ತಂದೆ ಮತ್ತು ಮಗಳ ಪ್ರೀತಿ ಅನ್ನುವುದು ತುಂಬ ಅಮೂಲ್ಯವಾದ ಪ್ರೀತಿ ಇಂತಹ ಪ್ರೀತಿ ಎಷ್ಟು ದುಡ್ಡು ಕೊಟ್ಟರು ಸಿಗದು ಇಂತಹ ಪ್ರೀತಿ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ ಅಂತಹ ಪ್ರೀತಿ ತಾನೇ ಮಗಳ ಪ್ರೀತಿ ಇಂತಹ ತಂದೆ ಮಗಳ ಪ್ರೀತಿಯಲ್ಲಿ ಮಗಳು ಯಾಕೆ ತಂದೆಯನ್ನು ಹೆಚ್ಚು ಇಷ್ಟಪಡುತ್ತಾಳೆ ಅನ್ನೋದಕ್ಕೆ ಇಲ್ಲಿ ಕೆಲವೊಂದು ಅಂಶಗಳಿವೆ ನೋಡಿ.

1.ಪ್ರತಿ ತಂದೆಗೆ ತನ್ನ ಮಗಳೇ ಸರ್ವಸ್ವ. ಕೆಲವು ಸರಿ ತನ್ನ ಹೆಂಡತಿಯ ಮೇಲೆ ತೋರಿಸುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು ಮಗಳ ಮೇಲೆ ತೋರಿಸುತ್ತಾನೆ.

2. ಗಂಡಸರಿಗೆ ಮಾತ್ರ ಸಿಗುವ ಒಂದು ದೊಡ್ದ ವರ ಎಂದರೆ ತನ್ನ ಜೀವನದಲ್ಲಿ ಮೂವರು “ಅಮ್ಮಂದಿರನ್ನು” ಪಡೆಯುವುದು.

3. ಜನ್ಮಕೊಟ್ಟ ತಾಯಿ ತನ್ನ, ರಕ್ತ ಹಚ್ಚಿಕೊಂಡ ಸಹೋದರಿ(ಎರಡನೇ ತಾಯಿ), ತನಗೆ ಹುಟ್ಟಿದ ಮಗಳು (ಮೂರನೆಯ ತಾಯಿ),

4. ಪ್ರತಿ ಮಗಳಿಗೆ ತಂದೆ ನಿಜವಾದ ಆತ್ಮೀಯ. ನಂಬಿಕಸ್ಥ ಗೆಳೆಯ. ಆಪತ್ತಿನ ಸಮಯದಲ್ಲಿ ಜೊತೆಗಿರುವ ಜೊತೆಗಾರ.

5. ತಂದೆ ತನ್ನ ಆದಾಯ ಹೆಚ್ಚು ಹಣವನ್ನು ಖರ್ಚು ಮಾಡುವುದು ಮಗಳಿಗಾಗಿಯೇ…!

6. ಎಂತಹ ಸಂದರ್ಭದಲ್ಲೂ ತಂದೆಯೇ ಮಗಳಿಗೆ ರಕ್ಷಣೆ. ರಕ್ಷಣೆ ವಿಷಯದಲ್ಲಿ ತಾಯಿಗಿಂತ ತಂದೆ ಎಚ್ಚರವಹಿಸುತ್ತಾನೆ.

7. ಮಗನ ಮೇಲೆ ತೋರಿಸುವ ಕೋಪಗಿಂತ ಮಗಳ ಮೇಲೆ ಮಗಳ ಮೇಲೆ ತೋರಿಸುವ ಕೋಪ ತುಂಬಾ ಕಡಿಮೆ ಎಂದು ಹೇಳಬಹುದು.

8. ಗಂಡು ಮಕ್ಕಳ ಮೇಲೆ ಕೈ ಮಾಡಿರಬಹುದು. ಆದರೆ ಮಗಳ ಮೇಲೆ ಒಂದು ಏಟೂ ಹಾಕದ ತಂದೆಯರು ಇದ್ದಾರೆ‌.

9. ಮಗಳು ಏನಾದರೂ ಕೇಳಿದರೆ ಇಲ್ಲ ಎನ್ನದ ಒಂದೇ ಒಂದು ಜೀವಿ “ಅಪ್ಪ”

10. ಹೊರಗಡೆ ಹೋದಾಗ ತಡವಾದರೆ ಎಷ್ಟೊತ್ತಾದರೂ ತನಗಾಗಿ ಕಾಯುವವ ತಂದೆಯೊಬ್ಬನೇ.

LEAVE A REPLY

Please enter your comment!
Please enter your name here