ತಣ್ಣೀರ ಮಹತ್ವ ಮನುಷ್ಯನ ದೇಹಕ್ಕೆ ತುಂಬಾನೆ ಬೇಕಾಗಿರುವಂತದ್ದು, ಪ್ರತಿಯೊಂದಕ್ಕೂ ತಣ್ಣೀರನ್ನು ಉಪಯೋಗಿಸೋದೇ ಹೆಚ್ಚು. ನೈಸರ್ಗಿಕವಾಗಿ ಸಿಗುವಂತ ತಣ್ಣೀರು ಮನುಷ್ಯನಿಗೆ ಅದ್ಬುತ ರೀತಿಯಲ್ಲಿ ಸಹಕಾರಿ ಯಾಗಿದೆ, ಸರ್ವ ರೋಗಕ್ಕೊ ನೀರು ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ. ತಣ್ಣೀರ ಬಗ್ಗೆ ಹೇಳಲು ತುಂಬಾನೆ ಇದೆ ಎನ್ನಬಹುದು.

ತಣ್ಣೀರ ಉಪಯೋಗಗಳು:

೧ ಹೆಚ್ಚಿನ ನೀರು ಕುಡಿಯೋದ್ರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ

೨ ಕಣ್ಣುಗಳ ಆರೋಗ್ಯ ಉತ್ತಮವಾಗಿರಲು ಆಗಾಗ ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳುತ್ತಾ ಇರಬೇಕು.
ಯಾಕೆಂದರೆ ಕಣ್ಣುಗಳಿಗೆ ಆರಾಮವಾಗುತ್ತದೆ ಹಾಗೂ ಕಣ್ಣುಗಳಿಗೆ ಅಂಟಿಕೊಂಡಿದ್ದ ಧೂಳು ಮತ್ತಿತರ ಕಣಗಳ ನಿವಾರಣೆ ಸಾಧ್ಯವಾಗುತ್ತದೆ.

೩ ಸಂದಿವಾತ ಇರುವಂತರು ಹೆಚ್ಚು ಹೆಚ್ಚು ನೀರು ಕುಡಿಯೋದ್ರಿಂದ ಇತರ ಕಲ್ಮಶಗಳೊಂದಿಗೆ ಯೂರಿಕ್ ಆಮ್ಲವೂ ನೀರಿನೊಂದಿಗೆ ಕರಗಿ ಹೊರಹೋಗುತ್ತದೆ.

೪ ಮೂತ್ರನಾಳದ ಸೋಂಕು ನಿವಾರಿಸುತ್ತದೆ ಸಾಮಾನ್ಯವಾಗಿ ಕಾಡುವ ಉರಿಮೂತ್ರಕ್ಕೆ ಮೂತ್ರನಾಳದ ಸೋಂಕು ಪ್ರಮುಖ ಕಾರಣ. ಆದ್ದರಿಂದ ತಣ್ಣೀರನ್ನು ಹೆಚ್ಚಿನದಾಗಿ ಕುಡಿಯುವ ಅಭ್ಯಾಸ ಮಾಡಬೇಕು.

೫ ಹೆಚ್ಚಿನ ತಣ್ಣೀರಿನ ಲಭ್ಯತೆಯಿಂದ ಮೂತ್ರವೂ ಹೆಚ್ಚಾಗಿ ಮೂತ್ರನಾಳದಲ್ಲಿ ಸಂಗ್ರಹವಾಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ.

೬ ಹೊಟ್ಟೆಯುರಿಯಿಂದ ಎದೆಯ ಭಾಗದಲ್ಲಿ ಉರಿ, ಹುಳಿತೇಗು ಮೊದಲಾದ ತೊಂದರೆಗಳು ಎದುರಾಗುತ್ತವೆ. ಈ ತೊಂದರೆ ಇರುವ ವ್ಯಕ್ತಿಗಳು ಪ್ರತಿದಿನ ಬೆಳಿಗ್ಗೆದ್ದ ತಕ್ಷಣವೇ ಒಂದು ಲೋಟ ತಣ್ಣೀರು ಕುಡಿಯುವ ಅಭ್ಯಾಸ ಮೂಡಿಸಿಕೊಂಡರೆ ಎದೆಯುರಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

೭ ಚರ್ಮ ಒಣಗಲು ಒಣಹವೆ ಪ್ರಮುಖ ಕಾರಣ. ಇದರ ಹೊರತಾಗಿ ಬಿಸಿನೀರಿನ ಸ್ನಾನ ಹಾಗೂ ಬಿಸಿನೀರಿನ ಕುಡಿಯುವಿಕೆಯಿಂದಲೂ ಒಣಚರ್ಮ ಉಂಟಾಗುತ್ತದೆ. ಒಣಚರ್ಮಕ್ಕೆ ತಕ್ಷಣವೇ ಸೂಕ್ತ ಆರೈಕೆ ಒದಗಿಸದಿದ್ದಲ್ಲಿ ಸಹಜ ಸೌಂದರ್ಯವನ್ನೇ ಕಸಿದು ಬಿಡಬಹುದು. ಒಣಚರ್ಮಕ್ಕೆ ತಣ್ಣೀರು ಅತ್ಯುತ್ತಮವಾದ ಪರಿಹಾರವಾಗಿದೆ. ಚರ್ಮದಲ್ಲಿ ತುರಿಕೆ, ಪರೆ ಏಳುವುದು ಮೊದಲಾದ ತೊಂದರೆಗಳಿಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಪರಿಹಾರ ಪಡೆದುಕೊಳ್ಳಬಹುದು.

೮ ಪುರುಷರಲ್ಲಿ ವೀರ್ಯಾಣುಗಳು ದೇಹದ ತಾಪಮಾನಕ್ಕಿಂತಲೂ ಸ್ವಲ್ಪ ಕಡಿಮೆ ಇರಬೇಕು. ವಾಹನ ಚಾಲನೆ ಮೊದಲಾದ ಕಾರಣಗಳಿಂದ ಸೂಕ್ತ ತಾಪಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಾಕಷ್ಟು ತಣ್ಣೀರು ಕುಡಿಯುವ ಮೂಲಕ ಸೂಕ್ತ ತಾಪಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಫಲವತ್ತತೆ ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here