ನಾವು ದಿನಂಪ್ರತಿ ಎಷ್ಟೊಂದು ಚಿಕ್ಕ ಚಿಕ್ಕ ವಿಷಯಕ್ಕೆ ಚಿಕ್ಕ ಚಿಕ್ಕ ವಸ್ತುಗಳನ್ನು ಬಳಸುತ್ತೀವಿ.ಕೆಲವು ಅನಿವಾರ್ಯ ಇನ್ನೂ ಕೆಲವು ಹವ್ಯಾಸ.ಇನ್ನೂ ಕೆಲವು ವಸ್ತುಗಳನ್ನು ನಾವು ಉಪಯೋಗಿಸಲೇ ಬೇಕು,ಆದರೆ ಆ ವಸ್ತುಗಳು ನಮ್ಮನ್ನು ಬಿಟ್ಟು ಬೇರೆ ಯಾರು ಉಪಯೋಗಿಸುವಂತಿಲ್ಲ..ಆ ವಸ್ತುಗಳು ಯಾವುವು ? ಏಕೆ ಬೇರೆಯವರು ಉಪಯೋಗಿಸಬಾರದು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಾಬೂನು

ನಾವು ಪ್ರತಿ ದಿನ ಸ್ನಾನ ಮಾಡಲು ಸಾಬೂನುಗಳನ್ನು ಬಳಸುತ್ತೇವೆ.ಆದರೆ ಹೆಚ್ಚಿನ ಮನೆಯಲ್ಲಿ ಒಂದೆ ಸಾಬೂನುಗಳನ್ನು ಹಲವಾರು ಮಂದಿ ಉಪಯೋಗಿಸುತ್ತಾರೆ.ಪ್ರತಿ ಬಳಕೆಯ ನಂತರ‌ ಚರ್ಮದ ಮೇಲಿರುವ ರೋಗಾಣುಗಳು, ಸೂಕ್ಷ್ಮಜೀವಿಗಳು ಸಾಬೂನಿನ ಮೇಲೆ ಅಂಟಿಕೊಂಡಿರುತ್ತವೆ.ಇದೆ ಸಾಬೂನುಗಳು ಬೇರೆಯವರು ಉಪಯೋಗಿಸಿದ ಮೇಲೆ ಅವರ ಮೈ ಮೇಲೆ ಈ ಕಿಟಾಣುಗಳು ಅಂಟಿಕೊಳ್ಳುತ್ತವೆ.ನಾವು ದೇಹ ಸ್ವಚ್ಛ ಆಗಲು ಉಪಯೋಗಿಸುವ ಸಾಬೂನು ನಮ್ಮನ್ನು ಖಾಯಿಲೆಗ್ರಸ್ಥರನ್ನಾಗಿಸುತ್ತದೆ.

ಆದುದರಿಂದ ಒಂದು ಸಾಬೂನನ್ನು ಒಬ್ಬರೆ ಉಪಯೋಗಿಸಿ ಹಾಗೂ ಬೇರೆ ಕಡೆ ಒಂದೆರಡು ದಿನದ ಮಟ್ಟಿಗೆ ಹೋದಾಗ ಕಡಿಮೆ ದರದ ಚಿಕ್ಕ ಸಾಬೂನಗಳನ್ನು ಉಪಯೋಗಿಸಿ.

ಟವೆಲ್(ಶಾಲು)

ಸ್ನಾನದ ನಂತರ ಒಬ್ಬರ ಟುವೆಲನ್ನು ಇನ್ನೊಬ್ಬರು ಉಪಯೋಗಿಸುವುದು ತುಂಬಾ ಮಾಮೂಲು ಆದರೆ ಇದರಿಂದ ಬ್ಯಾಕ್ಟೀರಿಯಾಗಳು ಹರಡಿ ಅನಾರೋಗ್ಯಕ್ಕೆ ತುತ್ತಾಗುವ ಸಂಭಂವ ಇದೆ.ಒದ್ದೆಯಾದ ಬೇರೆಯವರ ಟವೆಲ್ ಗಳನ್ನು ಬಳಸದಿರಿ ಹಾಗೂ ಪ್ರತಿಸಲ ಎಲ್ಲಿಯಾದರೂ ಉಳಿಯುವ ಸಂದರ್ಭ ಇದ್ದಾಗ ನೀವೆ ಒಂದು ಟವೆಲ್’ನ್ನು ಕೊಂಡುಹೋಗಿ.ಒದ್ದೆಯಾದ ಟವೆಲ್’ಗಳನ್ನು ಬಳಸದೆ ಇರಿ ಪ್ರತಿಸಲ ಟವೆಲ್ ಉಪಯೋಗಿಸಿದ ನಂತರ ಸಂಪೂರ್ಣ ಒಣಗಿಸಲು ಬಿಡಿ ಪ್ರತಿ 3-4 ಬಳಕೆಯ ನಂತರ ಒಗೆದು ಸಂಪೂರ್ಣ ಒಣಗಿಸಿ.ಇದರಿಂದ ಒದ್ದೆ ಟವೆಲ್’ನಲ್ಲಿ ಬೆಳೆಯುವ ರೋಗಾಣುಗಳಿಂದ ದೂರ ಇರಲು ಸಾಧ್ಯವಾಗುವುದು.

