ನಿಮ್ಮ ಮಕ್ಕಳನ್ನು ಸ್ವಾವಲಂಬಿತರಾಗಿಸಿ:

ನಿಮ್ಮ ಮಕ್ಕಳನ್ನು ಸಾಧ್ಯವಾದಷ್ಟು ಸ್ವಾವಲಂಬಿ ಜೀವನಕ್ಕೆ ತಯಾರು ಮಾಡಿ, ಯಾರ ಮೇಲು ವಿನಾಕಾರಣ ಅವಲಂಬನೆ ಮಾಡಲು ಬಿಡಬೇಡಿ ಇದರಿಂದ ನಿಮ್ಮ ಮಕ್ಕಳಲ್ಲಿ ಆತ್ಮ ವಿಶ್ವಾಸ ಜಾಸ್ತಿಯಾಗುತ್ತದೆ.

ನಿಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಕೊಡಿ:

ನಿಮ್ಮ ಮಕ್ಕಳಿಗೆ ಜನರ ವಿಶ್ವಾಸ, ಮೌಲ್ಯ ಹೇಗೆ ಸಾಧಿಸಬೇಕು ಎಂದು ತಿಳಿಸಿ, ಗುರು ಹಿರಿಯರಿಗೆ ಗೌರವ ಕೊಡುವುದು ಹೇಗೆ ಎಂದು ತಿಳಿಸಿಕೊಡಿ, ಇದರಿಂದ ನಿಮ್ಮ ಮಕ್ಕಳು ವಿನಯವಂತರಾಗುತ್ತಾರೆ.

ನಿಮ್ಮ ಮಕ್ಕಳಿಗೆ ಮನೆಯ ಹಾಗು ಪ್ರಪಂಚದ ಸೂಕ್ಷ್ಮತೆಯನ್ನು ತಿಳಿಸಿ

ಮಕ್ಕನ್ನು ತೀರಾ ಮುದ್ದು ಮಾಡಿ ಬೆಳೆಸಿ ನಂತರ ಹೊರ ಜಗತ್ತಿನ ತೊಂದರೆಗಳು ತಿಳಿದರೆ ಅವುಗಳು ಹೆದರಿ ಓಡಿ ಹೋಗುತ್ತವೆ, ಆದ್ಧರಿಂದ ಬೆಳೆಯುವ ಸಂಧರ್ಬದಲ್ಲೇ ಮನೆಯ ಹಾಗು ಪ್ರಪಂಚದ ಸೂಕ್ಷ್ಮತೆಯನ್ನು ಮಕ್ಕಳಿಗೆ ಪರಿಚಯಿಸಿಕೊಡಿ.

ನಿಮ್ಮ ಮಕ್ಕಳಿಗೆ ಬೇರೆಯವರ ಮಕ್ಕಳನ್ನು ಯಾವುದೇ ಕಾರಣಕ್ಕೂ ಹೋಲಿಸಿ ಬೈಯ್ಯಬೇಡಿ:

ನಿಮ್ಮ ಮಕ್ಕಳಿಗೆ ಅವರದ್ದೇ ಆದ ವ್ಯಕ್ತಿತ್ವವಿರುತ್ತದೆ ನೀವು ನಿಮ್ಮ ಮಕ್ಕಳನ್ನು ಬೇರೆಯವರ ಮಕ್ಕಳಿಗೆ ಹೋಲಿಸಿದ್ದೆ ಆದರೆ ನೀವೇ ನಿಮ್ಮ ಮಕ್ಕಳ ತೇಜೋವಧೆ ಮಾಡಿದಂತೆ ಅಲ್ಲವೇ? ನೀವು ಈ ರೀತಿ ಮಾಡುವುದರಿಂದ  ಮಕ್ಕಳ ಮನಸ್ಸಿನ ಮೇಲೆ ಅಘಾದ ಪರಿಣಾಮಪರಿಣಾಮ ಬೀರುತ್ತದೆ.

 

 

LEAVE A REPLY

Please enter your comment!
Please enter your name here