ಕುಬೇರ್,ಕುವೆರಾ ಮತ್ತು ಧನ್ಪತಿ ಎಂದೂ ಕರೆಯಲ್ಪಡುವ ಕುಬೇರನು ಹಿಂದೂಗಳಿಂದ ಸಂಪತ್ತಿನ ದೇವರು ಎಂದು ಪೂಜಿಸಲಾಗುತ್ತದೆ. ಅವನನ್ನು ದೇವತೆಗಳ ಖಜಾಂಚಿ ಎಂದೂ ಕರೆಯುತ್ತಾರೆ. ಅವನನ್ನು ಪೂಜಿಸುವವರ ಸಂಖ್ಯೆ ಜಾಸ್ತಿಯೇ ಇದೆ. ಕುಬೇರನು ಪ್ರಧಾನವಾಗಿ ಮತ್ತು ಯಾರು ಪೂಜಿಸುತ್ತಾರೆ ಅವರಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ನೀಡುತ್ತಾನೆ.

ಕುಬೇರನು ದಿಕ್ಪಾಲಕರಲ್ಲಿ ಒಬ್ಬರಾಗಿದ್ದಾನೆ.ಉತ್ತರ ದಿಕ್ಕಿನ ಮೇಲೆ ಅವನು  ವಿಶೇಷ ಅಧಿಕಾರವನ್ನು ಹೊಂದಿದ್ದಾನೆ.ದೀಪಾವಳಿ ಸಮಯದಲ್ಲಿ ಕುಬೇರನನ್ನು ಲಕ್ಷ್ಮಿ ದೇವಿಯೊಂದಿಗೆ ಪೂಜಿಸಲಾಗುತ್ತದೆ, ಏಕೆಂದರೆ ಅದು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದೆ. ದಕ್ಷಿಣ ಭಾರತದ ವಿಶ್ವಪ್ರಸಿದ್ಧ ತಿರುಪತಿ ದೇವಸ್ಥಾನವನ್ನು ಸಾವಿರಾರು ಕೋಟಿ ಭಕ್ತರು ಭೇಟಿ ಮಾಡುತ್ತಾರೆ. ದೇಣಿಗೆಯ ಧಾರ್ಮಿಕ ಆಚರಣೆಗೆ ಅನುಗುಣವಾಗಿ ದೇವಸ್ಥಾನದಲ್ಲಿ ಕುಬೇರನ ಅಸ್ತಿತ್ವವಿದೆ.ವೆಂಕಟೇಶನ ಮದುವೆಗಾಗಿ ವೆಂಕಟೇಶ್ವರನಿಗೆ (ವಿಷ್ಣುವಿನ ಒಂದು ರೂಪ) ಕುಬೇರನು  ಹಣವನ್ನು ನೀಡಿದ್ದಾನೆಂದು ನಂಬಲಾಗಿದೆ.ವೆಂಕಟೇಶ್ವರ ಪರವಾಗಿ ಕುಬೇರನಿಗೆ ಸಾಲವನ್ನು ಮರುಪಾವತಿಗಾಗಿ  ಭಕ್ತರು ವೆಂಕಟೇಶ್ವರನ ಹಂಡಿಯಲ್ಲಿ ದೇಣಿಗೆ ನೀಡುತ್ತಾರೆ.

ಕುಬೇರ ಯಂತ್ರ ಎಂದರೇನು ಅದರ ಉಪಯೋಗವೇನು?

ನಿಯಮಿತವಾಗಿ ಕುಬೇರ ಯಂತ್ರವನ್ನು ಆರಾಧಿಸುವವರ ಸಂಪತ್ತಿನಲ್ಲಿ ಮತ್ತು ಅದೃಷ್ಟದಲ್ಲಿ ಒಂದು ವಿಶಿಷ್ಟ ಬದಲಾವಣೆಯನ್ನು ತರುತ್ತದೆ. ಇದರಿಂದ ಹಣವನ್ನುಗಳಿಸಲು ಪ್ರಾರಂಭಿಸುತ್ತಾರೆ ಹಾಗೂ ನಷ್ಟಗಳು ಕಡಿಮೆಯಾಗುತ್ತವೆ.
ಇದು ಅತ್ಯಂತ ಶಕ್ತಿಶಾಲಿ ಯಂತ್ರ. ಇದನ್ನು ಹೊಂದಿರುವವನಿಗೆ ಹಣದಲ್ಲಿ ಎಂದಿಗೂ ಕೊರತೆಯಿರುವುದಿಲ್ಲ,ಅವನ ಮನೆ ಮತ್ತು ಖಜಾನೆ ಯಾವಾಗಲೂ ಪೂರ್ಣವಾಗಿರುತ್ತವೆ. ಅವನ ಕುಟುಂಬವು ಎಂದಿಗೂ ಸಂಪನ್ಮೂಲಗಳನ್ನು ಕಳೆದುಕೊಳ್ಳುವುದಿಲ್ಲ.

ಈ ಯಂತ್ರವನ್ನು ದೇವಾಲಯದ ಕೊಠಡಿಯಲ್ಲಿ ಅಳವಡಿಸುತ್ತಾರೆ, ನಿಮ್ಮ ನಗದು ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ, ಬೀರು ಒಳಗೆ ಮತ್ತು ಹಣಕಾಸು ವಹಿವಾಟು ನಡೆಸುವ ಕಚೇರಿಗಳಲ್ಲಿ ಇಡಲಾಗುತ್ತದೆ. ಪಶ್ಚಿಮದ ಈಶಾನ್ಯ ಭಾಗದಲ್ಲಿ ಇದನ್ನು ಇಡಬೇಕು. ಇದು ಹೊಸ ಮಾರ್ಗಗಳನ್ನು ಮತ್ತು ಆದಾಯ ಮತ್ತು ಸಂಪತ್ತಿನ ಮೂಲಗಳನ್ನುಹಣದ ಹರಿವು ಹೆಚ್ಚಾಗುವಂತೆ ಮಾಡುತ್ತದೆ.ಇದು ಹಣದ ಹರಿವನ್ನು ಮತ್ತು ಸಂಪತ್ತನ್ನು ಸಂಗ್ರಹಿಸುವ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here