ಹೌದು ಪ್ರಸ್ತುತ ದಿನಗಳಲ್ಲಿ ವಿವಿಧ ಕಾರಣಗಳಿಂದ ರಾತ್ರಿಯ ವೇಳೆಯಲ್ಲಿ ತಡವಾಗಿ ಮಲಗುವುದು ಹೆಚ್ಚಿನ ಜನರಲ್ಲಿ ಕಾಣಬಹುದು, ಆದರೆ ಇಂತ ಒಂದು ಸಂಗತಿಯಿಂದ ಅನಾರೋಗ್ಯಕ್ಕೆ ಹಿಡಗುತ್ತೀರ. ಯುವ ಜನತೆ ಹೆಚ್ಚಿನದಾಗಿ ರಾತ್ರಿಯ ವೇಳೆಯಲ್ಲಿ ತಡವಾಗಿ ಮಲುಗುವುದು ಹೆಚ್ಚು ನೀವು ಇಂತಹ ಅಭ್ಯಾಸ ಮಾಡಿಕೊಂಡಿದ್ದರೆ ಖಂಡಿತವಾಗಿಯು ಬಿಟ್ಟು ಬಿಡುವುದು ಒಳ್ಳೆಯದು ಯಾಕೆ ಅಂತೀರಾ ಈ ಮುಂದೆ ನೋಡಿ.

ನೀವು ಮುಂಜಾನೆ ಬೇಗ ಏಳುವ ಅಭ್ಯಾಸ ಮಾಡಿಕೊಂಡರೆ ನೀಮ್ಮ ದೇಹಕ್ಕೆ ಸಿಗುವ ಲಾಭಗಳು ಹಲವಾರು. ಮುಂಜಾನೆ ವಾತಾವರಣ ಶುದ್ಧವಾಗಿರುತ್ತದೆ. ಶುದ್ಧವಾದ ಗಾಳಿ ಸೇವಿಸಿಕೊಂಡು ಯೋಗ, ವ್ಯಾಯಾಮ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ.

ಈ ಸಂದರ್ಭದಲ್ಲಿ ವಾತಾವರಣ ಪ್ರಶಾಂತವಾಗಿರುವುದರಿಂದ ಏಕಾಗ್ರತೆಯೂ ಹೆಚ್ಚುತ್ತದೆ. ಮೆದುಳಿನ ನರಮಂಡಲಕ್ಕೆ ವೇಗವಾಗಿ ರಕ್ತ ಸಂಚಾರವಾಗಿ, ಚುರುಕಾಗಿ ಕೆಲಸ ಮಾಡುವುದಲ್ಲದೆ, ನೆನಪಿನ ಶಕ್ತಿ ಹೆಚ್ಚುತ್ತದೆ.

ಮುಂಜಾನೆಯ ಸೂರ್ಯನ ಕಿರಣ ಬಿದ್ದಾಗ ಮರ ಗಿಡಗಳಿಂದ ಹೊರಹೊಮ್ಮುವ ಆಮ್ಲಜನಕದ ಸೇವನೆ, ನಮ್ಮ ಹೃದಯ, ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ. ಹಾಗಾಗಿಯೇ ನಮ್ಮ ಹಿರಿಯರು ಬೆಳಗ್ಗೆ ಬೇಗನೆ ಏಳುವ ಅಭ್ಯಾಸ ಇಟ್ಟುಕೊಂಡಿದ್ದರು ಆದ್ದರಿಂದ ನಮ್ಮ ಹಿರಿಯರು ಗಟ್ಟಿ ಮುಟ್ಟಾಗಿ ಬದುಕುತ್ತಿದ್ದರು.

ಮುಂಜಾನೆ ಬೇಗನೆ ಎದ್ದು ನೀವು ಬ್ರೇಕ್‌ಫಾಸ್ಟ್‌ ಬೇಗನೆ ಮಾಡಿ ಆರಾಮವಾಗಿ ಅದನ್ನು ಸವಿಯಬಹುದು.  ಬೆಳಗ್ಗಿನ ಉಪಹಾರ ದಿನಪೂರ್ತಿಯ ಎಲ್ಲಾ ಉಪಹಾರಕ್ಕಿಂತ ಅತ್ಯಂತ ಪ್ರಮುಖವಾಗಿ ಸೇವನೆ ಮಾಡಲೇಬೇಕಾದ ಆಹಾರವಾಗಿದೆ. ಆದುದರಿಂದ ಬೆಳಗ್ಗೆ ಬೇಗನೆ ಎದ್ದು ಆರೋಗ್ಯಕರವಾದ ಬ್ರೇಕ್‌ಫಾಸ್ಟ್‌ ತಯಾರಿ ಮಾಡಬಹುದು.

LEAVE A REPLY

Please enter your comment!
Please enter your name here