ಮೂತ್ರದ ವಿಷಯ ಬಂದಾಗ ಯಾರು ಕೂಡ ಸರಿಯಾಗಿ ಮಾತನಾಡುವುದಿಲ್ಲ ಇದು ಯಾವ ಸ್ಥಳದಲ್ಲಾದರೂ ಸರಿ. ಆದರೆ ಈ ಅಲಕ್ಷ್ಯ ವಿಷಯವೇ ಮುಂದೆ ದೊಡ್ಡದಾಗಿ ಪರಿಣಮಿಸುತ್ತದೆ. ಮೂತ್ರದ ಸ್ಥಿರತೆ, ವಾಸನೆ, ಬಣ್ಣವು ನಿಮ್ಮ ಆರೋಗ್ಯವನ್ನು ತಿಳಿಸುತ್ತದಲ್ಲದೆ ಜೀವನ ಶೈಲಿಯನ್ನು ತಿಳಿಸುತ್ತದೆ.  ಯುಸಿ ಸ್ಯಾನ್ ಡಿಯಾಗೋ ಪ್ರಕಾರ ಮೂತ್ರವು 95% ನೀರು, ಇನ್ನು ಉಳಿದ 5% ಸೋಡಿಯಂ, ಯೂರಿಯಾ, ಕ್ರಿಯಾಟೈನ್ಗಳನ್ನು, ಕ್ಲೋರೈಡ್, ಒಳಗೊಂಡಿರುತ್ತದೆ.ಸಾಮಾನ್ಯವಾಗಿ ಮೂತ್ರದ ಬಣ್ಣ ಹಳದಿಯಾಗಿದೆ. ಯುಸಿ ಸ್ಯಾನ್ ಡಿಯಾಗೋ ಪ್ರಕಾರ ಯುರೂಬಿಲಿನ್ ಉಂಟಾಗುತ್ತದೆ ಎನ್ನುತ್ತಾರೆ. ಇದು ನಿಮ್ಮ ದೇಹದ ಹಳೆಯ ಸ್ಥಗಿತ ಕೆಂಪು ರಕ್ತ ಕಣಗಳಿಂದ ಉತ್ಪತ್ತಿಯಾಗುವ ಜೈವಿಕ ರಾಸಾಯನಿಕ ತ್ಯಾಜ್ಯದಿಂದ ಉತ್ಪನ್ನವಾಗಿರುತ್ತದೆ.
ನೀವು ಎಂದಾದರೂ ನಿಮ್ಮ ಮೂತ್ರ ಬಣ್ಣದ ಬಗ್ಗೆ ಗಮನ ಹರಿಸಿದ್ದೀರಾ?ಮೂತ್ರದ ಬಣ್ಣ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಈ ಕೆಳಗೆ ನೋಡೋಣ.

ಪಾರದರ್ಶಕ:

ಯುಸಿ ಸ್ಯಾನ್ ಹೇಳುವ ಪ್ರಕಾರ ಬಣ್ಣ ರಹಿತ ಮೂತ್ರವು ಸೂಚಿಸುವ ಪ್ರಕಾರ ನಿಮ್ಮ ದೇಹವು ಅಧಿಕ ಹೈಡ್ರೇಟ್ ಆಗಿರಬಹುದು ಎಂದು ಹೇಳುತ್ತಾರೆ. ಆದರೆ ಹೆಚ್ಚಿನ ನಿಜ೵ಲೀಕರಣವು ನಿಮ್ಮ ರಕ್ತದಲ್ಲಿರುವ ರಾಸಾಯನಿಕ ಅಸಮತೋಲನವನ್ನು ರಚಿಸುವ ಅಗತ್ಯ ಇರುವ ಲವಣಗಳು ದುಬ೵ಲಗೊಳಿಸಬಹುದು ಎಂದು ಅವರು ಸೇರಿಸುತ್ತಾರೆ.

ತಿಳಿ ಬಣ್ಣ:

ಯುಸಿ ಸ್ಯಾನ್ ಹೇಳುವ ಪ್ರಕಾರ ತಿಳಿ ಹಳದಿ ಬಣ್ಣದ ಮೂತ್ರ ನಿಮ್ಮದಾಗಿದ್ದರೆ ನೀವು ಉತ್ತಮ ಹೈಡ್ರೇಟೆಡ್, ಆರೋಗ್ಯವಾಗಿದ್ದೀರಾ ಎಂದರ್ಥ.

ಹಳದಿ: 

ಈಗಾಗಲೇ ಹೇಳಿದಂತೆ ಮೂತ್ರದ ಬಣ್ಣವು ಹಳದಿ ಆಗಿದ್ದರೆ ಎಲ್ಲವು ಸಂಪೂ೵ವಾಗಿ ಸಾಮಾನ್ಯವಾಗಿದೆ ಮತ್ತು ನೀವು ಹೈಡ್ರೇಟೆಡ್ ಅಲ್ಲದೆ ನಿಮ್ಮ ಕಿಬೋಟ್ಟೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತಾರೆ.

