ನಿಮ್ಮ ಉತ್ತಮ ಆರೋಗ್ಯಕ್ಕೆ ಗೋದಿ ಹಲ್ವಾ ಸಹಕಾರಿಯಾಗಿದೆ. ಮನೆಯಲ್ಲಿ ಹಲವು ರೀತಿಯ ಹಲ್ವಗಳನ್ನು ತರಿಸುತ್ತೀರಾ ಬಹುದು ಆದರೆ ಗೋದಿ ಹಲ್ವಾ ಹೇಗೆ ತಯಾರಿಸ ಬೇಕೆಂದು ತಿಳಿದಿಲ್ಲವೆಂದರೆ ಈ ವಿಧಾನದ ಮೂಲಕ ಮಾಡಿ ನೋಡಿ. ಸುಲಭವಾಗಿ ಮನೆಯಲ್ಲೆ ತಯಾರಿಸಬಹುದು..

ತಯಾರಿಸಲು ಬೇಕಾಗುವ ಪದಾರ್ಥಗಳು…

ಗೋಧಿ ಹಿಟ್ಟು – 1 ಬಟ್ಟಲು

ತುಪ್ಪ – ಅರ್ಧ ಬಟ್ಟಲು

ಸಕ್ಕರೆ – 1 ಬಟ್ಟಲು

ನೀರು – ಸ್ವಲ್ಪ

ಏಲಕ್ಕಿ ಪುಡಿ – ಅರ್ಧ ಚಮಚ

ದ್ರಾಕ್ಷಿ, ಗೋಡಂಬಿ – ಸ್ವಲ್ಪ

ಲವಂಗ ಪುಡಿ – ಚಿಟಿಕೆ

ಇವುಗಳ ವಿಧಾನದ ಮೂಲಕ ನೀವು ಬೇಕಾದರೆ ಜಾಸ್ತಿ ಕೂಡ ಮಾಡಿಕೊಳ್ಳ ಬಹುದು

ಗೋದಿ ಹಲ್ವಾ ತಯಾರಿಸುವ ವಿಧಾನ ..

೧ ಮೊದಲನೆಯದಾಗಿ ಒಲೆಯ ಮೇಲೆ ಬಾಣಲೆ ಇಟ್ಟು 2 ಚಮಚ ತುಪ್ಪ ಹಾಕಿಬೇಕು ನಂತರ ಗೋಧಿ ಹಿಟ್ಟನ್ನು ಕೆಂಪಗೆ ಹುರಿದುಕೊಳ್ಳಬೇಕು.

೨ ಪಾಕವನ್ನು ತಯಾರು ಮಾಡಿಕೊಳ್ಳಬೇಕು.ಸಕ್ಕರೆ ಹಾಗು ನೀರು ಹಾಕಿ.

೩ ಏಲಕ್ಕಿ ಪುಡಿ, ಲವಂಗ ಪುಡಿಯನ್ನು ಹುರಿದ ಗೋಧಿ ಹಿಟ್ಟಿಗೆಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

೪ ಹುರಿದ ಗೋಧಿ ಹಿಟ್ಟನ್ನು ಪಾಕ ಬಿಸಿಯಿರುವಾಗಲೇ ಇದಕ್ಕೆ ಹಾಕಿ ಉಂಡೆಯಾಗದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು.

೫ ಮಿಶ್ರಣವನ್ನು ಮಾಡಿಕೊಂಡ ನಂತರ ಸರಿಯಾಗಿ ಹದವಾಗಿ ಬಂದ ನಂತರ ಇದಕ್ಕೆ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ, ಗೋಡಂಬಿಯನ್ನು ಹಾಕಿ ಅಲಂಕರಿಸಿದರೆ ಗೋಧಿ ಹಲ್ವತಿನ್ನಲು ತಯಾರಾಗಿರುತ್ತದೆ.

LEAVE A REPLY

Please enter your comment!
Please enter your name here