 ರಿಂದ 9 ಲೋಟ ನೀರು ಕುಡಿದರೆ ಉತ್ತಮ ಇದು ನಿಮ್ಮ ದೇಹ ತೂಕವನ್ನು ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ.

ಊಟ ಮಾಡುವಾಗ ನೀರು:

ಊಟ ಮಾಡುವಾಗ ಸಾದ್ಯವಾಳದಷ್ಟು ನೀರನ್ನು ಕುಡಿಯದೆ ಇರುವುದು ಒಳಿತು, ಒಂಟೆ ಮೊದಲು ಅಥವಾ ಊಟದ ನಂತರ ನೀರನ್ನು ಬೇಕಾಗುವಷ್ಟು ಕುಡಿದರೆ ನಿಮ್ಮ ದೇಹಕ್ಕೆ ಒಲಿ ಇದು ನಿಮ್ಮ ತೂಕ ನಿಯಂತ್ರಣ ಮಾಡುವಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತದೆ.

ಮಲಗುವಾಗ:

ಯಾವುದೇ ಕಾರಣಕ್ಕೂ ಮಲಗುವ ಮೊದಲು ನೀರನ್ನು ಒಂದೇ ಸಮನಾಗಿ ಕುಡಿಯಬೇಡಿ ಇದರಿಂದ ನಿಮ್ಮ ದೇಹಕ್ಕೆ ಆಗುವ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿ, ಆದ್ದರಿಂದ ಮಲಗುವ ಸಂಧರ್ಭದಲ್ಲಿ ಮಿತವಾಗಿ ನೀರು ಕುಡಿಯಿರಿ ಬೆಳಗ್ಗೆ ಎದ್ದ ಮೇಲೆ ಆದಷ್ಟು ಜಾಸ್ತಿ ನೀರು ಕುಡಿಯಿರಿ ಇದರಿಂದ ನಿಮ್ಮ ದೇಹದ ತೂಕ ಸಹಜವಾಗಿತೆ ಕಡಿಮೆಯಾಗಲಿದೆ.

LEAVE A REPLY

Please enter your comment!
Please enter your name here