ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ… ನಮ್ಮ ಹಸಿವನ್ನು ನೀಗಿಸುವ ಅನ್ನ ದೇವರ ಸಮಾನ… ಅಕಸ್ಮಾತ್ ನಾವು ಅನ್ನವನ್ನು ಕಾಲಿನಿಂದ ತುಳಿದರೆ, ನಮಸ್ಕರಿಸುತ್ತೇವೆ… ಆದರೆ, ಊಟ ಮಾಡಿದ ನಂತರ ನಮಗೆ ಗೊತ್ತಿಲ್ಲದಂತೆ ಮಾಡುವ ತಪ್ಪುಗಳು ನಮಗೆ ದರಿದ್ರವನ್ನುಂಟುಮಾಡುತ್ತವೆ. ಆ ತಪ್ಪುಗಳು ಯಾವುವೆಂದು ತಿಳಿದುಕೊಂಡು,ಇನ್ನು ಮೇಲೆ ಅಂತಹ ತಪ್ಪುಗಳನ್ನು ಮಾಡಬೇಡಿ.

ಊಟ ಮಾಡಿದ ನಂತರ ಮಾಡುವ 5 ತಪ್ಪುಗಳು…

ಊಟ ಮಾಡಿದ ತಕ್ಷಣ, ತಟ್ಟೆಯಲ್ಲಿ ಕೈ ತೊಳೆಯಬಾರದು…ಊಟದ ನಂತರ ಹೊರಗೆ ಹೋಗಿ ಕೈತೊಳೆಯಬೇಕು. ತಟ್ಟೆಯಲ್ಲಿ ಕೈ ತೊಳೆದರೆ ದರಿದ್ರ ಬರುತ್ತದೆ.

ಬಹಳಷ್ಟು ಮಂದಿಗೆ ಊಟಮಾಡಿದ ನಂತರ ತಟ್ಟೆ ಬಿಟ್ಟು ಏಳುವ ಅಭ್ಯಾಸ ಇರುವುದಿಲ್ಲ. ಇದು ದಾರಿದ್ರ್ಯದ ಸಂಕೇತ. ಆದುದರಿಂದ ಊಟವಾದ ಒಡನೆಯೇ ತಟ್ಟೆ ಬಿಟ್ಟು ಏಳಬೇಕು.

ಊಟದ ನಂತರ, ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಆಹಾರ ಪದಾರ್ಥಗಳನ್ನು ತೆಗೆಯಲು ಪಿನ್ನು ಅಥವಾ ಕಡ್ಡಿಗಳನ್ನು ಬಳಸಬಾರದು. ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು.

ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪೆಂದರೆ, ಊಟವಾದ ನಂತರ ಮೈಮುರಿಯುತ್ತಾರೆ. ಹೀಗೆ ಮಾಡಿದರೆ,ದಾರಿದ್ರ್ಯವನ್ನು ಆಹ್ವಾನಿಸಿದಂತೆಯೇ. ಮೈಮುರಿಯುವುದು ಇಲ್ಲವೆ ತಿಂದ ಒಡನೆಯೆ ಮಲಗುವುದು ಒಳ್ಳೆಯದಲ್ಲ.

ಊಟ ಮಾಡಿದ ನಂತರ ಬಹಳಷ್ಟು ಮಂದಿ ಕೈತೊಳೆದು,ಒದ್ದೆ ಕೈಗಳನ್ನು ಕೊಡವುತ್ತಾರೆ. ಹೀಗೆ ಮಾಡಿದರೆ, ದರಿದ್ರ ಬಂದಂತೆಯೇ… ಇನ್ನು ಮುಂದೆ ಊಟದನಂತರ ಮೇಲೆ ತಿಳಿಸಿದ 5 ಕೆಲಸಗಳನ್ನು ಮಾಡಬೇಡಿ.

LEAVE A REPLY

Please enter your comment!
Please enter your name here