ಸರ್ಕಾರಿ ನೌಕ್ರಿ ಯಾರಿಗೆ ಬೇಡ ಹೇಳಿ.. ಅದರಲ್ಲೂ ಒಳ್ಳೆಯ ಆಫೀಸರ್ ಲೆವೆಲ್ ಕೆಲ್ಸಾ ಅಂದ್ರೆ ನಾ ಮುಂದು ತಾ ಮುಂದು ಅಂತ ನಮ್ಮ ಜನ ಪರೀಕ್ಷೆ ಕಟ್ಟಿದ್ದೆ, ಪರೀಕ್ಷೆ ಬರೆದಿದ್ದೆ..! ಅಂತಹ ಸಂಧರ್ಭದಲ್ಲೂ ಕೆಲಸ ಸಿಗೋದು ಏನು ತಮಾಷೆ ಮಾತಲ್ಲ ಈಗಿನ ಮೀಸಲಾತಿ ಅದು ಇದು ಅಂತ ಕೆಲಸ ಸಿಗದೇ ಎಷ್ಟೋಜನ ನಿರುದ್ಯೋಗಿಗಳಾಗಿರ್ತಾರೆ..!

ನಾವು ಈವಾಗ ಹೇಳೋಕೆ ಹೊರ್ಟಿರೋದು ಏನಂದ್ರೆ ಬೆಳಗಾವಿ ಜಿಲ್ಲೆ ಕವಟಗೊಪ್ಪ ಗ್ರಾಮದಲ್ಲಿರುವ ಈ ಆಂಜನೇಯನಿಗೆ ನೀವು ಸರ್ಕಾರಿ ನೌಕರಿ ಬೇಕು ಅಂತ ಬೇಡಿಕೊಂಡರೆ ಸಾಕಂತೆ ಸಾಕ್ಷಾತ್ ಹನುಮಂತನೇ ನಿಮಗೆ ಸರ್ಕಾರಿ ನೌಕರಿ ಭಾಗ್ಯ ಕರುಣಿಸುತ್ತಾನಂತೆ..! ಹೀಗಂತ ನಾವು ಹೇಳ್ತಾ ಇಲ್ಲ ಸ್ವಾಮೀ ಇದು ಆ ದೇವಸ್ಥಾನದ ಭಕ್ತಾದಿಗಳೇ ನಮಗೆ ತಿಳಿಸಿರುವುದು..! ಸುಮಾರು ೧೦೦ ವರ್ಷಗಳ ಇತಿಹಾಸ ಇರೋ ಆಂಜನೇಯನ ದೇವಸ್ಥಾನಕ್ಕೆ ನಿತ್ಯ ಭಕ್ತಾದಿಗಳ ಹಿಂಡೇ ಬರುತ್ತಂತೆ, ಹೀಗೆ ಬರೋರಲ್ಲಿ ಮುಕ್ಕಾಲು ಜನ ಸರ್ಕಾರಿ ನೌಕರಿ ಬೇಕು ಅಂತಾ ಕೇಳಿಕೊಳ್ಳೋಕೆ ಅಂತಾನೆ ಬರ್ತಾರಂತೆ.! ಇದುವರೆಗೂ ಬಂದೋರಿಗೆಲ್ಲ ನಮ್ಮ ಹನುಮಪ್ಪ ಸರ್ಕಾರಿ ನೌಕರಿ ಕೊಟ್ಟಿದ್ದಾನೆ ಅಂತಾರೆ ಅಲ್ಲಿಯ ಪೂಜಾರಪ್ಪ..!

ನೋಡಿ ನೀವು ಸರ್ಕಾರಿ ನೌಕರಿ ಆಕಾಂಕ್ಷಿಗಳಾಗಿದ್ದಾರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ, ನಿಮಗೂ ಆಂಜನೇಯ ವರ ಕೊಟ್ರು ಕೊಡಬಹುದು..!

LEAVE A REPLY

Please enter your comment!
Please enter your name here