ರುಚಿಕರವಾದ ಊಟಕ್ಕೆ ರುಚಿಕರವಾದ ಮೇಥಿ ಪನ್ನೇರ್ ಜೊತೆಯಲ್ಲಿ ಇದ್ದಾರೆ ಎಷ್ಟು ಚೆನ್ನಾ? ಆಹಾ ನಿಮಗೂ ಮನೆಯಲ್ಲಿ ಮೇಥಿ ಪನ್ನೇರ್ ಮಾಡ್ಬೇಕು ಎಂದೆನಿಸಿದೆಯಾ? ಹಾಗಿದ್ದರೆ ಕೆಳಗೆ ಕೊಟ್ಟಿರುವ ವಿಧಾನವನ್ನು ಅನುಸರಿಸಿ ರುಚಿಕರವಾದ ಮೇಥಿ ಪನ್ನೇರ್ ನ ತಯಾರಿಸಿ..

ಮೇಥಿ ಪನೀರ್ : 4 ಜನಕ್ಕೆ

ಬೇಕಾಗುವ ಪದಾರ್ಥಗಳು..

ಸ್ವಚ್ಛಗೊಳಿಸಿದ ಮೆಂತ್ಯೆ ಸೊಪ್ಪು: 1 ದೊಡ್ಡ ಬಟ್ಟಲು

ತುರಿದ ತೆಂಗಿನಕಾಯಿ: 1 ಚಿಕ್ಕ ಬಟ್ಟಲು

ಪನೀರ್ ಕ್ಯೂಬ್ಸ್

ಸಣ್ಣಗೆ ಹೆಚ್ಚಿದ ಈರುಳ್ಳಿ: 2

ದೊಡ್ಡದಾಗಿ ಹೆಚ್ಚಿದ ಈರುಳ್ಳಿ 2

ಟೊಮೆಟೊ:3(ರುಬ್ಬಲು)

ಶುಂಠಿ ಬೆಳ್ಳುಳ್ಳಿ ಪೇಸ್ಟ್

ಹಸಿ ಮೆಣಸಿನಕಾಯಿ : 4

ಫ಼್ರೆಶ್ ಕ್ರೀಮ್: 1 ಚಿಕ್ಕ ಬಟ್ಟಲು

ದನಿಯ ಪುಡಿ: 1 ಚಮಚ

ಜೀರಿಗೆ ಪುಡಿ: 1 ಚಮಚ

ಗರಂ ಮಸಾಲಾ: 1/2 ಚಮಚ

ಕಸೂರಿ ಮೇಥಿ: 1 ಚಮಚ

ಉಪ್ಪು ರುಚಿಗೆ.

ಎಣ್ಣೆ ಒಗ್ಗರಣೆಗೆ ಸಕ್ಕರೆ : 1 ಚಮಚ

ಮಾಡುವ ವಿಧಾನ :

ಟೊಮೆಟೊ, ಹಸಿ ಮೆಣಸಿನಕಾಯಿ ಈರುಳ್ಳಿ ರುಬ್ಬಿಕೊಳ್ಳಿ, ನಂತರ ಮೆಂತ್ಯೆ ಸೊಪ್ಪು ಹಾಗೂ ತೆಂಗಿನಕಾಯಿಯನ್ನು ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಅದಕ್ಕೆ ರುಬ್ಬಿದ ಈರುಳ್ಳಿ ಟೊಮೆಟೊ ಹಾಕಿ. ಇದಕ್ಕೆ ದನಿಯ ಪುಡಿ, ಜೀರಿಗೆ ಪುಡಿ, ಉಪ್ಪು, ಸಕ್ಕರೆ ಹಾಕಿ ಬಾಣಲೆಗೆ ಅಂಟಿಕೊಳ್ಳದಂತೆ
ಹುರಿಯುತ್ತಿರಿ. ಫ಼್ರೆಶ್ ಕ್ರೀಮ್ ಸೇರಿಸಿ ಜಿಡ್ಡು ಬಿಡುವವರೆಗೆ ಹೆಚ್ಚಿನ ಉರಿಯಲ್ಲಿ ಹುರಿಯುತ್ತಿರಿ. ಈಗ ರುಬ್ಬಿದ ಮೆಂತ್ಯೆ ಸೊಪ್ಪು, ತೆಂಗಿನಕಾಯಿ ಸೇರಿಸಿ ಹಸಿ ವಾಸನೆ ಹೋಗುವ ವರೆಗೆ ಹುರಿಯುತ್ತಿರಿ. ಸ್ವಲ್ಪ ಸ್ವಲ್ಪ ನೀರು ಬೆರೆಸುತ್ತ ನಿಮಗೆ ಬೇಕಾದ ಹದಕ್ಕೆ ಗ್ರೇವಿ ತಯಾರಿಸಿಕೊಳ್ಳಿ. ಕೊನೆಯಲ್ಲಿ ಗರಂ ಮಸಾಲಾ, ಕಸೂರಿ ಮೇಥಿ ಸೇರಿಸಿ 2 ನಿಮಿಷ ಬಿಟ್ಟು ಪನೀರ್ ಕ್ಯೂಬ್ಸ್ ಹಾಕಿ ಚನ್ನಾಗಿ ಮಿಕ್ಸ್ ಮಾಡಿ, ಮಂದ ಉರಿಯಲ್ಲಿ 5 ನಿಮಿಷ ಮುಚ್ಚಿಡಿ. ಮೇಥಿ ಪನೀರ್ ಸವಿಯಲು ಸಿದ್ಧ. ಚಪಾತಿ, ಪುಲಾವ್, ಫ಼್ರೈಡ್ ರೈಸ್ ಜೊತೆಗೆ ತಿನ್ನಬಹುದು.

LEAVE A REPLY

Please enter your comment!
Please enter your name here