ಮದುವೆಯಾದ ನಂತರ ಹೆಣ್ಣು ತನ್ನ ಗಂಡನ ಮನೆಗೆ ಹೋಗಿ ಸಂಸಾರ ಮಾಡುವುದನ್ನು ನಾವೆಲ್ಲರೂ ಕಂಡಿರುತ್ತೇವೆ, ಆದರೆ ರಾಜಸ್ತಾನದ ರೆಬಾರಿ ಸಮುದಾಯದಲ್ಲಿ ಮದುವೆಯಾದ ನಂತರ ವರ ಬರೋಬ್ಬರಿ ೭ ವರ್ಷಗಳ ಕಾಲ ತಮ್ಮ ಅತ್ತೆಯ ಮನೆ ಅಂದರೆ ತಾನು ಕೈ ಹಿಡಿದ ಹೆಂಡತಿಯ ತವರು ಮನೆಯಲ್ಲಿ ವಾಸಮಾಡಬೇಕಂತೆ! ನಂತರ ತನ್ನ ಹೆಂಡತಿಯನ್ನು ತನ್ನ ಮನೆಗೆ ಅಲ್ಲಿಯ ಪದ್ದತಿಯ ಪ್ರಕಾರ ಕರೆದುಕೊಂಡು ಹೋಗಬಹುದಂತೆ! ಇದೆಲ್ಲ ವಿಚಿತ್ರ ಎನಿಸಿದರೂ ಸತ್ಯ.

ಮನೆಯ ಕೆಲಸ ಮಾಡಿಕೊಂಡಿರಬೇಕು..!

ಮದುವೆಯಾದ ನಂತರ ಮನೆಗೆ ಠಿಕಾಣಿ ಹೊಡಿಯೋ ಅಳಿಯ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ! ಬದಲಿಗೆ ಅತ್ತೆಯ ಮನೆಯ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಲೇಬೇಕಂತೆ! ಈ ಸಮುದಾಯದ  ಹಿರಿಯರು ಹೇಳುವ ಪ್ರಕಾರ ಮದುವೆಯಾಗಿರುವ ಗಂಡು ತನ್ನ ಅತ್ತೆಯ ಮನೆಯಲ್ಲಿ ಕೃಷಿ, ರಾಸುಗಳ ಪೋಷಣೆ ಸೇರಿದಂತೆ ಎಲ್ಲಾ ಕಾರ್ಯಗಳನ್ನು ಮಾಡಬೇಕು ನಂತರ 7 ವರ್ಷಗಳ ಬಳಿಕ ಹೆಂಡತಿಯನ್ನು ಕರೆದುಕೊಂಡು ಅವರ ಮನೆಗೆ ತೆರಳಬಹುದು ಎಂದು ತಿಳಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಈ ಸಮುದಾಯದಲ್ಲಿ ಹೆಣ್ಣು ಮಕ್ಕಳು ಕಡಿಮೆಯಾಗಿರುವುದರಿಂದ ಈ ಸಂಪ್ರದಾಯಕ್ಕೆ ಮತ್ತಷ್ಟು ಹೆಸರು ಬಂದಿದ್ದು, ಹೆಣ್ಣು ಹೆತ್ತ ಮನೆಯವರಿಗೆ ಫುಲ್ ಡಿಮ್ಯಾಂಡಪ್ಪೋ ಡಿಮ್ಯಾಂಡು ಅನ್ನುವಂತಾಗಿದೆ..

LEAVE A REPLY

Please enter your comment!
Please enter your name here