ಇತ್ತಿಚೀನ ದಿನಗಳಲ್ಲಿ ಹೆಚ್ಚಿನವರಿಗೆ ದೇಹ ತೂಕ ಕಡಿಮೆ ಮಾಡುವುದೇ ಒಂದು ದೊಡ್ಡ ಚಿಂತೆಯಾಗಿ ಕಾಡುತ್ತಿರುತ್ತದೆ. ತೂಕ ಕಡಿಮೆ ಮಾಡಲು ಹಲವಾರುರಿತಿಯ ಚಿಕಿತ್ಸೆ ಗಳನ್ನ ಪಡೆಯುತ್ತಾರೆ, ಡಯಟ್ ಮಾಡುತ್ತಾರೆ, ಊಟ ಬಿಡುತ್ತಾರೆ, ಹೊರಗಿನ ತಿಂಡಿತಿನಿಸುಗಳನ್ನ ತಿನ್ನುವುದನ್ನು ಬಿಡುತ್ತಾರೆ, ಅಷ್ಟೆಯಾಕೆ ತಾವು ಇಷ್ಟ ಪಡುವ ಆಹಾರ ಪದಾರ್ಥಗಳನ್ನ ಸಹ ದೂರವಿಡುತ್ತಾರೆ. ಆದರೆ ಇದನ್ನೆಲ್ಲ ಬಿಟ್ಟು ತಂಪು ಪಾನೀಯಗಳನ್ನ ಕುಡಿಯಲು ಮುಂದಾಗುತ್ತಾರೆ, ಇದರಿಂದಾಗುವ ಪರಿಣಾಮ ಅಂತಿಂದದ್ದಲ್ಲ.

ಶಾಪಿಂಗ್ ಮಾಲ್ ಗೆ ಹೋದರೆ ರೆಫ್ರಿಜರೇಟರ್ ಒಳಗಿರುವ ಬಣ್ಣ ಬಣ್ಣದ ಜ್ಯೂಸ್ ನಮ್ಮನ್ನು ಆಕರ್ಷಿಸುತ್ತವೆ. ಆದರೆ ಈ ಜ್ಯೂಸ್ ನಿಮ್ಮಲ್ಲಿ ಬೊಜ್ಜು ಬೆಳೆಯಲು ಕಾರಣವಾಗಬಹುದು. ಇದರಲ್ಲಿ ಸುದೀರ್ಘ ಕಾಲ ಬಾಳಿಕೆ ಬರಲು ಹಾಕುವ ರಾಸಾಯನಿಕಗಳು ನಮ್ಮ ದೇಹದಲ್ಲಿ ಬೇಡದ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತವೆ.ಸೋಯಾ ಹಾಲು ಇತರ ರಾಸಾಯನಿಕಗಳಷ್ಟೇ ಆರೋಗ್ಯಕ್ಕೆ ಹಾನಿಕರ.

ಸೋಯಾ ಹಾಲು ನಮ್ಮ ಆರೋಗ್ಯಕ್ಕೆ ಉತ್ತಮ ಎಂದೇ ಪರಿಗಣಿಸಲಾಗುತ್ತದೆ. ಆದರೆ ತುಂಬಾ ಸಲ ಸಂಸ್ಕರಿಸಲ್ಪಟ್ಟ, ಕಳಪೆ ಗುಣಮಟ್ಟದ ಸೋಯಾ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ.

ಕೃತಕವಾಗಿ ಮಾಡಲಾದ ಸಿಹಿ ವಸ್ತುಗಳೂ ಆರೋಗ್ಯಕ್ಕೆ ಹಾನಿಕಾರಕ. ಇದರಲ್ಲಿ ನೈಸರ್ಗಿಕವಲ್ಲದ ರಾಸಾಯನಿಕ ಬಳಸಲಾಗುತ್ತದೆ. ಈ ಕೃತಕ ಸಿಹಿ ನಮ್ಮ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ.

ನೈಸರ್ಗಿಕವಾಗಿ ಸಿಗುವ ಪಾನೀಯಗಳನ್ನ ಸೇವಿಸುವುದರಿಂದ ನಮ್ಮ ಅರೋಗ್ಯ ವೃದ್ಧಿಯಾಗುವುದರ ಜೊತೆಗೆ, ಬೊಜ್ಜು ಸಹ ಬರುವ ಸಾಧ್ಯತೆಗಳು ಕಡಿಮೆ ಇರುತ್ತದೆ.

 

LEAVE A REPLY

Please enter your comment!
Please enter your name here