ನಾವು ನೀವು ಕೇಳಿರುವ ಮಾನವ ಅನ್ನೋ ಪ್ರಾಣಿ ಸಾಮಾನ್ಯವಾಗಿ ಸ್ವಚ್ಛತೆಯನ್ನ ತನ್ನ ಒಂದು ಸುತ್ತ ಮುತ್ತ ಜಾಗ ಮಾತ್ರ ಕ್ಲಿನ್ ಮಾಡಿಕೊಳ್ಳುತ್ತಾನೆ. ಹಾಗೆ ಅವನು ಬೇರೆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳೋದು ಕಮ್ಮಿ ಆದ್ರೆ ಈ ಪ್ರಾಣಿ ಮಾನವನ ಹಾಗೆ ಅಲ್ಲ. ಅದು ತನ್ನ ಶಕ್ತಿಯನ್ನು ಮೀರಿ ಮಾನವನು ಮಾಡದ ಕೆಲಸವನ್ನು ಮಾಡಿದೆ.

ಈ ನಾಯಿ ಮರಿ ಪ್ರತಿದಿನ ೨೦ ರಿಂದ ೩೦ ಬಾಟಲಿಗಳನ್ನು ನದಿಯಿಂದ ಹೊರತೆಗೆಯು ಕೆಲಸವನ್ನು ಮಾಡುತ್ತಿದೆ, ಕಳೆದ 10 ವರ್ಷಗಳಿಂದ ನದಿಯೊಂದರ ತ್ಯಾಜ್ಯವನ್ನು ಸ್ವಚ್ಛ ಮಾಡ್ತಿರೋ ಈ ಗೋಲ್ಡನ್ ರಿಟ್ರೀವರ್ ನಾಯಿ.

ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನಲ್ಲಿರುವ ನದಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನ ತೆಗೆದು ಸ್ವಚ್ಛತೆ ಕಾಪಾಡುತ್ತಿದೆ, ಈ ನಾಯಿ ಕಳೆದ 10 ವರ್ಷಗಳಲ್ಲಿ ನದಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆದಿದೆ. ಎಂದು ಹೇಳಲಾಗಿದೆ ಇದಕ್ಕಾಗಿ ಈ ನಾಯಿಗೆ ಇದರ ಮಾಲೀಕ ತರಬೇತಿ ನೀಡಿದ್ದಾನೆ ಎಂದು ಅಲ್ಲಿನ ಪತ್ರಿಕೆವೊಂದು ವರದಿ ಮಾಡಿದೆ.

ಈ ರೀತಿಯಾಗಿ ಈ ನಾಯಿ ಮರಿ ಎಲ್ಲೆಡೆ ಪ್ರಸಿದ್ದಿ ಹೊಂದಿದೆ ಮತ್ತು ಎಷ್ಟೋ ಜನ ಈ ಮರಿಯಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಂಡು ಮತ್ತಷ್ಟು ಸುದ್ದಿ ಮಾಡುತ್ತಿದೆ.

LEAVE A REPLY

Please enter your comment!
Please enter your name here