ಅವನು ನಿಮ್ಮನ್ನು ಎಷ್ಟು ಪ್ರೀತಿಸುತ್ತಾನೋ ಅಷ್ಟೇ ಗೌರವಿಸುತ್ತಾನೆ:

ಹೌದು ಒಂದು ಹುಡುಗ ತನ್ನ ಸಂಗಾತಿಯನ್ನು ಬರೀ ಪ್ರೀತಿಸಿದರೆ ಸಾಲದು ಅವನು ನಿಮ್ಮನ್ನು ಅಷ್ಟೇ ಗೌರವಿಸುವವನಾದರೆ ಅವನ ಪ್ರೀತಿ ನಿಷ್ಕಲ್ಮಷವಾದದ್ದು.

ಅವನು ನಿಮಗೆ ಯಾವಾಗಲೂ ಉತ್ಸಾಹ ತುಂಬುವವನಾಗಿರುತ್ತಾನೆ:

ಹೌದು ಒಂದು ಹುಡುಗ ತನ್ನ ಸಂಗಾತಿಯನ್ನು ಹಾಗು ಅವಳ ಕನಸನ್ನು ಉತ್ಸಾಹವಂತನಾಗಿ ಗೌರವಿಸಿ ಪ್ರೀತಿಸಿ ಪೋಷಿಸಿದ್ದೇ ಆದರೆ ಅವನ ಪ್ರೀತಿ ನಿಷ್ಕಲ್ಮಷವಾದದ್ದು ಎಂದು ನಂಬಬಹುದು.

ಅವನು ನಿಮ್ಮನ್ನು ರಕ್ಷಿಸುತ್ತಾನೆ:

ಹೌದು ನಿಮ್ಮ ಹುಡುಗ ನಿಮ್ಮನ್ನು ಸಮಾಜದಲ್ಲಿ ಹೆಣ್ಣಿಗೆ ಬರಬಹುದಾದ ತೊಂದರೆಗಳಿಂದ ರಕ್ಷಿಸುತ್ತಾನೆ, ಹಾಗು ನಿಮಗೆ ಸಮಾಜದಲ್ಲಿ ಕೆಟ್ಟ ಹೆಸರು ಬರದೇ ಇರುವ ರೀತಿಯಲ್ಲಿ ಪೋಷಿಸಿದರೆ ಅವನ ಪ್ರೀತಿ ನಿಜ ಎಂದು ಭಾವಿಸಬಹುದು.

ಅವನು ನಿಮ್ಮನ್ನು ಬಿಟ್ಟುಕೊಡುವುದಿಲ್ಲ:

ನಿಮ್ಮ ಹುಡುಗ / ಗಂಡ ತನ್ನ ಹುದುಗಿದೆ ಸಮಾಜದಲ್ಲಿ ಬರುವ ಕೆಟ್ಟ ಹೆಸರಿನಿಂದ ರಕ್ಷಿಸಬೇಕು ಆದಾಗ್ಯೂ ಬಂದರೆ ಅವನು ನಿಮ್ಮ ಪರ ನಿಂತು ನಿಮ್ಮನ್ನು ಬಿಟ್ಟು ಕೊಡಬಾರದು ಹಾಗೆ ನಿಮ್ಮ ಹುಡುಗ ಮಾಡಿದ್ದೆ ಆದಲ್ಲಿ ಅವನು ನಿಮ್ಮನ್ನು ಯಾವುದೇ ಸಂಧರ್ಭಲ್ಲಿ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ ಎಂದರ್ಥ..

ನಿಮ್ಮ ಆಲೋಚನೆಗಳಿಗೆ / ಅಭಿಪ್ರಾಯಗಳಿಗೆ ಗೌರವ ಕೊಡುವವನಾಗಿರುತ್ತಾನೆ:

ಒಬ್ಬ ಹುಡುಗ ಕೇವಲ ತನ್ನ ಆಲೋಚ್ನೆಯನ್ನೇ ನಿಮ್ಮ ಮೇಲೆ ಹೇರಿಸದೆ ನಿಮ್ಮ ಅಭಿಪ್ರಾಯಗಳನ್ನು ಕೇಳುವವನಾಗಿರುತ್ತಾನೆ ಹಾಗು ಅದನ್ನು ಸಮಯಕ್ಕೆ ತಕ್ಕ ಹಾಗೆ ಗೌರವಿಸುವವನೂ ಆಗಿರುತ್ತಾನೆ..

ನೀವು ಇರದೇ ಇರುವ ಜಾಗದಲ್ಲಿ ಅವನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾನೆ:

ಒಂದು ವೇಳೆ ಅದ್ಭುತ ಕ್ಷಣದಲ್ಲಿ ನೀವು ಎಲ್ಲೊ ಇರುವಾಗ ಅವನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾನೆ.

ನಿಮ್ಮ ನೋವುಗಳಲ್ಲಿ ಭಾಗಿಯಾಗುತ್ತಾನೆ:

ಒಬ್ಬ ಹುಡುಗ ಕೇವಲ ನಿಮ್ಮ ನಲಿವಲ್ಲದೆ, ನಿಮ್ಮ ನೋವುಗಳಲ್ಲಿಯೂ ಭಾಗಿಯಾದದ್ದೇ ಆದರೆ ಅವನು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಎಂದು ಅರ್ಥ.

 

LEAVE A REPLY

Please enter your comment!
Please enter your name here