ಆ ದೇವರು ನಮ್ಮ ಹಣೆಯ ಗೆರೆಯಲ್ಲೇ ನಮ್ಮ ಅದೃಷ್ಟವನ್ನು ಬರೆದಿದ್ದಾರೆ ಎಂಬ ಮಾತೊಂದಿದೆ. ಆಯಸ್ಸು ಮುಗಿಯುತ್ತಾ ಬಂದಿದ್ದರೆ, ಹೀಗೆಲ್ಲಾ ನಡೆಯುತ್ತವೆಯಂತೆ! ವೇದಗಳಲ್ಲಿ ಕೂಡ ಹಣೆಯ ಗೆರೆಗಳ ಬಗ್ಗೆ ಅರ್ಥಬದ್ಧವಾದ ಮಾತುಗಳಿದ್ದು ಇವುಗಳನ್ನು ಕೆಲವು ದೃಷ್ಟಾಂತಗಳನ್ನು ನಾವು ನಂಬಲೇ ಬೇಕಾಗುತ್ತದೆ. ಆಯುಷ್ಯದ ಗುಟ್ಟನ್ನು ತಿಳಿಸಿಹೇಳುವ ಈ ಹಣೆಯ ಗೆರೆಗಳು ನಮ್ಮ ಜೀವನದ ಪರಮ ಸತ್ಯಗಳು ಎಂದೆನಿಸಿವೆ. ಹಣೆಯ ಬರಹ ಸರಿಯಾಗಿದ್ದರೆ ಎಲ್ಲವೂ ಸರಿಯಾಗುತ್ತದೆ ಎಂಬ ಮಾತನ್ನು ಯಾರಾದರೂ ಹಿರಿಯರು ಹೇಳುತ್ತಿರುವುದನ್ನು ನೀವು ಕೇಳಿರಬಹುದು. ನಮ್ಮ ಅದೃಷ್ಟ ರೇಖೆಯಾಗಿರುವ ಹಣೆಯ ಗೆರೆಗಳು ಜೀವಿತಾವಧಿ, ಅದೃಷ್ಟ, ಕಷ್ಟ, ಸುಖ ಮೊದಲಾಗಿ ಪ್ರತಿಯೊಂದನ್ನೂ ನಿರ್ಧರಿಸುತ್ತದೆ.ಈ ಹಣೆಯ ಗೆರೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನಾವು ನೀಡುತ್ತಿದ್ದು ನಿಮ್ಮ ಆಯುಷ್ಯದ ಗುಟ್ಟನ್ನು ಇವು ಹೇಗೆ ತಿಳಿಸಲಿವೆ ಎಂಬುದನ್ನು ಅರಿತುಕೊಳ್ಳೋಣ..

ಒಂದಕ್ಕೊಂದು ಸಂಧಿಸುವ ರೇಖೆಗಳು

ನೀವು ಹಣೆಯಲ್ಲಿ ಎರಡು ರೇಖೆಗಳನ್ನು ಹೊಂದಿದ್ದು ಅದು ಒಂದನ್ನೊಂದು ಸಂಧಿಸುವಂತಿದ್ದರೆ ಇವರ ಜೀವಿತಾವಧಿ 60 ವರ್ಷಗಳಾಗಿವೆ. ಇವರುಗಳು ತಮ್ಮ ಅರೋಗ್ಯದಲ್ಲಿ ಕೂಡ ಏರುಪೇರುಗಳನ್ನು ಕಂಡುಕೊಳ್ಳಲಿದ್ದು ಹಲವಾರು ವೈದ್ಯಕೀಯ ಸಮಸ್ಯೆಗಳಿಗೆ ಒಳಗಾಗಲಿದ್ದಾರೆ.

ನೆತ್ತಿಯ ಕೆಳಭಾಗದ ರೇಖೆ

ನೆತ್ತಿಯ ಕೆಳಭಾಗದಲ್ಲಿ ರೇಖೆಯನ್ನು ಹೊಂದಿರುವ ವ್ಯಕ್ತಿ 4 ಗೆರೆಗಳ ಸಣ್ಣದಾದ ಸಂಕುಚಿತವನ್ನು ಹೊಂದಿದ್ದರೆ ಅವರು 75 ವರ್ಷಗಳವರೆಗೆ ಬದುಕುತ್ತಾರಂತೆ!

ಗೋಚರವಾಗುವ ಗೆರೆಗಳಲ್ಲಿ

ತಮ್ಮ ಹಣೆಯಲ್ಲಿ ಯಾವುದೇ ರೇಖೆಗಳನ್ನು ಹೊಂದಿರದ ವ್ಯಕ್ತಿಯು 40-45 ವರ್ಷಗಳವರೆಗೆ ಮಾತ್ರ ಜೀವಿಸುತ್ತಾರೆ. ಅಂತೆಯೇ ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳೂ ಇರುತ್ತವೆ.

75 ರಿಂದ ನಂತರದ ಜೀವಿತಾ ಅವಧಿ

ವೇದಗಳ ಪ್ರಕಾರ ಮೂರು ದೃಶ್ಯವಾಗುವ ಗಾಢ ಗೆರೆಯನ್ನು ಹೊಂದಿರುವ ವ್ಯಕ್ತಿ 75 ವರ್ಷಗಳಾಚೆಗೂ ಜೀವಿಸುತ್ತಾನೆ ಎಂದಾಗಿದೆ. ಇವರ ಜೀವನ ಅತ್ಯಂತ ಸುಖಮಯವಾಗಿರುತ್ತದೆ.

ಪ್ಲೇನ್ ಹೆಡ್

ವೇದಗಳ ಪ್ರಕಾರ 5 ಗರೆಗಳನ್ನು ಹೊಂದಿದ್ದು ಅದರಲ್ಲಿ ವಿಭಜನೆಯನ್ನು ಹೊಂದಿರುವ ವ್ಯಕ್ತಿ ಶಾಂತವಾದ ಸುಖ ಸಮೃದ್ಧಿಯುಳ್ಳ ಜೀವನವನ್ನು ಅನುಭವಿಸುತ್ತಾರೆ ಎಂದಾಗಿದೆ. ಇವರುಗಳು 100 ವರ್ಷಗಳವರೆಗೆ ಬದುಕುತ್ತಾರೆ.

ಉಬ್ಬಿರುವ ಕೆಳಭಾಗದ ರೇಖೆಗಳು

5 ರೇಖೆಗಳನ್ನು ಈ ಮಾದರಿಯಲ್ಲಿ ಹೊಂದಿರುವ ವ್ಯಕ್ತಿ ನಿಖರವಾದ ವಿಭಜನೆಗಳನ್ನು ಹೊಂದಿರುತ್ತಾರೆ ಮತ್ತು ಇವರುಗಳು ಆರೋಗ್ಯವಂತರಾಗಿರುವುದಿಲ್ಲ ಅಂತೆಯೇ ಇದು ಉತ್ತಮ ಸಂಕೇತವಲ್ಲ. ಇವರುಗಳು ಅಲ್ಪಾಯುಷಿಗಳಾಗಿರುತ್ತಾರಂತೆ.

LEAVE A REPLY

Please enter your comment!
Please enter your name here