ಇಷ್ಟು ದಿನ ಮೈಸೂರಿನಲ್ಲಿ ಘರ್ಜಿಸಿದ್ದ ಕರ್ನಾಟಕ ಸಿಂಗಂ ಖ್ಯಾತಿಯ ಸೂಪರ್ ಕಾಪ್ ರವಿ ಚೆನ್ನಣ್ಣನವರ್ ರವರು, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ 2 ವಾರಗಳಲ್ಲೇ ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕ್ತಿರೋದು ಮತ್ತೊಂದು ವಿಶೇಷ.
ಸೂಪರ್ ಕಾಪ್ ರವಿ ಚೆನ್ನಣ್ಣನವರ್ ರವರು ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗ್ಗೆಯಿಂದ ರಾತ್ರಿ 2 ಗಂಟೆವರೆಗೆ ಸಿಟಿ ರೌಂಡ್ಸ್ನಲ್ಲಿ ಒಬ್ಬೊಂಟಿಗರಾಗಿ ಗಸ್ತು ನಡೆಸ್ತಿದ್ದಾರೆ. ಬ್ಯಾಟರಾಯನಪುರ, ಜ್ಞಾನಭಾರತಿ, ಕೆಂಗೇರಿ, ಕಾಮಾಕ್ಷಿಪಾಳ್ಯ ಇತರೆ ಸ್ಟೇಷನ್ಗಳ ವ್ಯಾಪ್ತಿಯಲ್ಲಿ ರೌಡಿಗಳನ್ನು ಕರೆಸಿ ವಾರ್ನಿಂಗ್ ಕೊಟ್ಟಿರುವ ಚೆನ್ನಣ್ಣನವರ್, ರೌಡಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಇಷ್ಟಲ್ಲದೆ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ವೇಶ್ಯಾವಾಟಿಕೆಯನ್ನು ನಿಯಂತ್ರಣ ತರುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ..
ಪಶ್ಚಿಮ ವಿಭಾಗದ ಡಿಸಿಪಿಯಾದ ರವಿ ಚೆನ್ನಣ್ಣನವರ್ ರವರು ಡಬಲ್ ಮೀಟರ್ ಅಲ್ಲಿ ಸುಲಿಗೆ ಮಾಡಿಟ್ಟಿರುವ ಆಟೋದವರನ್ನು ಸ್ಟೇಷನ್ ಗೆ ಕರಿಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಸುದ್ದಿಯಾಗಿದೆ.
ರಾತ್ರಿಯೆಲ್ಲ ತಾವೇ ಸ್ವತಃ ಸಿಟಿ ರೌಂಡ್ಸ್ ಹಾಕಿ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ತೋರಿಸುತ್ತಿರುವುದು, ಜನ ಸಾಮಾನ್ಯರಲ್ಲಿ ಖುಷಿ ಮೂಡಿಸಿದ್ದು ರೌಡಿ ಗಳಿಗೆ ನಡುಕ ಹುಟ್ಟಿಸಿದೆ.
Hadsuff