ಇತ್ತೀಚಿನ ನಮ್ಮ ಜಗತ್ತಿನಲ್ಲಿ ಅವರ ಬೇಳೆ ಬೇಯಿಸಿಕೊಳ್ಳಲು ಜನ ಯೋಚಿಸುತ್ತಾರೆ ಹೊರತು ಮತ್ತೊಬ್ಬರಿಗೆ ಯಾವ ವಿಷಯದಲ್ಲೂ ಸಹಾಯಮಾಡುವುದಿಲ್ಲ, ಇನ್ನೊಬ್ಬರ ಕಷ್ಟ ಕಣ್ಣಿಗೆ ಕಂಡರೂ ಕಾಣದಂತೆ ಓಡಾಡುವ ಜನರೇ ಹೆಚ್ಚು ಅಂತದರಲ್ಲಿ ಇಲ್ಲೊಬ್ಬ ವ್ಯಕ್ತಿ ಉಚಿತವಾಗಿ ರೋಗಿಗಳಿಗೆ ಸಹಾಯ ಮಾಡುತ್ತಾರೆ ಎಂದರೆ ಇವರು ನಿಜವಾಗಲೂ ಗ್ರೇಟ್.

ಮಂಜುನಾಥ್ ನಿಂಗಪ್ಪ ಪೂಜಾರಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಕಚೇರಿಯಲ್ಲಿ ಡ್ಯೂಟಿ, ಸಂಜೆ 6ರ ನಂತರ ಓಲಾ ಆಟೋ ಆಂಬ್ಯುಲೆನ್ಸ್ ಓಡಿಸ್ತಾರೆ. ಮಂಜುನಾಥ, ಪ್ರತಿದಿನ ಸಂಜೆ 6 ರಿಂದ ಬೆಳಗ್ಗೆ 9 ಗಂಟೆಯವರೆಗೂ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆ ತಲುಪಿಸುವ ಕೆಲಸ ಮಾಡ್ತಿದ್ದಾರೆ.

ತುರ್ತು ಸಂದರ್ಭದಲ್ಲಿ ರೋಗಿಗಳ ಕರೆಗೆ ಓಡುತ್ತಾರೆ. ಇವರು ರಾತ್ರಿ ಎಷ್ಟೊತ್ತಿಗೆ ಕರೆದ್ರೂ ಆಟೋ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ತಲುಪಿಸಲು ನಿರಾಕರಿಸುವುದಿಲ್ಲ. ಅದು ಕೂಡ ಉಚಿತವಾಗಿ ಅನ್ನೋದು ವಿಶೇಷ. ಅಷ್ಟೇ ಅಲ್ಲ ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಆಶ್ರಯ ಫೌಂಡೇಶನ್ ಗೆ ದೇಣಿಗೆಯಾಗಿ ನೀಡುತ್ತಾರೆ.

ಈ ಮೂಲಕ ಸಮಾಜಕ್ಕೆ ಅಲ್ಪ ಕೊಡುಗೆಯನ್ನಾದ್ರೂ ಕೊಡುತ್ತಿದ್ದೇನಲ್ಲ ಎಂಬ ಸಮಾಧಾನ ಅವರಿಗೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕನಿಷ್ಟ ಸಹಾಯ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಪುಣ ಎಂದುಕೊಳ್ತಾರೆ. ನಿಜಕ್ಕೂ ಇವರ ಸಮಾಜ ಸೇವೆ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ…. ಇವರಿಗೆ ನಮ್ಮದೊಂದು ಸಲಾಂ…

LEAVE A REPLY

Please enter your comment!
Please enter your name here