ಬಹಳಷ್ಟು ಮಂದಿಗೆ ಬಸ್ ಪ್ರಯಾಣ ಅಂದ್ರೆ ಆಗಲ್ಲ.. ಬಸ್ ನಲ್ಲಿ ಪ್ರಯಾಣಿಸುವಾಗ ವಾಂತಿ ಬರುವಂತಾಗುವುದು, ಹೊಟ್ಟೆ ತೊಳೆಸಿದ ಅನುಭವ ಆಗುತ್ತದೆ. ಇದರಿಂದ ವಾಂತಿಯೂ ಆಗುತ್ತದೆ. ಹೆಚ್ಚಾಗಿ ತಿರುಪತಿಯಂತಹ ಬೆಟ್ಟ ಹತ್ತುವಾಗ, ಶಿರಾಡಿ ಘಾಟ್ ನಂತಹ ರಸ್ತೆಗಳಲ್ಲಿ ಸಂಚರಿಸುವಾಗ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಈ ರೀತಿ ಬಹಳಷ್ಟು ಮಂದಿಗೆ ಪ್ರಯಾಣದಲ್ಲಿ ವಾಂತಿ ಆಗುತ್ತಿರುತ್ತದೆ. ಅಂತಹವರು ಪ್ರಯಾಣಕ್ಕೆ ಮುನ್ನ ಕೆಲವೊಂದು ಸೂಚನೆಗಳನ್ನು ಪಾಲಿಸಿದರೆ ಈ ಸಮಸ್ಯೆಯಿಂದ ಹೊರಬೀಳಬಹುದು…

ನಿಂಬೆಹಣ್ಣನ್ನು ಮೂಗಿನ ಬಳಿ ಇಟ್ಟುಕೊಂಡು ವಾಸನೆಯನ್ನು ಆಘ್ರಾಣಿಸುತ್ತಿದ್ದರೂ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಲವಂಗ, ಸೋಂಪನ್ನು ದವಡೆಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದರು ವಾಮಿಟಿಂಗ್ ಸೆನ್ಸೇಷನ್ ಕಡಿಮೆಯಾಗುತ್ತದೆ…

ಮುಖ್ಯವಾಗಿ ಬಸ್ ನಲ್ಲಾಗಲಿ, ಕಾರಿನಲ್ಲಾಗಲಿ ಪ್ರಯಾಣಿಸುವಾಗ ಮುಂದಿನ ಸೀಟ್ ನಲ್ಲಿ ಕುಳಿತು ನಮ್ಮ ದೃಷ್ಟಿಯನ್ನು ನೇರವಾಗಿ ನೋಡಿದರು ವಾಮಿಟಿಂಗ್ ಸೆನ್ಸೇಷನ್ ನಿಂದ ತಪ್ಪಿಸಿಕೊಳ್ಳಬಹುದು.

ಸಣ್ಣ ಶುಂಠಿ ಚೂರನ್ನು ದವಡೆಯಲ್ಲಿಟ್ಟುಕೊಂಡರೆ ವಾಂತಿಯಾಗುವ ಅವಕಾಶ ಕಡಿಮೆಯಾಗುತ್ತದೆ. ಶುಂಠಿಯಲ್ಲಿನ ಕ್ಯಾಲ್ಸಿಯಂ, ಪಾಸ್ಪರಸ್, ಐರನ್, ಮೆಗ್ನಿಷಿಯಂ, ಕಾಪರ್, ಜಿಂಕ್ ನಂತಹವು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು.

ಅಡಿಕೆ ಚೂರನ್ನು ಚಪ್ಪರಿಸಿದರು ಈ ಸಮಸ್ಯೆಯಿಂದ ಪಾರಾಗಬಹುದು.

ಬಸ್ಸಿನಲ್ಲಿ ಓಡಾಡುವಾಗ ವಾಂತಿ ಬರುವ ವ್ಯಕ್ತಿಗಳು ಕಿತ್ತಳೆ ಹಣ್ಣನ್ನು ಮೂಸಿ ನೋಡುವುದರಿಂದ ವಾಂತಿಯಾಗುವುದು ತಪ್ಪುತ್ತದೆ.

LEAVE A REPLY

Please enter your comment!
Please enter your name here