ಟೂತ್ ಪೇಸ್ಟ್

ನಮಗೂ ನಿಮಗೂ ಈ ಟೂತ್ ಪೇಸ್ಟ್ ಬೇರೆಯವರೊಂದಿಗೆ ಹಚ್ಚಿಕೊಳ್ಳಬಾರದೆಂಬ ವಿಷಯ ಗೊತ್ತಿರಲಿಕ್ಕಿಲ್ಲವೇನೊ.ಹೌದು ಟೂತ್ ಪೇಸ್ಟ್ ಹಂಚಿಕೊಳ್ಳೊದು ಅಪಾಯಕಾರಿ.ಅದೆಗೆಂದರೆ ಪ್ರತಿ ಸಲ ಟೂತ್ ಪೇಸ್ಟಿನಿಂದ ಪೇಸ್ಟ್ ಹಾಕಿಕೊಳ್ಳುವಾಗ ಬ್ರಷ್’ಗೆ ತಾಗಿಸಿ ಟೂತ್ ಪೇಸ್ಟ್ ಹಾಕಿಕೊಳ್ಳುತ್ತವೆ ಇದರಿಂದ ನಾವು ಮೊದಲೆ ಹೇಳಿದ ಹಾಗೆ ಬ್ರಷ್’ನಲ್ಲಿರುವ ಬ್ಯಾಕ್ಟೀರಿಯಾಗಳು ಟೂತ್ ಪೇಸ್ಟ್ ಹಾಗೂ ಅದರ ಕುತ್ತಿಗೆಯ ಭಾಗಕ್ಕೆ ತಾಗಿ ಅದು ಬೇರೆಯವರಿಗೆ ಹರಡುತ್ತದೆ.ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದಂತು ನಿಜ.

ಬ್ರಷ್

ಮೂಲಗಳ ಪ್ರಕಾರ ನಮ್ಮ ದೇಹದ ಯಾವುದೇ ಭಾಗಕ್ಕಿಂತ ಹಲ್ಲಿನಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾಗಳು ಇರುತ್ತವೆ ನಾವು ಹಲ್ಲುಜ್ಜಿದ ನಂತರ ಕೆಲವು ಬ್ಯಾಕ್ಟೀರಿಯಾಗಳು ಬ್ರಷ್’ನಲ್ಲಿಯೆ ಉಳಿದುಕೊಳ್ಳುತ್ತವೆ.ಆದುದರಿಂದ ಈ ಬ್ಯಾಕ್ಟೀರಿಯಾಗಳು ಬೇರೆಯವರ ದೇಹ ಸೇರಬಾರದೆಂಬ ಕಾರಣಕ್ಕಾಗಿ ನಾವು ನಮ್ಮ ಬ್ರಷ್’ನ್ನು ಬೇರೆಯವರ ಉಪಯೋಗಕ್ಕೆ ನೀಡಬಾರದು.ಹಾಂ..ಮತ್ತೊಂದು ವಿಷಯ ಪ್ರತಿ 6 ತಿಂಗಳಿಗೊಮ್ಮೆ ಬ್ರಷ್ ಬದಲಾವಣೆ ಉತ್ತಮ‌.

ಕಿವಿಯೊಲೆ

ಭಾರತೀಯ ಮಹಿಳೆಯರಲ್ಲಿ ಈ ಅಭ್ಯಾಸ ತುಂಬಾ ಜಾಸ್ತಿ ಅದೆನೆಂದರೆ ಕಿವಿಯೊಲೆಗಳನ್ನು ಪರಸ್ಪರ ಹಂಚ್ಚಿಕೊಳ್ಳುವುದು.ಇದರಿಂದ ರಕ್ತದ ಮೂಲಕ ಹರಡುವ ಸೋಂಕುಗಳು ಈ ರೀತಿಯಲ್ಲಿ ಪ್ರಸಾರ ಸಾಧ್ಯತೆಯಿದೆ.ಆದುದರಿಂದ ಬೇರೆಯವರೊಂದಿಗೆ ಕಿವಿಯೊಲೆಗಳನ್ನು ಹಂಚಿಕೊಳ್ಳುವ ಮುನ್ನ ಕಿವಿಯೊಲೆಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸಿ.ಬೇರೆಯವರಿಗೆ ಕಿವಿಯೊಲೆಯನ್ನ ಕೊಡುವ ಮುನ್ನ ಹಾಗೂ ಪಡೆದುಕೊಳ್ಳುವ ಮೊದಲು ಸ್ವಚ್ಛಗೊಳಿಸಿ ಉಪಯೋಗಿಸಿ.

