ಮಿಣುಕು ಹುಳುಗಳ ಬಗ್ಗೆ ಗೊತ್ತಲ್ಲವೇ? ಇವುಗಳನ್ನು ನೋಡದವರಿಲ್ಲ. ರಾತ್ರಿ ವೇಳೆಯಲ್ಲಿ ಮಿಣುಕು ಮಿಣುಕು ಎಂದು ಬೆಳಕನ್ನು ಹೊರಚೆಲ್ಲುತ್ತಿರುತ್ತವೆ. ಅವುಗಳಿಂದ ಬರುವ ಕಾಂತಿ ಭಿನ್ನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಿಂಚುಹುಳುಗಳನ್ನು ಹಿಡಿದುಕೊಳ್ಳಲು, ಅವುಗಳೊಂದಿಗೆ ಆಟವಾಡಲು ಬಹಳಷ್ಟು ಮಂದಿ ಪ್ರಯತ್ನಿಸುತ್ತಾರೆ. ಅದೊಂದು ರೀತಿ ಮಜಭೂತಾಗಿರುತ್ತದೆ. ಆದರೆ ಮಿಂಚುಹುಳುಗಳಿಂದ ಬೆಳಕು ಯಾಕೆ ಬರುತ್ತದೆ ಗೊತ್ತಾ..? ಅವು ಬೆಳಕನ್ನು ಯಾಕೆ ಹೊರಚೆಲ್ಲುತ್ತವೆ ಅಂತ ಈಗ ನೋಡೋಣ.

ಮಿಂಚುಹುಳುಗಳು ಬೆಳಕು ಹೊರಸೂಸಲು ಕಾರಣ ’ಬಯೋಲ್ಯುಮಿನಿಸೆನ್ಸ್’ ಎಂಬ ರಾಸಾಯನಿಕ ಕ್ರಿಯೆ. ಮಿಂಚುಹುಳುಗಳ ದೇಹದಲ್ಲಿನ ಜೀವಕಣಗಳಲ್ಲಿರುವ ಆಕ್ಸಿಜನ್ ಕ್ಯಾಲ್ಸಿಯಂ ಜತೆಗೆ ಬೆರೆತಾಗ ಪಟ್ ಅಂತ ಬೆಳಕು ಹೊರಬರುತ್ತದೆ. ಆ ಬೆಳಕು ತಣ್ಣಗಿನ ಕಾಂತಿ. ಆ ರೀತಿ ಕಾಂತಿ ಹೊರಸೂಸಲು ಅನುಕೂಲವಾಗುವಂತೆ ಅವುಗಳ ಹೊಟ್ಟೆಯಲ್ಲಿ ಅವಯವವೊಂದು ಇರುತ್ತದೆ. ಅದರಿಂದಲೇ ಕಾಂತಿ ಹೊರಸೂಸುತ್ತದೆ. ಅದೇ ನಮಗೆ ಹೊರಗೆ ಕಾಣಿಸುವುದು. ಆದರೆ ಆ ಅವಯವದಲ್ಲಿ ಕಾಂತಿ ತಣ್ಣಗಿರುತ್ತದೆ. ಬಿಸಿಯಾಗಿದ್ದರೆ ಮಿಂಚುಹುಳು ಬದುಕಲ್ಲ.

ವಿಶೇಷ ಎಂದರೆ ಮಿಂಚುಹುಳುಗಳು ಆ ರೀತಿ ಕಾಂತಿಯನ್ನು ಯಾಕೆ ಹೊರಸೂಸುತ್ತವೆ ಎಂಬುದನ್ನು ವಿಜ್ಞಾನಿಗಳು ಇಂದಿಗೂ ಕಂಡುಹಿಡಿಯಲು ಆಗಿಲ್ಲ. ಆದರೆ ಕೆಲ ವಿಜ್ಞಾನಿಗಳು ಮಾತ್ರ ಇನ್ನೊಂದು ಕಾರಣ ಹೇಳುತ್ತಿದ್ದಾರೆ. ಅದೇನೆಂದರೆ…ಮಿಂಚುಹುಳುಗಳು (ಹೆಣ್ಣಾಗಲಿ, ಗಂಡಾಗಲಿ) ಇತರೆ ಮಿಂಚುಹುಳುಗಳನ್ನು ಆಕರ್ಷಿಸಲು ಆ ರೀತಿ ಬೆಳಕನ್ನು ಸೂಸುತ್ತವಂತೆ. ಕೆಲವು ಮಿಂಚುಹುಳುಗಳು ಬೇರೆ ಮಿಂಚುಹುಳುಗಳ ಜತೆಗೆ ಬೆಳಕನ್ನು ಪಸರಿಸುವ ಮೂಲಕ ಮಾತನಾಡಿಕೊಳ್ಳುತ್ತವಂತೆ. ಆ ರೀತಿಯಾಗಿ ಕಮ್ಯುನಿಕೇಷನ್‌ಗಾಗಿ ಬೆಳಕನ್ನು ಹೊರಸೂಸುತ್ತವಂತೆ. ಕೆಲವು ಸಂದರ್ಭಗಳಲ್ಲಿ ಶತ್ರುಗಳನ್ನು ದಾರಿತಪ್ಪಿಸಲು ಮಿಂಚುಹುಳುಗಳು ಆ ರೀತಿ ಬೆಳಕನ್ನು ಹೊರಸೂಸುತ್ತವಂತೆ. ಅದೆಲ್ಲಾ ಸರಿ…ಕಾರಣಗಳು ಏನೇ ಇರಲಿ ಅವು ಹೊರಸೂಸುವ ಕಾಂತಿಯನ್ನು ನೋಡುತ್ತಿದ್ದರೆ ಅದೊಂದು ರೀತಿ ರಿಲ್ಯಾಕ್ಸ್ ಆದ ಅನುಭವ ನಮಗಾಗುತ್ತದೆ ಅಲ್ಲವೇ..

LEAVE A REPLY

Please enter your comment!
Please enter your name here