ಉತ್ತರ ಪ್ರದೇಶ ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕಲು ಉಗ್ರ ಕ್ರಮಗಳನ್ನು ಯೋಗಿ ಆದಿತ್ಯನಾಥ್ ಸರಕಾರ ತೆಗೆದುಕೊಡಿರುವುದು ನಿಮಗೆ ಗೊತ್ತಿದೆ . ಪರಿಣಾಮ ಯೋಗಿ ಅಧಿಕಾರಕ್ಕೆ ಬಂದ ನಂತರ ಕಳೆದ 8 ತಿಂಗಳಲ್ಲಿ 800ಕ್ಕಿಂತ ಹೆಚ್ಚು  ಎನ್ಕೌಂಟರ್ ಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಈ ಎನ್ಕೌಂಟರ್ ಗಳಲ್ಲಿ 15 ಕ್ರಿಮಿನಲ್ ಗಳು ಕೊಲೆಯಾಗಿದ್ದರೆ, 54 ಜನರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಉತ್ತರ ಪ್ರದೇಶ ಡಕಾಯಿತಿ ಮತ್ತು ಸಮಾಜ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿಯಲ್ಲಿ 69 ಡಕಾಯಿತರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ.

ಈಗಿರುವ ಲೇಟೆಸ್ಟ್ ಅಪ್ಡೇಟ್ ಏನು ಎಂದರೆ,  ಉತ್ತರ ಪ್ರದೇಶದ ಎನ್‍ಕೌಂಟರ್ ಗೆ ಹೆದರಿ ರೌಡಿಗಳು ಈಗ ತಮ್ಮ ಜೀವನವನ್ನ ಬದಲಾಯಿಸಿಕೊಳ್ಳುತ್ತಿದ್ದಾರೆ. ಕೆಲವರು ಸೈಕಲ್ ರಿಪೇರಿ ಅಂಗಡಿ, ಇನ್ನೂ ಕೆಲವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರೆ ಮತ್ತೂ ಕೆಲವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ, ಲಿಸಾದಿ ಗೇಟ್ ಪೊಲೀಸ್ ಠಾಣೆಯಲ್ಲಿ ಅಖೀಲ್(35) ನ ರೌಡಿಶೀಟ್ ನಂಬರ್ 58ಎ. ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದರ ಜೊತೆಗೆ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಇತ್ತೀಚೆಗೆ ಕೆಲವು ತಿಂಗಳಿನಿಂದ ಈತ ತನ್ನ ಮನೆಯ ಬಳಿಯೇ ಪುಟ್ಟದೊಂದು ಸೈಕಲ್ ರಿಪೇರಿ ಅಂಗಡಿ ತೆರೆದಿದ್ದು, ಬೆಳಗ್ಗಿನಿಂದ ಸಂಜೆವರೆಗೆ ಅಂಗಡಿಯಲ್ಲಿ ದುಡಿಯುತ್ತಾನೆ.

ಈ ರಾಜ್ಯದ ಕುಖ್ಯಾತ ರೌಡಿಯಾದ  ಉಮರ್ ದರಜ್ ಎಂಬಾತ ಈಗ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾನೆ. ಕೆಲವು ತಿಂಗಳ ಹಿಂದೆ ಜೀವನ ತುಂಬಾ ಕಷ್ಟಕರವಾಗಿತ್ತು. ನನ್ನ ಜೀವ ಉಳಿಸಿಕೊಳ್ಳಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡುತ್ತಿದ್ದೆ. ಆದ್ರೆ ನನ್ನನ್ನು ಎನ್‍ಕೌಂಟರ್ ನಲ್ಲಿ ಸಾಯಿಸುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ ನಂತರ, ಹಣ್ಣಿನ ವ್ಯಾಪಾರ ಮಾಡಲು ನಿರ್ಧರಿಸಿದೆ ಎಂದು ಉಮರ್ ಪತ್ರಿಕೆಯೊಂದಕ್ಕೆ ಹೇಳಿದ್ದಾನೆ.

ಇದೇ ರೀತಿ ಇಮ್ರಾನ್ ಎಂಬಾತ ಈಗ ಗುಜರಿ ಡೀಲರ್ ಆಗಿದ್ದಾನೆ. ರವಿ ಹಾಗೂ ಹೇಮಂತ್ ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಇನ್ನೂ ಅನೇಕ ರೌಡಿಗಳು ಅಪರಾಧಗಳನ್ನ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

LEAVE A REPLY

Please enter your comment!
Please enter your name here