ಗಾಢ ಹಳದಿ:

ನಿಮ್ಮ ಮೂತ್ರದ ಬಣ್ಣವು ಗಾಢ ಹಳದಿಯಾಗಿದ್ದರೆ, ಅದು ಇನ್ನೂ ಸಾಮಾನ್ಯವಾಗಿದೆ ಆದರೆ ಯುಸಿ ಸ್ಯಾನ್ ಡಿಯಾಗೋ ಹೆಲ್ತ ಪ್ರಕಾರ ನೀವು ಸ್ವಲ್ಪ ಡಿಹೈಡ್ರೇಟೆಡ್ ಗೊಳ್ಳಬಹುದು ಎಂದು ಸೂಚಿಸುತ್ತದೆ.
ಹನಿ ಅಥವಾ ಅಂಬರ್: ಯುಸಿ ಸ್ಯಾನ್ ಡಿಯೆಗೊ ಹೆಲ್ತ ಪ್ರಕಾರ ನಿಮ್ಮ ಮೂತ್ರದ ಬಣ್ಣವು ಜೇನು ಅಥವಾ ಅಂಬರ್ ಆಗಿದ್ದರೆ, ನೀವು ನಿಜ೵ಲೀಕರಣಗೊಳ್ಳಬಹುದು.

ಕೆಂಪು:

ನಿಮ್ಮ ಮೂತ್ರದ ಬಣ್ಣ ಒಂದು ವೇಳೆ ಕೆಂಪಾಗಿದ್ದರೆ ನಿಮ್ಮ ಆರೋಗ್ಯದ ಕಾಳಜಿ ಅವಶ್ಯವಾಗಿರುತ್ತದೆ. ಮೂತ್ರದಲ್ಲಿರುವ ರಕ್ತವನ್ನು ಹೆಮಟುರಿಯಾ ಎಂದು ಕರೆಯಲಾಗುತ್ತದೆ. ಇದು ಹೆಚ್ಚು ಪರಿಣಾಮಕಾರಿ ಆಗಿರದೆ ಇದ್ದರೂ ಆದರೆ ಕೇಲವು ಸಂಧರ್ಭಗಳಲ್ಲಿ ಇದು ಸೋಂಕು ಉಂಟುಮಾಡಬಹುದು ಉದಾ: ಮೂತ್ರಪಿಂಡದ ಕಲ್ಲುಗಳು ಮತ್ತು ಪ್ರಾಸ್ಟೇಟ್ಗೆ ಸಮಸ್ಯೆ ಉಂಟಾಗಬಹುದು.

ನೀಲಿ:

ಆಹಾರ ಮತ್ತು ಕೆಲವು ಔಷಧಿಗಳು ನೀಲಿ ಮೂತ್ರವನ್ನು ಉತ್ಪಾದಿಸುತ್ತವೆ, ಜತೆಗೆ ಅಪರೂಪದ ಚಯಾಪಚಯ ಅಸ್ವಸ್ಥತೆ, ಕೌಟುಂಬಿಕ ಹೈಪಕಾ೵ಲ್ಸೆಮಿಯಾ (ನೀಲಿ ಡಯಾಪರ್ ಸಿಂಡ್ರೋಮ್)ಅನ್ನು ಉತ್ಪಾದಿಸಬಹುದು ಇದರಿಂದ ನಿಮ್ಮ ಆರೋಗ್ಯ ಕೊಂಚ ಹದಗೆಡಬಹುದು ಒಂದು ವೇಳೆ ನಿಮ್ಮ ಮೂತ್ರ ನೀಲಿ ಆಗಿದ್ದಲ್ಲಿ ವೈಧ್ಯರನ್ನು ಒಮ್ಮೆ ಕಾಣುವುದು ಉತ್ತಮ.

ಗಾಢ ಕಂದು ಅಥವಾ ಕಪ್ಪು:

ಒಂದು ವೇಳೆ ನಿಮ್ಮ ಮೂತ್ರದ ಬಣ್ಣ ಗಾಢ ಕಂದು ಅಥವಾ ಕಪ್ಪು ಆದಲ್ಲಿ ಒಮ್ಮೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ ಏಕೆಂದರೆ ಯುಸಿ ಸ್ಯಾನ್ ಡಿಯೆಗೊ ಅವರ ಪ್ರಕಾರ ನಿಮ್ಮ ದೇಹದಲ್ಲಿ ತಾಮ್ರ, ಮೆಲನೋಮ ಅಥವಾ ಫೀನಾಲ್ ವಿಷ ನಿಮ್ಮ ದೇಹದಲ್ಲಿ ಸೇರಿದ್ದರೆ ಈ ರೀತಿಯಾದ ಬಣ್ಣದ ಮೂತ್ರವಾಗುತ್ತದೆ ಆದ್ದರಿಂದ ವೈದ್ಯರನ್ನು ಕಾಣುವುದು ಒಳ್ಳೆಯದು.

LEAVE A REPLY

Please enter your comment!
Please enter your name here