ಚಪ್ಪಲಿಗಳು

ಕೆಲವರಿಗೆ ಬೇರೆಯವರ ಚಪ್ಪಲಿಗಳನ್ನು ಉಪಯೋಗಿಸುವ ಅಭ್ಯಾಸ ಇದೆ.ಆದರೆ ಇದೆ ಅಭ್ಯಾಸದಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.ಚಪ್ಪಲಿ ಉಪಯೋಗಿಸಿದ ನಂತರ ಕಾಲಿನ ಬೆವರುಗಳು ಚಪ್ಪಲಿಯಲ್ಲೆ ಉಳಿದು ಕೊಳ್ಳುತ್ತವೆ.ಇದಾದ ನಂತರ ಬೇರೆಯವರು ಅದೆ ಚಪ್ಪಲಿ ಹಾಕಿಕೊಂಡಾಗ ಆ ಬೆವರುಗಳು ಕಾಲಿಗೆ ಅಂಟಿಕೊಂಡು Molluscum ಎಂಬ ವೈರಸ್ ಹರಡುತ್ತದೆ.ಇದರಿಂದ ಚರ್ಮದಮೇಲೆ ಬಿಳಿ ಕುರುಹು ಕಾಣಿಸಿಕೊಳ್ಳುತ್ತವೆ ಹಾಗೂ ಇನ್ನಿತರ ಸೋಂಕುಗಳು ಹರಡುವ ಸಾಧ್ಯತೆ ಇದೆ ಆದುದರಿಂದ ಬೇರೆಯವರ ಚಪ್ಪಲಿಗಳನ್ನು ಉಪಯೋಗಿಸುವ ಮುನ್ನ ಯೋಚಿಸಿ.

ರೇಜರ್/ಟ್ರೀಮರ್

ಕೆಲವು ಕ್ಷೌರದಂಗಡಿಗೆ ಹೋದಾಗ ಅವರು ರೇಜರ್’ನ ಬ್ಲೆಡ್ ಬದಲಾಯಿಸುತ್ತಾರೊ ಇಲ್ಲವೊ ಎಂದು ಗಮನಿಸಿದ್ದೀರಾ ?.ಹಾಗದರೆ ಇಂದಿನಿಂದ ಈ ಹವ್ಯಾಸ ಬೆಳೆಸಿಕೊಳ್ಳಿ ಪ್ರತಿಸಲ ಕ್ಷೌರದಂಗಡಿಗೆ ಹೋದಾಗ ಬ್ಲಾಡ್ ಬದಲಾಹಿಸಲು ಹೇಳಿ ಅಥವಾ ನೀವೆ ಒಂದು ಬ್ಲೆಡ್ ತೆಗೆದುಕೊಂಡು ಹೋಗಿ.ಏಕೆಂದರೆ ಶೇವಿಂಗ್ ಮಾಡುವಾಗ ಆಕಸ್ಮಿಕವಾಗಿ ಚರ್ಮಕ್ಕೆ ಬ್ಲೆಡ್ ತಾಗಿದಾಗ ರಕ್ತಗಳು ರೇಜರ್ ಹಾಗೂ ಬ್ಲೆಡ್’ಗಳಿಗೆ ತಾಗುತ್ತವೆ.ಇದಾದ ನಂತರ ಅದೆ ಬ್ಲೆಡ್ ಬೇರೆಯವರು ಉಪಯೋಗಿಸಿದಾಗ ಎಚ್ ಐ ವಿ ರೋಗಾಣು ಹರಡುವ ಸಾಧ್ಯತೆ ಇದೆ.

ಟ್ರಿಮರ್ ಒಬ್ಬರು ಮಾತ್ರ ಉಪಯೋಗಿಸುವುದು ಒಳಿತು.ಆದಷ್ಟು ರೇಜರ್/ಟ್ರಿಮರ್ ಗಳನ್ನು ಸ್ವಚ್ಚವಾಗಿರಿಸಿಕೊಳ್ಳಿ.

