ಹೌದು ಒಂದು ಕಿತ್ತಳೆ ಹಣ್ಣು ಅನ್ನೋದು ಹೇಗೆ ಅದರ ಉಪಯೋಗವೇನು ಅನ್ನೋದು ಇಲ್ಲಿದೆ ನೋಡಿ. ತನ್ನ ಬಣ್ಣ ಹಾಗೂ ಸುವಾಸನೆಯಿಂದಲೇ ಎಲ್ಲರನ್ನು ಆಕರ್ಷಿಸುವ ಕಿತ್ತಳೆ ಬಹುತೇಕರಿಗೆ ಇಷ್ಟವಾಗುತ್ತದೆ. ಇದರಲ್ಲಿರುವ ಆರೋಗ್ಯಕರ ಅಂಶಗಳು ತಿಳಿದರೆ ಮತ್ತಷ್ಟು ಖುಷಿಯಿಂದ ಹಣ್ಣನ್ನು ಸೇವಿಸುವಿರಿ.

ಒಂದು ಸಾಮಾನ್ಯ ಗಾತ್ರ ಹಣ್ಣಿನಲ್ಲಿ ವಿಟಮಿನ್ ಸಿ ಶೇ.93, ನಾರಿನಾಂಶ ಶೇ.13, ವಿಟಮಿನ್ ಬಿ1 ಶೇ.9, ಪಾಂತೋಥೇನಿಕ್ ಆಸಿಡ್ ಶೇ.7, ಲವಾಂಶ ಶೇ.7, ಪೋಟಾಶಿಯಂ ಶೇ.7 ಮತ್ತು ಕಾಲ್ಶಿಯಂ ಶೇ. 5ರಷ್ಟಿದೆ.

ಇದರಲ್ಲಿರುವ ವಿಟಮಿನ್ ಸಿ ಅಂಶ ರೋಗನಿವಾರ ಶಕ್ತಿಯನ್ನು ಹೆಚ್ಚಿಸಿ ಸದಾ ಆರೋಗ್ಯವಂತರಾಗಿರುವಂತೆ ಕಾಪಾಡುತ್ತದೆ. ರಕ್ತದೊತ್ತಡವನ್ನು ನಿವಾರಿಸುತ್ತಾ ರಕ್ತ ಸಂಚಾರವನ್ನು ಸುಗಮಗೊಳಿಸಲು ಅನುಕೂಲ ಮಾಡಿಕೊಡುತ್ತದೆ. ಕ್ಯಾನ್ಸರ್ ತಡೆಗಟ್ಟುವ ಒಳ್ಳೆಯ ಅಂಶಗಳು ಈ ಹಣ್ಣಿನಲ್ಲಿ ಯಥೇಚ್ಚವಾಗಿರುವುದರಿಂದ ನಿತ್ಯ ಒಂದು ಹಣ್ಣನ್ನು ಅಥವಾ ಹಣ್ಣಿನ ಪಾನೀಯವನ್ನು ಸೇವಿಸುವ ರೂಢಿ ಒಳ್ಳೆಯದಾಗಿದೆ.

ಇದರಲ್ಲಿರುವ ಲವಣಾಂಶ, ಪೋಟಾಶಿಯಂ ಹಾಗೂ ವಿಟಮಿನ್ ಸಿ ಹೃದಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸಹಕಾರಿ. ಹಣ್ಣಿನ ನಿಯಮಿತ ಸೇವೆಯಿಂದ ಹೃದಯಕ್ಕೆ ಸಂಬಂಧಿಸಿದಂತಹ ಯಾವುದೇ ಖಾಯಿಲೆಗಳು ಬರುವ ಅಪಾಯ ಕಡಿಮೆ. ಮೂತ್ರಕೋಶದಲ್ಲಿನ ಹರಳುಗಳ ನಿವಾರಣೆಗೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಗೊಳಿಸುವ ಶಕ್ತಿ ಕಿತ್ತಳೆ ರಸಕ್ಕಿದೆ.

ಕಿತ್ತಳೆ ರಸದಲ್ಲಿರುವ ಸಿಟ್ರಸ್ ಆಮ್ಲವನ್ನು ಸೌಂದರ್ಯಕಾರಕವನ್ನಾಗಿ ಕೂಡ ಬಳಸಬಹುದು. ಕಿತ್ತಳೆ ಹಣ್ಣು ಮತ್ತು ಅದರ ಸಿಪ್ಪೆಯನ್ನು ಹೆಚ್ಚಿನ ಫೇಸ್ ಪ್ಯಾಕ್‍ಗಳನ್ನು ಮಾಡಲು ಬಳಸಲಾಗುತ್ತದೆ. ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಕೂದಲಿಗೂ ಇದರ ಪ್ರಯೋಜನಗಳನ್ನು ಬಳಸಿಕೊಳ್ಳಿ. ಹಣ್ಣು, ರಸ ಅಥವಾ ಸಿಪ್ಪೆಯನ್ನು ಇದಕ್ಕಾಗಿ ಬಳಸಬಹುದು.

ಇದರ ಸಿಪ್ಪೆಯನ್ನು ಬಿಸಿಲಲ್ಲಿ ಒಣಗಿಸಿ ತದನಂತರ ಹುಡಿ ಮಾಡಿಟ್ಟುಕೊಳ್ಳಬಹುದು. ಸಿಟ್ರಸ್ ಆಮ್ಲವನ್ನು ಯಥೇಚ್ಛವಾಗಿ ತನ್ನೊಳಗೆ ಹುದುಗಿಸಿಕೊಂಡಿರುವ ಕಿತ್ತಳೆ ಕೂದಲಿಗೆ ಬೇಕಾದ ಪೋಷ್ಟಿಕಾಂಶಗಳನ್ನು ಕೂಡ ಹೊಂದಿದೆ. ಇದು ಕೂದಲನ್ನು ಬಲಪಡಿಸುವುದರೊಂದಿಗೆ ಆರೋಗ್ಯಪೂರ್ಣವಾಗಿಸುತ್ತದೆ. ಕಿತ್ತಳೆಯಿಂದ ಕೂದಲಿಗೆ ಹಲವಾರು ಪ್ರಯೋಜನಗಳಿವೆ. ಅದನ್ನು ಹಾಗೆಯೇ ತಿನ್ನುವುದು ಅಥವಾ ಹಚ್ಚಿಕೊಳ್ಳುವುದು ಸಂಪೂರ್ಣ ದೇಹಕ್ಕೆ ಒಳಿತನ್ನು ಉಂಟು ಮಾಡುತ್ತದೆ.

ಅತ್ಯುತ್ತಮವಾದ ಆಂಟಿಆಕ್ಸಿಡೆಂಟ್ ಗುಣ ಹೊಂದಿರುವ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತಾ, ಸುಕ್ಕುಗಟ್ಟುವುದನ್ನು ತಡೆಗಟ್ಟುತ್ತದೆ. ಎಲ್ಲ ವಯಸ್ಸಿನವರಿಗೂ ಸಮಾನ ಪ್ರಮಾಣದ ಆರೋಗ್ಯಕರ ಅಂಶಗಳನ್ನು ಕಿತ್ತಳೆಹಣ್ಣು ಹೊಂದಿದೆ.

LEAVE A REPLY

Please enter your comment!
Please enter your name here