ಥೈರಾಯ್ಡ್ ಈ ಹೆಸರು ಕೇಳಿದರೆ ಸಾಕು ಇತ್ತೀಚೆಗೆ ಜನ ಬೆಚ್ಚಿಬೀಳುತ್ತಿದ್ದಾರೆ. ಶೀತ-ನೆಗಡಿಯಂತೆ ಸಾಮಾನ್ಯವಾಗಿ ಕಾಡುವ ಕಾಯಿಲೆಗಳಲ್ಲಿ ಇದೀಗ ಥೈರಾಯ್ಡ್ ಕೂಡ ಒಂದು. ಶೇಕಡಾ 75ರಷ್ಟು ಜನರನ್ನು ಕಾಡುವ ಈ ಸಮಸ್ಯೆಗೆ ಪ್ರಮುಖ ಕಾರಣ, ಆಹಾರ, ಹಾಗೂ ಜೀವನ ಶೈಲಿ. ಒತ್ತಡ, ಆತಂಕ,ಚಿಂತೆ ಥೈರಾಯ್ಡೆ ಸಮಸ್ಯೆಗೆ ಮೂಲಕ.

ಹಾಗಾಂತ ಇದು ಭಯಾನಕ ಕಾಯಿಲೆಯೇನು ಅಲ್ಲ. ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದಾದ ಥೈರಾಯ್ಡ್ ಶ್ರವಿಸುವ ಹಾರ್ಮೋನುಗಳು ಸರಿಯಾಗಿದ್ದರೆ ದೇಹದ ಎಲ್ಲಾ ಚಟುವಟಿಕೆಗಳು ನಾರ್ಮಲ್ ಆಗಿ ಇರುತ್ತದೆ. ಆದರೆ ಇದರ ಶ್ರವಿಸುವಿಕೆ ಹೆಚ್ಚಾದರೆ, ಹೈಪರ್ ಥೈರಾಯ್ಡ್, ಹಾಗೂ ಕಡಿಮೆಯಾದರೆ ಹೈಪೋ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ, ಐಯೋಡಿನ್ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಥೈರಾಯ್ಡ್ ಸಮಸ್ಯೆಯನ್ನು ಅಣಬೆ(Mushroom)ಯಿಂದ ನಿಯಂತ್ರಿಸಬಹುದು ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ ಎಂದು ತಜ್ಞರು ತಿಳಿಸಿದ್ದಾರೆ. ಥೈರಾಯಿಡ್’ಗೆ ಕಾರಣಗಳಲ್ಲಿ ಒಂದು ಶರೀರದಲ್ಲಿ ಸೆಲೆನಿಯಮ್ ಕಡಿಮೆಯಾಗುವುದು ಅಥವಾ ಸೆಲೆನಿಯಮ್ ಹೀನತೆಗೆ ಗುರಿಯಾಗುವುದು. ಮೃದುವಾದ ಅಣಬೆಗಳಿಂದ ಸೆಲೆನಿಯಮ್ ಹೆತ್ತೆಚ್ಛವಾಗಿ ಇರುತ್ತದೆ. ಆದ್ದರಿಂದ ಅಣಬೆಗಳನ್ನು ಆಹಾರದಲ್ಲಿ ಹೆಚ್ಚು ಬಳಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗೆಯೇ ಸೆಲೆನಿಯಮ್ ಹೆಚ್ಚಾಗಿರುವುದು ಮತ್ತೊಂದು ಪದಾರ್ಥ ಬೆಳ್ಳುಳ್ಳಿ ಎನ್ನಬಹುದು. ಇದು ಥೈರಾಯ್ಡ್ ಉತ್ತಮವಾದುದುಮಾತ್ರವಲ್ಲದೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೂ ತುಂಬಾ ಒಳ್ಳೆಯದು.

ಮತ್ತೊಂದು ಮುಖ್ಯವಾದ ವಿಷಯವೆಂದರೆ, ಎಲೆ ಹಸಿರಿನ ಕ್ಯಾಲೀಫ್ಲವರ್ ರೀತಿಯಲ್ಲಿರುವ ಗ್ರೀನ್ ಲಿಫೇ ವೆಜಿಟೆಬಲ್ ಬ್ರೋಕೋಲಿನಿ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಅನ್ನು ಗುಣಪಡಿಸಬಹುದು. ಕೆಂಪಕ್ಕಿ ಅನ್ನ, ಬಾರ್ಲೆ, ಓಟ್ಸ್ ಇವುಗಳಲ್ಲಿ ವಿಟಮಿನ್ ಬಿ ಅಧಿಕವಿರುತ್ತದೆ. ಇವನ್ನು ತಿಂದರೆ ಥೈರಾಯ್ಡ್ ನಿಂದ ಕುತ್ತಿಗೆ ದಪ್ಪವಾಗುವುದನ್ನು ತಡೆಗಟ್ಟುತ್ತದೆ. ಮೊಟ್ಟೆ ಸ್ಟ್ರಾಬೆರಿ, ಟಮೇಟೋ, ಕೊಬ್ಬರಿ, ಗೋಧಿ, ರೆಡ್ ಮಿಟ್ ನಂತಹವುಗಳನ್ನು ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಬಹುದು.

LEAVE A REPLY

Please enter your comment!
Please enter your name here