ಅಂತೂ ಇಂತೂ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ವಿಧಾನಸಭಾ ಚುನಾವನಂತೆ ದಿನಾಂಕ ಹೊರಬಿದ್ದಿದೆ, ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು,  ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ. 12ರಂದು ಅಂದರೆ ಗುರುವಾರ ಮತದಾನ ನಡೆಯಲಿದ್ದು  , ಮೇ 15ರಂದು ಅಂದರೆ ಮಂಗಳವಾರ ನಡೆಯಲಿರುವ ಮತಎಣಿಕೆ ನಡೆಯಲಿದೆ.

ಚುನಾವಣಾ ಕುರಿತಂತೆ ನವದೆಹಲಿಯಲ್ಲಿ ಇರುವ ಕೇಂದ್ರ ಚುನಾವಣಾ ಆಯೋಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್​ ರಾವತ್​ ಅವರು ಚುನಾವಣಾ ದಿನಾಂಕ ಪ್ರಕಟಿಸಿದ್ದಾರೆ..

224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 4 ಕೋಟಿ 96 ಲಕ್ಷ ಮತದಾರಿದ್ದಾರೆ. ಅವರಲ್ಲಿ 2 ಕೋಟಿ 51 ಲಕ್ಷ ಪುರುಷ ಮತದಾರಿದ್ದರೆ, 2 ಕೋಟಿ 44 ಲಕ್ಷ ಮಹಿಳಾ ಮತದಾರರಿದ್ದಾರೆ. ಕನ್ನಡ, ಇಂಗ್ಲಿಷ್​ನಲ್ಲಿ ಮತದಾರರ ಚೀಟಿ ಇರುತ್ತದೆ ಎಂದು ರಾವತ್​ ತಿಳಿಸಿದರು.

ಮೇ 28 ರಂದು ಸಿದ್ದರಾಮಯ್ಯ ಸರ್ಕಾರದ ಅವಧಿ ಮುಕ್ತಾಯವಾಗಲಿದೆ. ಮುಂದೆ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎಂದು ಮತದಾರರೇ ತೋರಿಸಿಕೊಡಬೇಕಿದೆ..

LEAVE A REPLY

Please enter your comment!
Please enter your name here