ಪ್ರಸ್ತುತ ನಮ್ಮ ದೇಶದಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಶುಗರ್… ವಯಸ್ಸಿನ ಮಿತಿವಿಲ್ಲದೆ ಶುಗರ್ ಎಲ್ಲರಿಗೂ ಬರಬಹುದು. ಡಯಾಬಿಟಿಸ್ ಅನ್ನು ಕಡಿಮೆ ಮಾಡಲು ಎಲ್ಲರೂ ಇಂಗ್ಲೀಷ್ ಮೆಡಿಸೀನ್’ಗಳ ಮೊರೆ ಹೋಗುತ್ತಿದ್ದಾರೆ. ಅದು ತಕ್ಷಣ ಮಾತ್ರ ಉಪಶಮನ ನೀಡುತ್ತದೆ. ಅದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತ ನಮ್ಮ ಜೀವನ ಶೈಲಿ ಬದಲಾಯಿಸಿ ಕೊಳ್ಳಬೇಕು.

ಇದರ ಜೊತೆಗೆ ಇಲ್ಲಿ ಹೇಳಿರುವ ಹಾಗೆ ಬಿರ‌್ಯಾನಿ ಎಲೆಯನ್ನು 2 ಬಾರಿ ಉಪಯೋಗಿಸಿದರೆ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಪ್ರಯೋಗಾತ್ಮಕವಾಗಿ ಇದನ್ನು ಉಪಯೋಗಿಸಲಾಗಿ ಒಳ್ಳೆಯ ಫಲಿತಾಂಶ ಕಂಡು ಬಂದಿದೆ ಎಂದು ಹೇಳಿದ್ದಾರೆ.ಹಾಗಾದರೆ ಬಿರ‌್ಯಾನಿ ಎಲೆಯನ್ನು ಏನು ಮಾಡಬೇಕು…

ಹೀಗೆ ಮಾಡಿ:

ಒಂದು ಪಾತ್ರೆಯಲ್ಲಿ 10 ಬಿರ‌್ಯಾನಿ ಎಲೆಗಳನ್ನು ತೆಗೆದುಕೊಳ್ಳಿ.

3 ಗ್ಲಾಸ್ ನೀರು ಹಾಕಿ 10 ನಿಮಿಷ ಚನ್ನಾಗಿ ಕುದಿಸಿ.

ಇದಾದ ಮೇಲೆ ಸ್ಟವ್ ನಿಂದ ಕೆಳಗಿಳಿಸಿ 2, 3 ಗಂಟೆಯ ತನಕ ತಣ್ಣಗಾಗಿಸಿ.

ಈಗ ಎಲೆಯನ್ನು ತೆಗೆದು ಅರ್ಧ ಗ್ಲಾಸಿಗೆ ಹಾಕಿಕೊಂಡು ದಿನಕ್ಕೆ 3 ಬಾರಿ ಕುಡಿಯಬೇಕು.

ಬೆಳಗ್ಗೆ ಒಮ್ಮೆ ತಯಾರಿಸಿ ಕೊಂಡು ಅದನ್ನೇ 3 ಹೊತ್ತು ಕುಡಿಯಬಹುದು.

ಬೆಳಿಗ್ಗೆ ಬ್ರೇಕ್ ಫಾಸ್ಟ್, ಮಧ್ಯಾಹ್ನ ಊಟಕ್ಕೆ, ರಾತ್ರಿ ಊಟದ 1 ಗಂಟೆ ಮುಂಚೆ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಹೀಗೆ ರೆಗ್ಯುಲರ್ ಆಗಿ 3 ದಿನ ತೆಗೆದುಕೊಂಡು. 2 ವಾರ ಗ್ಯಾಪ್ ಬಿಡಬೇಕು. ಮತ್ತೆ 3 ದಿನ ತೆಗೆದುಕೊಳ್ಳಬೇಕು.

ಹೀಗೆ 2 ಬಾರಿ ಮಾಡಿದರೆ ಸಾಕು ಶುಗರ್ ನಿಯಂತ್ರಣದಲ್ಲಿ ಬರುತ್ತದೆ.

ಉಪಯೋಗಗಳು:

  • ಇನ್ಸುಲಿನ್ ಉತ್ಪತ್ತಿಯನ್ನು ಕ್ರಮಬದ್ಧವಾಗಿ ಮಾಡುತ್ತದೆ. ಇದರಿಂದ ಡಯಾಬಿಟಿಸ್ ಕಂಟ್ರೋಲ್ ಆಗುತ್ತದೆ.
  • ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಸಮಸ್ಯೆಗಳು ಬರುವುದಿಲ್ಲ.
  • ಕ್ಯಾನ್ಸರ್ ಅನ್ನು ಎದುರಿಸುವ ರೋಗ ನಿರೋಧಕ ಶಕ್ತಿಯನ್ನು ಶರೀರಕ್ಕೆ ಕೊಡುತ್ತದೆ.

LEAVE A REPLY

Please enter your comment!
Please enter your name here