ನಮ್ಮ ಕರ್ನಾಟಕದ ಎಷ್ಟೋ ಊರುಗಳು ಯಾವುದಾವುದಕ್ಕೋ ಬಹು ಪ್ರಸಿದ್ಧಿಯಾಗಿವೆ.ನಮ್ಮ ಹೆಮ್ಮೆಯ ಶಿವಮೊಗ್ಗೆ ಜಿಲ್ಲೆಯ ಈ ಗ್ರಾಮ ಯಾವುದಕ್ಕೆ ಪ್ರಸಿದ್ದಿಯಾಗಿದೆ ಗೊತ್ತೇ?

ಇದು ರಾಜ್ಯದ ಏಕೈಕ ಸಂಸ್ಕೃತ ಗ್ರಾಮ…

ಜಾತಿ–ವರ್ಗಗಳ ಹಂಗಿಲ್ಲದೇ ಎಲ್ಲರೂ ಸಂಸ್ಕೃತ ಮಾತನಾಡುವಅಪರೂಪದ ಗ್ರಾಮವಿದು. ಈ ಗ್ರಾಮವಿರುವುದು ಶಿವಮೊಗ್ಗ ತಾಲೂಕಿನಲ್ಲಿ.ಅಭಿಜಾತ ಭಾಷೆ ಸಂಸ್ಕೃತದಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಈ ಗ್ರಾಮವೇ ಮತ್ತೂರು..

ಇದು ತುಂಗಾ ನದಿಯ ದಡದಲ್ಲಿ ಇರುವ ಒಂದು ಚಿಕ್ಕ

ಗ್ರಾಮ. ಇತ್ತೀಚಿನ ಸಮಯದಲ್ಲಿ ಸಂಸ್ಕೃತಬೋಧನೆಯಿಂದಾಗಿ ಇದು ಪ್ರಸಿದ್ಧವಾಗಿದೆ. ಇಲ್ಲಿನ ಹೆಚ್ಚಿನ ಕುಟುಂಬಗಳು ಸಂಸ್ಕೃತವನ್ನು ನಿತ್ಯಭಾಷೆಯನ್ನಾಗಿ ಬಳಸುತ್ತಾರೆ.ವೇದಗಳು ಮತ್ತು ವೇದಾಂತಗಳ ಅದ್ಯಯನವು ಈ ಗ್ರಾಮಯ ಇನ್ನೊಂದುವೈಶಿಷ್ಟ್ಯವಾಗಿದೆ. ಗ್ರಾಮದಲ್ಲಿರುವ ವೇದಾಂತ ಶಾಲೆಯನ್ನು ಹೊಳೆನರಸಿಪುರ ದತ್ತಿಯ ಸಹಯೋಗದೊಂದಿಗೆನೆಡೆಸಲಾಗುತ್ತಿದೆ ಮತ್ತು ಇದು ಶಂಕರರು ಮೂಲವಾಗಿ ಪ್ರತಿಪಾದಿಸಿದ ಶಂಕರ ವೇದಾಂತವನ್ನು ಬೋಧಿಸುವಕೆಲವೇ ಶಾಲೆಗಳಲ್ಲಿ ಒಂದಾಗಿದೆ.

ಮತ್ತೂರಿನ ಅವಳಿ ನಗರವಾದ ಹೊಸಹಳ್ಳಿ ಮತ್ತೂರಿನ ಎಲ್ಲಾ ಲಕ್ಷಣಗಳನ್ನು ಹಂಚಿಕೊಂಡಿದೆ.ಹೊಸಹಳ್ಳಿಯು ತಂಗಾ ನದಿಯ ದಡದಲ್ಲಿದೆ. ಈ ಎರಡೂ ಹಳ್ಳಿಗಳನ್ನು ಹೆಚ್ಚಾಗಿ ಒಟ್ಟಿಗೆಉಲ್ಲೇಖಿಸಲಾಗುತ್ತಿದೆ.ಕರ್ನಾಟಕದಲ್ಲಿನ ಹಾಡುವ ಮತ್ತು ಕಥೆ ಹೇಳುವ ಒಂದು ಅನನ್ಯ ಪ್ರಕಾರವಾದ ಗಮಕಕಲೆಯನ್ನು ಬೆಂಬಲಿಸುವಲ್ಲಿ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಗಳ ಪರಿಶ್ರಮ ಅಗಾಧವಾಗಿದೆ.

LEAVE A REPLY

Please enter your comment!
Please enter your name here