ನಿಂಬೆರಸವನ್ನು ಚೆನ್ನಾಗಿ ತಲೆಗೆ ತಿಕ್ಕಿ ಅರ್ಧ ಗಂಟೆಯ ನಂತರ ತನೀರಿನಿಂದ ಸ್ನಾನ ಮಾಡಿ ಇಡೀ ಕ್ರಮವನ್ನು ಒಂದು ವಾರ ಅನುಸರಿಸುತ್ತಿದ್ದಾರೆ, ಕೂದಲು ಉದುರುವುದು ನಿಲ್ಲುವುದು.

ಸುಮಾರು ನೂರಾಹತ್ತು ಗ್ರಾಂ ಕೊಬ್ಬರಿಎಣ್ಣೆಗೆ ಒಂದು ಚಮಚ ನಿಂಬೆ ರಸ ಹಾಕಿ ನಂತರ ಅಷ್ಟೇ ಪ್ರಮಾಣದ ಸುಣ್ಣದ ತಿಳಿಯೊಂದಿಗೆ ಮಿಶ್ರ ಮಾಡಿ ಕೂದಲಿಗೆ ಹಚ್ಚುತ್ತಿದ್ದರೆ ಕೂದಲು ಉದರುವುದು ನಿಲ್ಲುವುದು, ಹಾಗು ಕೂದಲು ಉದ್ದವಾಗಿ ಬೆಳೆಯುವುದು ಮತ್ತು ಕೂದಲಿನ ಕಾಂತಿ ಅಧಿಕಗೊಳ್ಳುವುದು.

ಸ್ತ್ರೀಯರು ಸ್ನಾನ ಮಾಡುವಾಗ ಗಲ್ಲ ಮತ್ತು ಕೆನ್ನೆಗೆ ಅರಿಶಿನ ಪುಡಿಯನ್ನು ಹಚ್ಚಿಕೊಂಡು ಸ್ನಾನ ಮಾಡುವ ಹವ್ಯಾಸ ಇಟ್ಟುಕೊಂಡರೆ ಅಲ್ಲಿ ಕೂದಲು ಬೆಳೆಯುವ ಸಂಧರ್ಭವಿರುವುದಿಲ್ಲ.

ವಿಲ್ಯೆದೆಲೆಯನ್ನು ಅರೆದು ಕೊಬ್ಬರಿಯೆಣ್ಣೆಯಲ್ಲಿ ಕಲಿಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ನಿಂತುಹೋಗುತ್ತದೆ.

ಪ್ರತಿದಿನವೂ ತಲೆಗೆ ತಾನೀರು ಸ್ನಾನ ಮಾಡುತ್ತಿದ್ದಾರೆ ಕೂದಲು ಉದುರುವುದು ನಿಂತುಹೋಗಿ ಕೂದಲು ಸೊಂಪಾಗಿ ಬೆಳೆಯಲು ಪ್ರಾರಂಭಿಸುತ್ತದೆ.

ಬಾಲನೆರೆಯನ್ನು ತಡೆಯಲು ಸ್ನಾನ ಮಾಡುವಾಗ ತಲೆಗೆ ಸೋಪು ಹಚ್ಚುವುದನ್ನು ಆದಷ್ಟು ತಡೆಗಟ್ಟಿ, ಸೋಪಿನ ಬದಲು ಹೆಸರು ಹಿಟ್ಟನ್ನು ಬಳಸುವುದು ಉತ್ತಮ.

ಕೂದಲಿನ ಬೆಲೆ ಕೂದಲನ್ನು ಕಳೆದುಕೊಂಡವರಿಗೆ ಮಾತ್ರ ತಿಳಿದಿರುತ್ತದೆ, ಕೂದಲನ್ನು ಕಳೆದುಕೊಳ್ಳುವ ಮುನ್ನ ಪ್ರತಿನಿತ್ಯ ನಿಶ್ಚಿತೆಯಿಂದ ೭ ರಿಂದ ೮ ತಾಸು ನಿದ್ರಿಸಿದರೆ ಕೂದಲು ಉದುರುವ=ಉದನ್ನು ತದೇಬಹುದು ಹಾಗು ಸದಾ ಚಿಂತಿಸುವುದನ್ನು ಬಿಟ್ಟು ನೆಮ್ಮದಿಯಾಗಿ ಇರಬೇಕು, ತರಕಾರಿ ಹಣ್ಣು ಹಂಪಲುಗಳನ್ನು ಸಮತೋಲನವಾಗಿ ಸೇವಿಸತಕ್ಕದ್ದು.

LEAVE A REPLY

Please enter your comment!
Please enter your name here