ಇದೇನಪ್ಪ ಇಂತಹ ಸಮಾಚಾರ ಅಂತೀರಾ ಇದು ನಿಜ. ಇವತ್ತಿನ ದಿನಗಳಲ್ಲಿ ಮೊಬೈಲ್ ಅನ್ನೋದು ಯಾರಿಗೆ ತಾನೇ ಇಷ್ಟ ಇಲ್ಲ. ಅದ್ರಲ್ಲೂ ತನ್ನ ಪ್ರೇಯಸಿ ಅಥವಾ ಗೆಳಯ ಗೆಳತಿಯರಿಗಿಂತ ಮುಖ್ಯವಂತೆ. ಇದನ್ನು ನಾವು ಹೇಳುತ್ತಿಲ್ಲ ಒಂದು ಸಂಶೋಧನಾ ವರದಿ ಬಹಿರಂಗ ಪಡಿಸಿದೆ.

ಒಂದು ಸರ್ವೇ ಸಂಸ್ಥೆ ಆನ್ ಲೈನ್ ಮೂಲಕ ಒಂದು ಸರ್ವೇ ಮಾಡಿದೆ. ಏಳು ರಾಷ್ಟ್ರಗಳ ಸುಮಾರು 7 ಸಾವಿರ ಮಂದಿ ಸ್ಮಾರ್ಟ್ ಫೋನ್ ಬಳಕೆದಾರರ ಆನ್ ಲೈನ್ ಸರ್ವೇ ಮಾಡಿದ್ದು, ಈ ಪೈಕಿ ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರು ತಮಗೆ ನಮ್ಮ ಗೆಳೆಯ ಅಥವಾ ಗೆಳತಿ ಮತ್ತು ಸಂಗಾತಿಗಿಂತ ಸ್ಮಾರ್ಟ್ ಫೋನೇ ಮುಖ್ಯ ಎಂದಿದ್ದಾರೆ.

ಈ ಸರ್ವೆಯಲ್ಲಿ ಶೇಕಡಾ 74 ಮಂದಿ ಭಾರತೀಯರು ಹಾಗೂ ಶೇಕಡಾ. 70 ಮಂದಿ ಚೀನಿಯರು ಭಾಗವಹಿಸಿದ್ದರು ಇದರಲ್ಲಿ ಬಂದಿರುವ ಮಾಹಿತಿ ಪ್ರಕಾರ. ರಾತ್ರಿ ಮಲಗುವ ವೇಳೆ ಮೊಬೈಲ್ ನ್ನು ತಾನು ಮಲುಗುವ ಹತ್ತಿರ ಮತ್ತು ತಮ್ಮ ಕೈಗೆ ಸಿಗುವ ಹಾಗೆ ಹಿಟ್ಟುಕೊಳ್ಳುತ್ತಾರೆ. ಮತ್ತು ಇನ್ನು ಕೆಲವು ಮಂದಿ ತಾವು ಮೊಬೈಲ್ ಗಳನ್ನೂ ಹಿಡಿದುಕೊಂಡೆ ಟಾಯ್ಲೆಟ್ ಗೆ ಶೇಕಡಾ 57 ಮಂದಿ ಹೋಗುತ್ತಾರೆ.

ಪ್ರತಿ 6 ರಲ್ಲಿ ಒಬ್ಬರು ಸ್ನಾನಕ್ಕೆ ಹೋಗುವಾಗ ತಮ್ಮ ಮೊಬೈಲ್ ತೆಗೆದುಕೊಂಡು ಹೋಗುತ್ತಾರೆ ಎಂದು ವರದಿ ನೀಡಿದೆ.
ಈ ರೀತಿಯಾಗಿ ಒಂದು ಖಾಸಗಿ ಸಂಸ್ಥೆ ವರದಿ ನೀಡಿದೆ. ಇದೆ ರೀತಿ ಆದ್ರೆ ಮುಂದೇನಾಪ್ಪ ಅನ್ನೋದು ಕೆಲವರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here