ಪುರಷರು ಇಲ್ಲದೆ ಇರಲು ಸಾಧ್ಯನಾ ಹೌದು ಇದು ನಿಜಕ್ಕೂ ನಮ್ಮನೂ ನಿಬ್ಬೆರಗೊಳಿಸುವ ಸ್ಟೋರಿ. ಯಾವುದೇ ಒಂದು ಕುಟುಂಬ ಅಥವಾ ಒಂದು ಊರು ಅಂದ್ಮೇಲೆ ಅಲ್ಲಿ ಪುರುಷ ಇರಲೇಬೇಕು. ಆದರೆ ಈ ಗ್ರಾಮದಲ್ಲಿ ಪುರುಷ ಅನ್ನೋ ಒಬ್ಬ ಮಾನವನು ನಿಮಗೆ ಕಾಣಸಿಗಲ್ಲ.

ಕೀನ್ಯಾದ ಅಮೋಜಾ ಗ್ರಾಮ, ಇದು ಮಹಿಳೆಯರ ಒಂದು ಅದ್ಬುತ ಗ್ರಾಮ ಯಾಕೆ ಅಂದ್ರೆ ಇಲ್ಲಿ ಮಹಿಳೆಯರೇ ಇರೋದು ಇಲ್ಲಿ ಒಬ್ಬ ಪುರುಷನು ಇಲ್ಲ.
ಮಹಿಳೆಯರು ಹಾಗೂ ಹುಡುಗಿಯರಿಗೆ ಸ್ವರ್ಗ. ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಆದರೆ ಈ ಗ್ರಾಮಕ್ಕೆ ಬರುವ ಹುಡುಗಿಯರು ಅಥವಾ ಹೆಂಗಸರು ನರಕ ಯಾತನೆ ಅನುಭವಿಸಿ ಬಂದಿದ್ದಾರೆ.

1990ರಲ್ಲಿ ಈ ಗ್ರಾಮವನ್ನು ರಿಬಾಕಾ ಲೋಲೋಸೊಲಿ ನಿರ್ಮಿಸಿದ್ದಾರೆ. ಒಂದಲ್ಲ ಒಂದು ಚಿತ್ರಹಿಂಸೆ, ಹಲವು ಕಷ್ಟಗಳನ್ನೂ ನೋಡಿ ತುಂಬ ಮನ ನೊಂದು ಬರುವ ಮಹಿಳೆಯರೇ ಹೆಚ್ಚು. ಬಾಲ್ಯ ವಿವಾಹ, ಅತ್ಯಾಚಾರ, ಲೈಂಗಿಕ ಹಿಂಸೆ ಅಥವಾ ಇನ್ನಾವುದೋ ಸಮಸ್ಯೆಯಿಂದ ಮನೆ ಬಿಟ್ಟ ಬಂದ ಮಹಿಳೆಯರು ಈ ಗ್ರಾಮದಲ್ಲಿ ವಾಸವಾಗಿದ್ದಾರೆ.

ಆದರೆ ಇಲ್ಲಿ ಇರುವ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಪುರುಷನು ಇಲ್ಲೆದೆ ಬದುಕಬಹುದು ಎನ್ನುವುದನ್ನು ತೋರಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಗೃಹ ಕೈಗಾರಿಕೆ ನಡೆಸಿ ಮಹಿಳೆಯರು ಹೊಟ್ಟೆ ತುಂಬಿಕೊಳ್ಳುತ್ತಾರೆ. ಗ್ರಾಮದಲ್ಲಿ ಸುಮಾರು 200 ಮಕ್ಕಳಿವೆ. ಮಕ್ಕಳಿಗಾಗಿ ಶಾಲೆ ಸೌಲಭ್ಯ ಇಲ್ಲಿದೆ. ಜೊತೆಗೆ ಕ್ಲಿನಿಕ್ ಕೂಡ ಇದೆ. ಪುರುಷರಿಲ್ಲದ ಈ ಗ್ರಾಮದಲ್ಲಿ ಮಹಿಳೆಯರು ಖುಷಿಯಾಗಿದ್ದಾರೆ.

ಈ ಗ್ರಾಮಕ್ಕೆ ಮೊದಲು ಬಂದಿದ್ದು ಕೇವಲ ೧೫ ಮಹಿಳೆಯರು ಆದರೆ ಇಂದು ಇಲ್ಲಿ ಸುಮಾರು ಮಹಿಳೆಯರು ವಾಸವಾಗಿದ್ದಾರೆ. ಇಲ್ಲಿ ಎಲ್ಲಾರು ಒಂದೇ ಕುಟುಂಬದಂತೆ ಇದ್ದು. ಹಬ್ಬ ಮತ್ತು ಹಲುವು ಕಾರ್ಯಕ್ರಮಗಳನ್ನು ಆಚರಿಸಿಕೊಂಡು ತುಂಬಾನೇ ಸಂತೋಷ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here