ಇಂದಿನಗಡಿಬಿಡಿಯ ಬದುಕಲ್ಲಿ ನಮ್ಮ ಅರೋಗ್ಯದ ಬಗ್ಗೆ ಗಮನ ಹರಿಸಲು ಸಮಯವೇಇರುವುದಿಲ್ಲ.ಇದರಿಂದ ಅನೇಕ ಬಗೆಯ ಕಾಯಿಲೆಗಳು ಉಂಟಾಗುತ್ತದೆ.ಅದರಲ್ಲೂ ನಾವು ದೇಹದ ಜೊತೆಗೆಮೆದುಳಿನ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯ ವಹಿಸುತ್ತೇವೆ.ಇದರಿಂದ ಜ್ಞಾಪಕ ಶಕ್ತಿಕುಂಠಿತವಾಗುವುದಲ್ಲದೆ,ಕೆಲಸದಲ್ಲಿ ನಿರಾಸಕ್ತಿ ಉಂಟಾಗುತ್ತದೆ .ಇದರಿಂದ ದೂರವಾಗಲು ನಾವು ಕೆಲವುಸಂಗತಿಗಳ ಕಡೆಗೆ ಗಮನ ನೀಡುವುದು ಅತ್ಯಗತ್ಯ.

ಸೇವಿಸುವ ಆಹಾರದಲ್ಲಿ ಮೀನು ಇರಲೇ ಬೇಕು. ಇದರಲ್ಲಿರುವ ಒಮೆಗಾ ಫ್ಯಾಟಿ ಆಸಿಡ್ ಗಳು ಆಗ್ಯವನ್ನುಕಾಪಾಡುವುದಲ್ಲದೆ ಮೆದುಳಿನ ಕಾರ್ಯತತ್ಪರತೆಯನ್ನು ಸುಗಮವಾಗಿಡುತ್ತದೆ.

ಹಸಿರು ಸೊಪ್ಪು ಆಹಾರದ ಭಾಗವಾಗಿರಲಿ. ಇದು ಆಂಟಿ ಆಕ್ಸಿಡೆಂಟ್ ಉತ್ಪತ್ತಿ ಮಾಡುತ್ತದೆ. ಅಲ್ಲದೆಮೆದುಳಿನಲ್ಲಿ ಉತ್ಪತ್ತಿ ಆಗುವ ವಿಷಕಾರಕಗಳನ್ನು ನಾಶ ಮಾಡುತ್ತದೆ.

ಒಣ ಹಣ್ಣು ಮತ್ತು ಬೀಜಗಳಾದ ಗೋಡಂಬಿ, ಅಕ್ರೂಟು, ಪಿಸ್ತಾ, ದ್ರಾಕ್ಷಿ ಯಂತಹವನ್ನು ಪ್ರತಿದಿನ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ

ಪಿಷ್ಟ ಪದಾರ್ಥಗಳಿಂದ ದೇಹಕ್ಕೆ ಶಕ್ತಿ ದೊರಕುತ್ತದೆ. ಆದ್ದರಿಂದ ಅದನ್ನು ಪಡೆಯಲು ರಾಗಿ ,ಜೋಳದಂತಹಕಾಲುಗಳ ಹಿಟ್ಟನ್ನು ಬಳಸಿ.

ಇವುಗಳೆಲ್ಲವೂ  ನಿಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡುತ್ತವೆ.

LEAVE A REPLY

Please enter your comment!
Please enter your name here