ಈಗ ದೇಶದಾದ್ಯಂತ ಹೆಸರುವಾಸಿಯಾಗಿರುವುದು ಒಂದು ಕತ್ತೆ! ಅದು ಕೂಡ ತನ್ನ ದುಬಾರಿ ಬೆಲೆಯಿಂದ! ಅಂದಹಾಗೆ ಕತ್ತೆಯ ಬೆಲೆ ಬರೋಬ್ಬರಿ 10 ಲಕ್ಷವಂತೆ, ಈ ಕತ್ತೆಯ ಹೆಸರು  ಟಿಪ್ಪು, ಈ ಕತ್ತೆ ಸಾಮಾನ್ಯ ಕತ್ತೆಗಿಂತ ಏಳು ಇಂಚು ಎತ್ತರವಾಗಿದೆಯಂತೆ.

ಇದರ ಉದ್ದದಿಂದ ಇದು ಪ್ರಖ್ಯಾತಿ ಹೊಂದಿದ್ದು ಹಿಂದೊಮ್ಮೆ ಉತ್ತರಪ್ರದೇಶದ ರೊಹಟಕ್ನ ಜಾನುವಾರ ಸಂತೆಯಲ್ಲಿ ಬರೋಬ್ಬರಿ ೫ ಲಕ್ಷಕ್ಕೆ ಆಫರ್ ಗಿಟ್ಟಿಸಿಕೊಂಡಿದ್ದ ಈ ಕತ್ತೆಯನ್ನು ಮಾಲೀಕ ರಾಜಸಿಂಗ್ ಮಾರಾಟ ಮಾಡಲು ನಿರಾಕರಿಸಿ ಈ ಕತ್ತೆಯನ್ನು ತನ್ನ ಬಳಿಯಲ್ಲಿಯೇ ಉಳಿಸಿಕೊಡಿದ್ದಾಗಿ ತಿಳಿಸುತ್ತಾನೆ.

“ಟಿಪ್ಪು ಸಾಮಾನ್ಯ ಕತ್ತೆ ಅಲ್ಲ,” ಎಂದು ಅದರ ಮಾಲೀಕ ರಾಜಸಿಂಗ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಈ ಕತ್ತೆಯ ಆಹಾರವನ್ನು ಸರಿಯಾದ ಸಮಯಕ್ಕೆ ನಿಭಾಯಿಸಲು ರಾಜಸಿಂಗ್ ಕೂಲಿಗಳನ್ನು ಇಟ್ಟಿದ್ದಾನಂತೆ.! ಈ ಕತ್ತೆ ದಿನಕ್ಕೆ 10 ಕೆಜಿ ಉದ್ದಿನಕಾಳು, 20 ಕೆಜಿ ಹಸಿಹುಲ್ಲು ಹಾಗು ಬರೋಬ್ಬರಿ 4 ರಿಂದ 5 ಲೀಟರ್ ಹಾಲು ಕುಡಿಯುತ್ತದಂತೆ!

LEAVE A REPLY

Please enter your comment!
Please enter your name here