ಇವತ್ತಿನ ಎಷ್ಟೋ ಹಳ್ಳಿಗಳಲ್ಲಿ ಇಂದಿಗೂ ಯಾವುದೇ ಸಂಪರ್ಕ ಸೇವೆಗಳು ಇಲ್ಲ. ಇಂತಹ ಹಳ್ಳಿಗಳಲ್ಲಿ ರೋಗಿಗಳಿಗೆ ಆಸ್ಪತ್ರೆಗಳಿಗೆ ಹೋಗಲು ಯಾವುದೇ ಆಂಬುಲೆನ್ಸ್ ವ್ಯವಸ್ಥೆ ಇಲ್ಲ. ಇಂತಹ ಸಂದರ್ಭದಲ್ಲಿ ಎಷ್ಟೋ ರೋಗಿಗಳು ಮೃತ್ತಪಟ್ಟಿದ್ದಾರೆ. ಮೃತಪಟ್ಟ ರೋಗಿಗಳ ಪೈಕಿ ಕರೀಮುಲ್ ಹಕ್ ಅವರ ತಾಯಿ ಕೂಡ ಒಬ್ಬರಾಗಿದ್ದರು.

ಕರೀಮುಲ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಆಸ್ಪತ್ರೆಗೆ ಹೋಗಲು ಯಾವುದೇ ಆಂಬುಲೆನ್ಸ್ ಸಿಗುವುದಿಲ್ಲ ಮತ್ತು ಯಾರು ಸಹ ಇವರ ಸಹಾಯಕ್ಕೆ ಬರುವುದಿಲ್ಲ ಇಂತಹ ಸಮಯದಲ್ಲಿ ಕರೀಮುಲ್ ತಾಯಿ ಸಾಯುತ್ತಾಳೆ. ಇದರಿಂದ ಮನನೊಂದ ಕರೀಮುಲ್ ಮಾಡಿದ್ದು ಒಂದೇ ಶಪಥ ಇನ್ನು ಮುಂದೆ ನಮ್ಮ ಗ್ರಾಮದಲ್ಲಿ ಮತ್ತು ಸುತ್ತಮುತ್ತ ಹಳ್ಳಿಯಲ್ಲಿ ಯಾರು ಕೂಡ ಆಂಬುಲೆನ್ಸ್ ಸೇವೆ ಸಿಗದೇ ಸಾಯಬಾರದು ಅನ್ನೋ ನಿರ್ಧಾರ ಮಾಡಿದ ಕರೀಮುಲ್ ಹಕ್.

ಕರೀಮುಲ್ ಯೋಚನೆ ಮಾಡಿ ತನ್ನ ಒಂದು ಬೈಕ್ ಸಹಾಯಂದಿನ ಅದರಲ್ಲಿ ಹಲವುರೀತಿಯ ಬದಲಾವಣೆ ಮಾಡಿಕೊಂಡು ಆಂಬುಲೆನ್ಸ್ ರೀತಿ ತನ್ನ ಬೈಕ್ ಮಾರ್ಪಾಡು ಮಾಡಿಕೊಂಡು ಹಲುವು ರೋಗಿಗಳನ್ನು. ತನ್ನ ಬೈಕ್ ನಲ್ಲಿ ಆಸ್ಪತ್ರೆಗೆ ಸಾಗಿಸಲು ಮುಂದಾದ ಕರೀಮುಲ್ ಹಲವು ರೋಗಿಗಳ ಜೀವ ಉಳಿಸಿದ.

ಸುತ್ತಮುತ್ತಲಿನ 20 ಹಳ್ಳಿಗಳಲ್ಲಿ ಜನರನ್ನು ಸಂರಕ್ಷಕನಾಗಿದ್ದಾನೆ, ಅಲ್ಲಿ ಯಾವುದೇ ಕಾಂಕ್ರೀಟ್ ರಸ್ತೆಗಳು, ವಿದ್ಯುತ್, ಮೊಬೈಲ್ ಟವರ್ಗಳು ಮತ್ತು ಇತರ ಮೂಲ ಸೌಕರ್ಯಗಳಿಲ್ಲ. ಕಾರ್ಮಿಕರು ರೈತರು. ಕಾಣುಬರುತಾರೆ. ಆದ್ರೆ ಇಲ್ಲಿ ಯಾವುದೇ ಆಂಬುಲೆನ್ಸ್ ಸಂಪರ್ಕ ಸಿಗುವುದಿಲ್ಲ. ಆಸ್ಪತ್ರೆಗೆ ಹೋಗಬೇಕು ಅಂದ್ರೆ ೪೫ ಕಿಲೋಮೀಟರ್ ಸಾಗಬೇಕು ಇಂತಹ ಸಮಯದಲ್ಲಿ ಕರೀಮುಲ್ ಅವರು ತಮ್ಮ ಬೈಕ್ ನಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗುತ್ತರೆ.

ಆಂಬ್ಯುಲೆನ್ಸ್ ಸೇವೆ ಮಾತ್ರವಲ್ಲದೆ ಸ್ಥಳೀಯ ವೈದ್ಯರಿಂದ ಕಲಿತುಕೊಂಡ ನಂತರ ಕರಿಮುಲ್ ಹಳ್ಳಿಗರಿಗೆ ಮೂಲಭೂತ ಮತ್ತು ಪ್ರಥಮ ಚಿಕಿತ್ಸೆ ನೀಡುತ್ತಾರೆ. ಮಧ್ಯಂತರಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾರೆ. ಇವರು ದುಡಿದ ಹಣಕ್ಕಿಂತ ಹೆಚ್ಚು ಖರ್ಚು ಮಾಡಿ ಕೆಲ ರೋಗಿಗಳಿಗೆ ಸಹಾಯ ಮಾಡುತ್ತಾರೆ.

LEAVE A REPLY

Please enter your comment!
Please enter your name here