ನೈಲ್ ಕಟ್ಟರ್ (ಉಗುರು ತೆಗೆಯುವ ಸಾಧನ)

ಈ ಸಾಧನದಿಂದ ರಕ್ತದ ಮೂಲಕ ಹರಡುವ ವೈರಸ್’ಗಳು ಅಪಾಯ ತರಬಹುದು ವಿಶೇಷವಾಗಿ ನೀವು ಉಗುರು ತೆಗೆಯುವ ಸಮಯದಲ್ಲಿ ಆಕಸ್ಮಿಕವಾಗಿ ಚರ್ಮದ  ಕಡಿದುಕೊಂಡಾಗ.ಆದುದರಿಂದ ನೈಲ್ ಕಟ್ಟರ್ ಉಪಯೋಗಿಸಿದ ನಂತರ ಆದಷ್ಟು ಸ್ವಚ್ಛವಾಗಿ ತೊಳೆಯಿರಿ ಹಾಗೂ ಉಪಯೋಗಿಸುವ ಮುನ್ನ ಸ್ವಚ್ಛವಾಗಿಸಿದ ನಂತರ ಉಪಯೋಗಿಸಿ

ಇಯರ್ ಬಡ್ಸ್/ಇಯರ್ ಪೋನ್ಸ್

ಈಗಿನ ಯುವ ಜನತೆ ಮೊಬೈಲಿನಲ್ಲಿ ಹಾಡು ಕೇಳಲು ಈ ಇಯರ್ ಬಡ್ಸ್ ಜಾಸ್ತಿ ಉಪಯೋಗಿಸಿತ್ತಾರೆ.ಸಂಶೋಧನೆಯ ಪ್ರಕಾರ ಇಯರ್ ಬಡ್ಸ್’ನಿಂದ ಕಿವಿಯಲ್ಲಿ ಸಾವಿರಾರು ಬ್ಯಾಕ್ಟೀರಿಯಾಗಳು ಉತ್ಪದಿಸಿತ್ತವೆ.ಇದು ಆರೋಗ್ಯಕ್ಕೆ ಅಪಯಕಾರಿಯೂ ಹೌದು.ಈಗೆ ಇಯರ್ ಪೋನ್ ಬೇರೆಯವರು ಉಪಯೋಗಿಸಿದಾಗ ಒಬ್ಬರ ಕಿವಿಯಲ್ಲಿದ್ದ ಗುಗ್ಗೆ (Earwax)ಯೂ ಇನ್ನೂಬ್ಬರ ಕಿವಿಗೆ ಹರಡುತ್ತದೆ.ಆದುದರಿಂದ ಇದು ಕೂಡ ಆರೋಗ್ಯ ಅಪಾಯಕಾರಿ.ಕಾರಣ ಇದನ್ನು ತೊಳೆಯುವಾಗಿಲ್ಲ,ತೊಳೆದರೆ ಹಾಳಗುವುದು.! ಒರೆಸಿದರು ಕಿಟಾಣುಗಳು ಅದರಲ್ಲಿಯೆ ಉಳಿದೆ ಉಳಿಯುತ್ತೆ ತಾನೆ ? ಅದಷ್ಟು ಇಯರ್ ಫೋನ್ ಸ್ವಚ್ಛಗೊಳಿಸಿ ಹಾಗೂ ಒಬ್ಬರೆ ಉಪಯೋಗಿಸಿ

ಲಿಪ್ ಬಾಮ್/ಲಿಪ್ ಸ್ಟಿಕ್

ಹುಡುಗಿಯರಲ್ಲಿ ಈ ಹವ್ಯಾಸ ಗಳು ಜಾಸ್ತಿ.ಕೆಲವರ ಲಿಪ್ ಬಾಮ್/ ಲಿಪ್ಸ್ಟಿಕ್ ಗಳನ್ನು ಉಪಯೋಗಿಸುವುದು.ತುಟಿಗಳ ಮೇಲ್ಮೈ ಅಡಿಯಲ್ಲಿ ರಕ್ತನಾಳಗಳ ಒಂದು ವ್ಯಾಪಕ ಜಾಲವನ್ನು ಹೊಂದಿವೆ ಇದರಿಂದ ನೀವು ತುಟಿಗೆನೆ ಹಚ್ಚಿಕೊಂಡರು ಅತಿ ವೇಗವಾಗಿ ಹೀರಿಕೊಳ್ಳುತ್ತವೆ.ಇದರಿಂದ ತುಟಿಗಳ ಆರೋಗ್ಯಕ್ಕೂ ಹಾನಿಕಾರಕ.

ಅದೇನೆ ಇರಲಿ ಕೆಲವು ಸಲ ಅನಿವಾರ್ಯವಾಗಿ ಈ ವಸ್ತುಗಳನ್ನು ಬೇರೆಯವರಿಂದ ಕೊಳ್ಳಲೆ ಬೇಕು.! ಸ್ವಲ್ಪ ಆದರೂ ಪ್ರಯತ್ನಿಸೋಣಾ ಏನಂತೀರಿ ?

LEAVE A REPLY

Please enter your comment!
Please enter your name here