ಇದು ಆಂಡ್ರಾಯ್ಡ್ ಫೋನ್ ಗಳ ಯುಗ ಯಾರ ಕೈನಲ್ಲಿ ನೋಡಿದರೂ ಸ್ಮಾರ್ಟ್ಫೋನ್ ಗಳು, ಆಂಡ್ರಾಯ್ಡ್ ಫೋನ್ಗಳು ಮತ್ತು ಐಫೋನ್ಗಳು, ಫೋನ್ ಗಳ ಮಾರಾಟ ಜಾಸ್ತಿಯಾಗುತ್ತಿದ್ದಂತೆ ಅವುಗಳಿಗೆ ಬೇಕಾದ ಆಪ್ಸ್ ಗಳು ಭರ್ಜರಿಯಾಗಿ ಸಿಗತೊಡಗಿದವು, ಆದರೆ ಫೋನ್ ಗಳ ಸಾಮರ್ಥ್ಯಕ್ಕೆ ತಕ್ಕಂತೆ ಆಪ್ ಗಳನ್ನೂ ನಮ್ಮ ಜನ ಇನ್ಸ್ಟಾಲ್ ಮಾಡಿಕೊಳ್ಳುವುದನ್ನು ನೋಡಿದ್ದೇವೆ, ಆದರೆ ಹಲವಾರು Appಗಳು ನಮಗೆ ತಿಳಿಯದೇ ನಮ್ಮ ಫೋನಿಗೆ ಹಾನಿಮಾಡುತ್ತಿರುತ್ತವೆ ಎಂದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ.

ಆಪ್ ಸ್ಟೋರ್ಗಳಲ್ಲಿ ಸಿಗುವ ಹಲವು ಅಪ್ಲಿಕೇಶನ್ ಗಳು ಸುರಕ್ಷಿತವಲ್ಲ.! ಅವುಗಳು ನಮಗೆ ತಿಳಿಯದೇ ನಮ್ಮ ಫೋನ್ ಗಳ ಮಾಹಿತಿಯನ್ನು ಸೋರಿಸುವಲ್ಲಿ ಕೆಲಸಮಾಡುತ್ತಿರುತ್ತವೆ, ಇನ್ನು ಕೆಲವು ಅಪ್ಲಿಕೇಶನ್ ಗಳು ನಮ್ಮ ಫೋನ್ ಗಳ  ಬ್ಯಾಟರಿಯನ್ನು ಎಲ್ಲಿಲ್ಲದಂತೆ ಹೀರುತ್ತಿರುತ್ತವೆ, ಮತ್ತೆ ಕೆಲವು ನಮಗೆ ಕಿರಿಕಿರಿ ಉಂಟುಮಾಡುವ ಬೊಟ್ ವೇರ್ ಗಳು ಹಾಗು ಆಯ್ಡ್ವೇರ್ (adware and Botware) ಗಳನ್ನೂ ತಂದು ನಮಗೆ ಕಾಟಕೊಡುತ್ತವೆ ಇಂಥಹ ಅಪ್ಲಿಕೇಶನ್ಗಳನ್ನು ನಾವು ಆದಷ್ಟು ನಮ್ಮ ಫೋನ್ ಗಳಿಂದ ದೂರವಿಡುವುದು ಅತ್ಯಂತ ಸೂಕ್ತ.

ಉಚಿತ ಆವೃತ್ತಿಯಲ್ಲಿ ಸಿಗುವ ಈ ಕೆಳಗಿನ ಅಪ್ಲಿಕೇಶನ್ ಗಳನ್ನು ನಾವು ಆದಷ್ಟು ಬಳಸದೇ ಇರುವುದು ಸೂಕ್ತ.

(ಸೂಚನೆ: ಕೆಳಗಿನ ಅಪ್ಪ್ಲಿಕೇಷನ್ಗಳು PRO ವರ್ಷನ್ ಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಆದರೆ ಉಚಿತ ಆವೃತ್ತಿಯಲ್ಲಿ ಮೇಲೆ ಹೇಳಿರುವ ಹಾಗೆ ತೊಂದರೆ ಕೊಡುವಂತಹವು)

QuickPic

Es-File Explorer

UC Browser

Clean It

Music Players (Undefualt)

Du Battery Saver

Dolphin Web Browser

 

LEAVE A REPLY

Please enter your comment!
Please enter your name here