ಬೇಕಾಗುವ ಸಾಮಾಗ್ರಿಗಳು

ಅರ್ಧ ಕಪ್‌ ಗೋಧಿ ಹಿಟ್ಟು

4 ಚಮಚ ಸಕ್ಕರೆ

ಚಿಟಿಕೆಯಷ್ಟು ಉಪ್ಪು

2 ಚಮಚ ತುಪ್ಪ

5 ಚಮಚ ಹಾಲು

ತಯಾರಿಸುವ ವಿಧಾನ:

ಮೊದಲು ನೀವು ಒಂದು ಪ್ಯಾನಿನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಕೊಳ್ಳಿ, ನಂತರ ಹಾಲು ಹಾಕಿ ಸಕ್ಕರೆ ಸೇರಿಸಿ. ಸಕ್ಕರೆ ಚೆನ್ನಾಗಿ ಕರಗಿದ ಬಳಿಕ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ.

ನಂತರ ಒಂದು ಬೌಲ್‌ ತೆಗೆದುಕೊಳ್ಳಿ ಅದರಲ್ಲಿ ಗೋಧಿ ಹಿಟ್ಟು ಹಾಕಿ, ಸ್ವಲ್ಪ ತುಪ್ಪ ಹಾಕಿ, ನಿಧಾನಕ್ಕೆ ಹಾಲಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ. ಕಲೆಸಿದ ಹಿಟ್ಟನ್ನು ಎರಡು ಭಾಗ ಮಾಡಿ. ನಂತರ ಮಂದವಾಗಿ ಚಪಾತಿಗೆ ತಟ್ಟಿದ ರೀತಿಯಲ್ಲಿ ತಟ್ಟಿ, ನಂತರ ನಿಮಗೆ ಬೇಕಾದ ಆಕಾರಕ್ಕೆ ಕಟ್ಟು ಮಾಡಿ. ತದನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕುದಿ ಬರುವಾಗ ಅದರಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆಯಿರಿ.

LEAVE A REPLY

Please enter your comment!
Please enter your name here